ಹಲೋ ಸ್ನೇಹಿತರೇ, ದೇಶದ ಕೋಟ್ಯಾಂತರ ರೈತರು ಪಿಎಂ ಕಿಸಾನ್ ಯೋಜನೆಯ 17ನೇ ಕಾಂತಿಗೆ ಕಾಯುತ್ತಿದ್ದಾರೆ. ಆದರೆ, ಇದಕ್ಕಾಗಿ ರೈತರು E-kyc ಪೂರ್ತಿಗೊಳಿಸುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲ, E-kyc ಪೂರ್ಣಗೊಳಿಸುವ ವೇಳೆ ಕೆಲವು ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ.
![pm kisan new update](https://i0.wp.com/udyaga.com/wp-content/uploads/2024/05/pm-kisan-new-update.jpg?resize=640%2C360&ssl=1)
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಪ್ರತಿ ರೈತರಿಗೆ ವಾರ್ಷಿಕವಾಗಿ ₹ 6000 ಧನ ಸಹಾಯವನ್ನು ನೀಡಲಾಗುವುದು. ಈ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ಲಭ್ಯವಿರುವ ವಿವರಗಳ ಪ್ರಕಾರ, ಇದುವರೆಗೂ ದೇಶದ 11 ಕೋಟಿ ರೈತ ಕುಟುಂಬಗಳು ಈ ಯೋಜನೆಯ ಲಾಭವನ್ನು ಪಡೆದಿವೆ. ಸದ್ಯ ದೇಶದ ರೈತರು 17ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಮುಂದಿನ ಕಂತನ್ನು ಪಡೆಯಲು e-KYC ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
ನೀವು ಈ ಯೋಜನೆಯ (PM Kisan Yojane) ಫಲಾನುಭವಿಯಾಗಿದ್ದರೆ ಇನ್ನೂ ಇ-ಕೆವೈಸಿ ಸಂಪೂರ್ಣಗೊಳಿಸಿದ್ದರೆ ಕೂಡಲೇ ಈ ಕೆಲಸವನ್ನು ಪೂರ್ಣಗೊಳಿಸುವುದು ಅಗತ್ಯ. ಅಷ್ಟೇ ಅಲ್ಲ, PM Kisan e-KYC ಪೂರ್ಣಗೊಳಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ಅವಶ್ಯಕವಾಗಿದ್ದು, ಇವುಗಳನ್ನು ನಿರ್ಲಕ್ಷಿಸಿದರೆ ನೀವು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.
Contents
ಪಿಎಂ ಕಿಸಾನ್: ಇ-ಕೆವೈಸಿ ಮಾಡುವಾಗ ನೆನಪಿದಬೇಕಾದ ಅಂಶಗಳೆಂದರೆ:
ಸಕ್ರಿಯ ಮೊಬೈಲ್ ಸಂಖ್ಯೆ:
ಪಿಎಂ ಕಿಸಾನ್ ಫಲಾನುಭವಿಗಳು ಇ-ಕೆವೈಸಿ (PM Kisan Beneficiaries e-KYC) ಪೂರ್ಣಗೊಳಿಸುವ ಮೊದಲು ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಮಾಡಲಾಗಿರುವ ಮೊಬೈಲ್ ನಂಬರ್ ಸಕ್ರಿಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಬಯೋಮೆಟ್ರಿಕ್ ಪರಿಶೀಲನೆ:
ಇ-ಕೆವೈಸಿ ಪರಿಶೀಲನೆ ವೇಳೆ ಆಧಾರ್ ಒಟಿಪಿ ಪಡೆಯಲು ಸಾಧ್ಯವಾಗದಿದ್ದರೆ ಅಂತಹ ಸಂದರ್ಭದಲ್ಲಿ ಬಯೋಮೆಟ್ರಿಕ್ ಪರಿಶೀಲನೆ ಮಾಡಬಹುದು ಎಂಬುದನ್ನೂ ನೆನಪಿನಲ್ಲಿಡಿ.
ಸಿಎಸ್ಸಿ ಕೇಂದ್ರಕ್ಕೆ ಭೇಟಿ ನೀಡಿ:
ಒಂದೊಮ್ಮೆ ಪಿಎಂ ಕಿಸಾನ್ ಪೋರ್ಟಲ್ (PM Kisan Portal) ನಲ್ಲಿ ಆನ್ಲೈನ್ ಮೂಲಕ ನಿಮ್ಮ ಇ-ಕೆವೈಸಿ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಅಂತಹ ಸಂದರ್ಭದಲ್ಲಿ ನಿಮ್ಮ ಹತ್ತಿರದ ಸಿಎಸ್ಸಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ಕೆಲಸವನ್ನು ಪೂರ್ಣಗೊಳಿಸಿ.
ಸ್ಥಿತಿ ಪರಿಶೀಲನೆ:
ನೀವು E-kyc ಯನ್ನು ಪೂರ್ಣಗೊಳಿಸಿದ ನಂತರ ಪಿಎಂ ಕಿಸಾನ್ ಪೋರ್ಟಲ್ನಲ್ಲಿ ನಿಮ್ಮ E-kyc ಸ್ಥಿತಿಯನ್ನು ಪರಿಶೀಲಿಸಬಹುದಾಗಿದೆ.
ಇತರೆ ವಿಷಯಗಳು
ಕೇಂದ್ರ ಸರ್ಕಾರಿ ಹುದ್ದೆಗೆ ಅರ್ಜಿ ಆಹ್ವಾನ.! NCLT ಅಪ್ಲೇ ಮಾಡಿದ್ರೆ ತಿಂಗಳಿಗೆ 2,15,900 ರೂ. ವೇತನ
ಇಂದು ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ! ಚೆಕ್ ಮಾಡುವ ನೇರ ಲಿಂಕ್ ಇಲ್ಲಿದೆ