rtgh
Headlines

ಪದವಿ, ಪಿಜಿ ಓದುತ್ತಿರುವವರಿಗೆ ₹1 ಲಕ್ಷ: ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕಲು 2 ದಿನ ಬಾಕಿ

life good scholarship
Share

ಹಲೋ ಸ್ನೇಹಿತರೇ, ನೀವು ದೇಶದ ಯಾವುದೇ ಕಾಲೇಜು, ವಿವಿಗಳಲ್ಲಿ ಪದವಿ & ಸ್ನಾತಕೋತ್ತರ ಪದವಿ ಕೋರ್ಸ್‌ ಪ್ರಸ್ತುತ ಓದುತ್ತಿದ್ದೀರಾ?. ಹಾಗಿದ್ರೆ ಲೈಫ್‌ ಗುಡ್‌ ಸ್ಕಾಲರ್‌ಶಿಪ್‌ಗೆ ತಕ್ಷಣ ಅರ್ಜಿ ಹಾಕಿ. ಪಡೆಯಿರಿ ಒಂದು ವರ್ಷಕ್ಕೆ ರೂ.1 ಲಕ್ಷ ಹಣ, ಈ ಹಣವನ್ನು ಪಡೆಯುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

life good scholarship

ಎಲ್‌ಜಿ ಇಲೆಕ್ಟ್ರಾನಿಕ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡುವ ಸಲುವಾಗಿ ‘Life’s Good’ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ ಅನ್ನು ಸಿಎಸ್‌ಆರ್‌ ಉಪಕ್ರಮವಾಗಿ ಜಾರಿಗೆ ತಂದಿದೆ.

ಈ ಸ್ಕಾಲರ್‌ಶಿಪ್‌ ಗೆ ಪ್ರಸ್ತುತ ಯಾವುದೇ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇದರ ಉದ್ದೇಶ ಒಂದು ವರ್ಷಕ್ಕೆ ಮಾತ್ರ ಶೈಕ್ಷಣಿಕ ಕಾರ್ಯಗಳಿಗೆ ಹಣಕಾಸು ನೆರವು ನೀಡುವುದಾಗಿದೆ.

ಸ್ಕಾಲರ್‌ಶಿಪ್‌ ಹೆಸರು: ಲೈಫ್‌ ಗುಡ್‌ ಸ್ಕಾಲರ್‌ಶಿಪ್‌ ಪ್ರೋಗ್ರಾಮ್ 2024
ಸ್ಕಾಲರ್‌ಶಿಪ್‌ ಸೌಲಭ್ಯ : 1 ವರ್ಷಕ್ಕೆ ರೂ.1,00,000 ಹಣಕಾಸಿನ ನೆರವು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-05-2024

ಅರ್ಜಿ ಸಲ್ಲಿಸಲು ಅರ್ಹತೆಗಳು

  • ವಿದ್ಯಾರ್ಥಿಗಳು ಯಾವುದೇ ಪದವಿ, ಸ್ನಾತಕೋತ್ತರ ಪದವಿಗಳನ್ನು ಓದುವವರಾಗಬೇಕು.
  • ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ’ಯಲ್ಲಿ ಕನಿಷ್ಠ ಶೇಕಡ.60 ಅಂಕಗಳೊಂದಿಗೆ ಪಾಸ್‌ ಆಗಿರಬೇಕು.
  • ಇತರೆ ವರ್ಷಗಳಲ್ಲಿ ಅಧ್ಯಯನ ಮಾಡುತ್ತಿರುವವರು ಹಿಂದಿನ ವರ್ಷದ ಶಿಕ್ಷಣದಲ್ಲಿ ಕನಿಷ್ಠ ಶೇಕಡ.60 ಅಂಕ ಪಡೆದಿರಬೇಕು.
  • ಲೈಫ್‌ ಗುಡ್‌ ಸ್ಕಾಲರ್‌ಶಿಪ್‌ ಅನ್ನು ಸಂಸ್ಥೆ ಕೆಲವು ಆಯ್ದ ಸಂಸ್ಥೆ ಅಥವಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಲಾಗುವುದು.
  • Buddy4study, LG ಇಲೆಕ್ಟ್ರಾನಿಕ್ಸ್‌ ನ ಸಿಬ್ಬಂದಿಯ ಮಕ್ಕಳು ಅರ್ಜಿ ಹಾಕಲು ಅರ್ಹರಾಗಿರುವುದಿಲ್ಲಾ.
  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ರೂ.8 ಲಕ್ಷ ದಾಟಿರಬಾರದು.
  • ಅರ್ಜಿಯನ್ನು 4 ಹಂತಗಳಲ್ಲಿ ಸ್ವೀಕಾರ ಮಾಡಲಾಗುವುದು.
  • 1ನೇ ಹಂತದ ಸ್ಕಾಲರ್‌ಶಿಪ್‌ಗೆ ಯಾವೆಲ್ಲಾ ಕಾಲೇಜು/ ಸಂಸ್ಥೆ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು ಚೆಕ್‌ ಮಾಡಲು ಕ್ಲಿಕ್ ಮಾಡಿ.
  • ಮುಂದಿನ ಹಂತಗಳ ಅರ್ಜಿ ವಿವರಗಳಿಗಾಗಿ ಆಗಾಗ ಭೇಟಿ ನೀಡುತ್ತಿರಿ.

ಅರ್ಜಿ ಸಲ್ಲಿಸಲು ಬೇಕಾದ ವಿವರಗಳು / ದಾಖಲೆಗಳು

  • ಆಧಾರ್ ಕಾರ್ಡ್
  • 2nd PUC ಅಂಕಪಟ್ಟಿ
  • ಪದವಿ, ಪಿಜಿ ಪ್ರವೇಶದ ದಾಖಲೆ
  • ಆದಾಯ ಪ್ರಮಾಣಪತ್ರ
  • ಬ್ಯಾಂಕ್‌ ಪಾಸ್‌ ಬುಕ್ ಜೆರಾಕ್ಸ್‌ ಪ್ರತಿ
  • ಪಾಸ್‌ಪೋರ್ಟ್‌ ಫೋಟೋ

ಅರ್ಜಿ ಹಾಕುವ ವಿಧಾನ

– ‘ಲೈಫ್‌ ಗುಡ್ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‘ ಲಿಂಕ್ ಕ್ಲಿಕ್ ಮಾಡಿ.
– ತೆರೆದ ವೆಬ್‌ಪೇಜ್‌ನಲ್ಲಿ ಮಾಹಿತಿಗಳನ್ನು ಒಮ್ಮೆ ಓದಿಕೊಳ್ಳಿ.
– ನಂತರ ಸ್ಕ್ರಾಲ್‌ಡೌನ್‌ ಮಾಡಿ ‘Apply Online’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಇಮೇಲ್, ಜಿಮೇಲ್, ಮೊಬೈಲ್‌ ನಂಬರ್ ಮೂಲಕ ರಿಜಿಸ್ಟರ್ ಆಗಲು ಪಾಪಪ್ ವಿಂಡೋ ಓಪನ್ ಆಗುತ್ತದೆ.
– ಮೊದಲು ರಿಜಿಸ್ಟ್ರೇಷನ್‌ ಪಡೆದು, ನಂತರ ಅರ್ಜಿ ಸಲ್ಲಿಸಿ.

ಇತರೆ ವಿಷಯಗಳು

ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ಬಂದಿಲ್ವಾ? ಹಾಗಿದ್ರೆ ಈ ಕೆಲಸ ಮಾಡಿ ಹಣ ಬರುತ್ತೆ!

ಇಂದಿನಿಂದ ಮತ್ತೆ ಗುಡುಗು ಸಹಿತ ಮಳೆ! ಮುಂದಿನ ನಾಲ್ಕು ದಿನಗಳ ಕಾಲ ಎಚ್ಚರ


Share

Leave a Reply

Your email address will not be published. Required fields are marked *