rtgh
Headlines

ಶಾಲೆಗಳಿಗೆ ಬೇಸಿಗೆ ರಜೆ! ಹೊಸ ಶೈಕ್ಷಣಿಕ ವರ್ಷದಲ್ಲಿ ಎಷ್ಟು ದಿನ ರಜೆ ಘೋಷಣೆ

summer school holidays
Share

ಹಲೋ ಸ್ನೇಹಿತರೇ, ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯಿದೆ. ಬೋರ್ಡ್ ಪರೀಕ್ಷೆಗಳು ಮುಗಿದ ತಕ್ಷಣ ಶಾಲೆಗಳಿಗೆ ಬೇಸಿಗೆ ರಜೆ ಪ್ರಾರಂಭವಾಗಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಕ್ಯಾಲೆಂಡರ್ ಪ್ರಕಾರ, ಕೆಲವು ರಾಜ್ಯಗಳಲ್ಲಿ ಏಪ್ರಿಲ್‌ನಿಂದ ಮತ್ತು ಇನ್ನುಳಿದ ರಾಜ್ಯಗಳಲ್ಲಿ ಮೇ ತಿಂಗಳಿನಿಂದ ಬೇಸಿಗೆ ರಜೆ ಆರಂಭವಾಗುತ್ತಿದೆ. ಈ ಅವಧಿಯಲ್ಲಿ, ಕೆಲವು ಸ್ಥಳಗಳಲ್ಲಿ ಒಂದು ತಿಂಗಳು ಮತ್ತು ಕೆಲವೊಮ್ಮೆ ಒಂದೂವರೆ ತಿಂಗಳವರೆಗೆ ಶಾಲೆಗಳು ಮುಚ್ಚಲ್ಪಡುತ್ತವೆ. ಆದರೆ, ಶಿಕ್ಷಕರು ಶಾಲೆಗೆ ಬರಲೇಬೇಕು. ಯಾವ ರಾಜ್ಯದಲ್ಲಿ ಬೇಸಿಗೆ ರಜೆ ಎಷ್ಟು ದಿನ ಇರುತ್ತದೆ ಎಂದು ತಿಳಿಯೋಣ….

summer school holidays
summer school holidays

ಕರ್ನಾಟಕ ಶಾಲಾ ಮಕ್ಕಳಿಗೆ (1ನೇ ತರಗತಿ ಇಂದ 9 ನೇ ತರಗತಿ ವರೆಗೆ) ಪರೀಕ್ಷೆ ಮುಗಿಯುತ್ತಿದ್ದಂತೆ ಒಂದು ಸಂಶಯ, ಕೌತುಕ ಎರಡು ಶುರುವಾಗುತ್ತದೆ. ಅದು ಬೇಸಿಗೆ ರಜೆ ಕುರಿತು. ಅಬ್ಬಾ ಎಷ್ಟು ಬೇಗ ರಜೆ ಶುರುವಾಗುತ್ತೋ ಅನ್ನೋದು. ಆದ್ರೆ ಈ ಬೇಸಿಗೆ ರಜೆ ಬಂತೆಂದರೆ ಕೆಲವು ಪೋಷಕರು ಖುಷಿ ಪಡುವವರು ಇದ್ದಾರೆ, ಕೆಲವರು ಮೂಗು ಮುರಿಯುವವರು ಇದ್ದಾರೆ. ಬಹುಸಂಖ್ಯಾತ ಫೋಷಕರು ತಮ್ಮ ಮಕ್ಕಳ ಜತೆಗೆ ಹೆಚ್ಚು ಸಮಯ ಕಾಲ ಕಳೆಯಬಹುದು, ಅವರೊಂದಿಗೆ ಬೆರೆತು ಆಟವಾಡಿಸುತ್ತಾ, ಸಮಯ ಸಿಕ್ಕರೆ ಪ್ರವಾಸ ಹೋಗಬೇಕು ಎಂದು ಅಲೋಚಿಸುವವರು ಇದ್ದಾರೆ. ಅಂದಹಾಗೆ ಈಗ ಈ ಮಕ್ಕಳು ಹಾಗೂ ಪೋಷಕರು ಇಬ್ಬರ ಪ್ರಶ್ನೆಗೂ ಉತ್ತರ ಸಿಕ್ಕಿದೆ ನೋಡಿ.

ಕರ್ನಾಟಕ ರಾಜ್ಯದ ಶಾಲಾ ಮಕ್ಕಳಿಗೆ ಏಪ್ರಿಲ್ 11 ರಿಂದ ಮೇ 28 ಅಥವಾ 29 ರವರೆಗೆ ಬೇಸಿಗೆ ರಜೆ ನೀಡಲಾಗುತ್ತದೆ ಎಂಬ ಮಾಹಿತಿ ಅಧಿಕೃತ ಮೂಲಗಳಿಂದ ತಿಳಿದಿದೆ. ಇನ್ನು ಈಗಾಗಲೇ 1ನೇ ತರಗತಿ ಇಂದ 9 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಎಲ್ಲ ಪರೀಕ್ಷೆಗಳು ಮುಗಿದಿದೆ. ಇದರ ಫಲಿತಾಂಶವನ್ನು ಶಾಲೆಗಳಲ್ಲಿಯೇ ಶಿಕ್ಷಕರು ತಿಳಿಸಲಿದ್ದಾರೆ. ಏಪ್ರಿಲ್‌ 11 ರಿಂದ ಬೇಸಿಗೆ ರಜೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ರಜೆ ವೇಳೆಯೂ ಬಿಸಿಯೂಟ:

ಅಂದಹಾಗೆ ಇಷ್ಟು ದಿನ ಬೇಸಿಗೆ ರಜೆ ವೇಳೆಯಲ್ಲಿ ವಿದ್ಯಾರ್ಥಿಗಳ ಪೋಷಣೆ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆಯು ಆಹಾರ ಧಾನ್ಯಗಳನ್ನು ಮಕ್ಕಳಿಗೆ ವಿತರಣೆ ಮಾಡುತ್ತಿತ್ತು. ಆದರೆ ಈ ಬಾರಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಶಾಲೆಗಳಲ್ಲಿಯೇ ನೀಡಲು ಚಿಂತಿಸಿದ್ದು, ಆಹಾರ ಧಾನ್ಯ ವಿತರಣೆ ಮಾಡದಿರುವ ನಿರ್ಧಾರಕ್ಕೆ ಬಂದಿದೆ. ಶಿಕ್ಷಣ ಇಲಾಖೆಯ ಈ ನಿರ್ಧಾರದಿಂದ ಮಕ್ಕಳು ಬೇಸಿಗೆ ರಜೆಯಲ್ಲಿ ಆಟವಾಡಿಕೊಳ್ಳದೇ, ದೂರದ ಊರಿನ ತಮ್ಮ ಅಜ್ಜಿ, ತಾತನ ಮನೆಗೆ ಹೋಗುವ, ಸಂಬಂಧಿಗಳ ಮನೆಗೆ ಹೋಗಿ ರಜೆ ಎಂಜಾಯ್‌ ಮಾಡುವ, ಪ್ರವಾಸ ಕಾರ್ಯಕ್ರಮಗಳನ್ನು ಮಾಡುವ ಯೋಜನೆ ಇಂದ ದೂರ ಉಳಿದು ಬಿಸಿಯೂಟಕ್ಕೆ ಹಾಜರಾಗುತ್ತಾರಾ? ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಸಹ ಓದಿ : ಸರ್ಕಾರಿ ತರಬೇತಿ ಕೇಂದ್ರ ನೇಮಕಾತಿ!! ಆರಂಭದಲ್ಲೇ ಸಿಗತ್ತೆ ₹88,300/- ಸಂಬಳ

1ನೇ ತರಗತಿಗೆ 6 ವರ್ಷ ಕಡ್ಡಾಯ!

2024-25 ನೇ ಶೈಕ್ಷಣಿಕ ಸಾಲಿನ 1ನೇ ತರಗತಿ ಪ್ರವೇಶಾತಿಯೂ ಜೂನ್ 1 ರಿಂದ ಆರಂಭವಾಗಲಿದೆ. ಈ ಸಾಲಿನಿಂದ 1ನೇ ತರಗತಿ ಪ್ರವೇಶಕ್ಕೆ ದಾಖಲು ಮಾಡಿಸುವ ದಿನಾಂಕಕ್ಕೆ ಕಡ್ಡಾಯವಾಗಿ ವಿದ್ಯಾರ್ಥಿ 6 ವರ್ಷ ಪೂರೈಸಿರಬೇಕು ಎಂಬ ನಿಯಮವನ್ನು ಶಾಲಾ ಶಿಕ್ಷಣ ಇಲಾಖೆ ಜಾರಿಗೊಳಿಸಿದೆ.

ಇನ್ನು ಏಪ್ರಿಲ್ 11 ರೊಳಗೆ ಶಾಲಾ ಶಿಕ್ಷಣ ಇಲಾಖೆ ಇತರೆ ಯಾವುದಾದರೂ ಕಾರ್ಯಕ್ರಮವನ್ನು ಮಕ್ಕಳಿಗಾಗಿ ಪ್ರಕಟಣೆ ಹೊರಡಿಸುವುದೇ, ಬೇಸಿಗೆ ರಜೆಯಲ್ಲಿ ಯಾವುದಾದರೂ ಹೊಸ ಕಾರ್ಯಕ್ರಮವನ್ನು ಜಾರಿ ಮಾಡುವುದೇ ಎಂಬುದನ್ನು ಕಾದುನೋಡಬೇಕಿದೆ.

ಇತರೆ ವಿಷಯಗಳು:

ಚುನಾವಣಾ ರಾಜಕೀಯಕ್ಕೆ ಸಿದ್ದರಾಮಯ್ಯ ನೀಡಿದ್ರಾ ನಿವೃತ್ತಿ

ಈ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳು 3000‌ ರೂ. ಹಣ! ಅರ್ಜಿ ಸಲ್ಲಿಸಲು ಇಲ್ಲಿದೆ ಲಿಂಕ್

₹1000 ಮತ್ತೆ ಬರಲಾರಂಭ! ಮನೆಯಲ್ಲೇ ಕುಳಿತು ಚೆಕ್‌ ಮಾಡಿ


Share

Leave a Reply

Your email address will not be published. Required fields are marked *