ಹಲೋ ಸ್ನೇಹಿತರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರಾಜ್ಯ ಬೋರ್ಡ್‌ನ ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ಬಂದ 4 ದಿನಗಳಲ್ಲಿ ಅಥವಾ ಜೂನ್ 1 ಅಥವಾ 3 ರಂದು ಸಿಇಟಿ ಫಲಿತಾಂಶ ಬಿಡುಗಡೆ ಮಾಡಲಿದೆ. ಸಿಇಟಿ Rank ಅನ್ನು 12ನೇ ತರಗತಿಯ %50 ಅಂಕಗಳನ್ನು ಸೇರಿಸಿ Rank ಬಿಡುಗಡೆ ಮಾಡಲಾಗುತ್ತದೆ.
ಅಂದಹಾಗೆ KEA ವೆಬ್‌ಸೈಟ್‌ನಲ್ಲಿ ಯುಜಿಸಿಇಟಿ’ಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ತಮ್ಮ ಅಪ್ಲಿಕೇಶನ್‌ನಲ್ಲಿ ಸಿಬಿಎಸ್‌ಇ, ಸಿಐಎಸ್‌ಸಿಇ, ಐಜಿಸಿಎಸ್‌ಇ 12ನೇ ತರಗತಿ ಅಂಕಗಳನ್ನು ನಮೂದಿಸಲು ಈಗ ದಿನಾಂಕ ವಿಸ್ತರಣೆ ಮಾಡಿದೆ. ಕರ್ನಾಟಕ ದ್ವಿತೀಯ ಪಿಯುಸಿ 2024 ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ನಮೂದಿಸುವ ಅವಶ್ಯಕತೆ ಇರುವುದಿಲ್ಲ. ಆದರೆ 2024ಕ್ಕಿಂತ ಮೊದಲು ಉತ್ತೀರ್ಣರಾಗಿರುವ ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ದ್ವಿತೀಯ ಪಿಯುಸಿ ಅಂಕಗಳನ್ನು ಕಡ್ಡಾಯವಾಗಿ ನಮೂದಿಸಬೇಕು.
ಇದನ್ನು ಓದಿ: ಪದವಿ, ಪಿಜಿ ಓದುತ್ತಿರುವವರಿಗೆ ₹1 ಲಕ್ಷ: ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕಲು 2 ದಿನ ಬಾಕಿ
ಸಿಇಟಿ 2024ಕ್ಕೆ ಸಂಬಂಧಿಸಿದಂತೆ ಸಿಬಿಎಸ್ಸಿ, ಐಸಿಎಸ್ಸಿಇ, ಐಜಿಸಿಎಸ್‌ಇ ಯ ಹಾಗೂ 2024 ಕ್ಕಿಂತ ಮೊದಲೇ ದ್ವಿತೀಯ ಪಿಯುಸಿ ಪಾಸ್ ಆಗಿರುವ ಅಭ್ಯರ್ಥಿಗಳು ತಮ್ಮ ಅಂಕಗಳನ್ನು ದಾಖಲಿಸಲು ಮೇ 25 ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ಮಾಡಿಕೊಟ್ಟಿದೆ.
ಕೆಇಎ ಪೋರ್ಟಲ್ ಮೂಲಕ 12ನೇ ತರಗತಿಯ ಅಂಕಗಳನ್ನು ದಾಖಲಿಸಲು ಮೇ 20 ರವರೆಗೆ ಕಾಲಾವಕಾಶ ನೀಡಲಾಗಿತ್ತು.ಆದರೆ ಇದುವರೆಗೆ ಅಂಕಗಳನ್ನು ದಾಖಲಿಸದೇ ಇರುವ ಕಾರಣಕ್ಕೆ ಅಭ್ಯರ್ಥಿಗಳ ಅನುಕೂಲಕ್ಕಾಗಿ ಮೇ 23 ರ ಸಂಜೆ 4 ರಿಂದ ಮೇ 25 ರ ಸಂಜೆ 5.30 ರವರೆಗೆ ಅಂಕಗಳನ್ನು ದಾಖಲಿಸಲು KEA ಪೋರ್ಟಲ್ ಅನ್ನು ಮತ್ತೊಮೆ ತೆರೆಯುವುದಾಗಿ ಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಿದೆ.
ಆರ್ಕಿಟೆಕ್ಚರ್ ಪೋಸ್ಟ್‌ನ ಪ್ರವೇಶಕ್ಕಾಗಿ ಅಭ್ಯರ್ಥಿಗಳು 2024 ರ ನಾಟಾ ಪರೀಕ್ಷೆಯ ಅಂಕಗಳನ್ನು ಅರ್ಹತೆ ಅನುಗುಣವಾಗಿ ದಾಖಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ವೆಬ್‌ಸೈಟ್ ಸಂಪರ್ಕಿಸಲು ತಿಳಿಸಲಾಗಿದೆ.
ಇತರೆ ವಿಷಯಗಳು:
ಈ ಖಾತೆದಾರರಿಗೆ ಪ್ರತಿ ತಿಂಗಳು ಸಿಗತ್ತೆ ರೂ. 3000! ತಕ್ಷಣ ಈ ರೀತಿ ಅರ್ಜಿ ಸಲ್ಲಿಸಿ
ಗಂಡ ಹೆಂಡತಿ ಇಬ್ಬರಿಗೂ ಪ್ರತಿ ವರ್ಷ ₹60,000 ಪಿಂಚಣಿ.! ಈ ಯೋಜನೆ ಅಪ್ಲೇ ಮಾಡಿದ್ರೆ ಮಾತ್ರ