rtgh
Headlines

ಆಸ್ತಿ ಖರೀದಿಗೆ ಸರ್ಕಾರದ ಹೊಸ ರೂಲ್ಸ್! ಈ ದಾಖಲೆಗಳಿದ್ದರೆ ಮಾತ್ರ ಖರೀದಿಸಿ

New rules for property purchase
Share

ಹಲೋ ಸ್ನೇಹಿತರೇ, ಹಿಂದೆ ಹಾಗೂ ಈಗ ಪ್ರಾಪರ್ಟಿ ಖರೀದಿ ಮಾಡುವುದಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಈ ಹಿಂದೆ ಕೇವಲ ಕೃಷಿ ಉದ್ದೇಶಕ್ಕಾಗಿ ಜಮೀನನ್ನು ಖರೀದಿ ಮಾಡಲಾಗುತ್ತಿತ್ತು, ಆದರೆ ಈಗ ಅದನ್ನು ಮಾರಾಟ ಮಾಡುವುದಕ್ಕಾಗಿ ಹೆಚ್ಚಾಗಿ ಖರೀದಿ ಮಾಡಲಾಗುತ್ತಿದೆ ಯಾಕೆಂದರೆ ದಿನ ಕಳೆದಂತೆ ಪ್ರಾಪರ್ಟಿಯ ಬೆಲೆ ಚಿನ್ನದ ದರಕ್ಕೆ ಸಮಾನವಾಗುತ್ತಿದೆ. ಪ್ರಾಪರ್ಟಿ ಖರೀದಿಸುವುದಕ್ಕೆ ಕೂಡ ಜನರ ನಡುವೆ ಕಾಂಪಿಟೇಶನ್ ಪ್ರಾರಂಭವಾಗಿದೆ

New rules for property purchase

ಆದರೆ ಪ್ರಾಪರ್ಟಿ ಖರೀದಿಸುವಾಗ ಕೆಲವೊಂದು ಡಾಕ್ಯೂಮೆಂಟ್ ಗಳನ್ನು ನೀವು ಪ್ರಮುಖವಾಗಿ ಹೊಂದಿರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ತಿಳಿದುಕೊಳ್ಳಿ. ಪ್ರಾಪರ್ಟಿ ಖರೀದಿಸುವ ಸಂದರ್ಭದಲ್ಲಿ ಕೆಲವೊಂದು ಡಾಕ್ಯೂಮೆಂಟ್ ಗಳು ಇದಿಯೋ ಇಲ್ವೋ ಅನ್ನೋದನ್ನ ಸರಿಯಾಗಿ ಗಮನಿಸಿಕೊಳ್ಳಿ ಇಲ್ಲವಾದಲ್ಲಿ ನಂತರದ ದಿನಗಳಲ್ಲಿ ಕೋರ್ಟು ಕಚೇರಿ ಅನ್ನುತ್ತಾ ನೀವು ತಿರಗಾಡಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಪ್ರಾಪರ್ಟಿ ನಮ್ಮದು ಅಂತ ನಕಲಿ ದಾಖಲೆಗಳನ್ನು ನೀಡಿ ಪ್ರಾಪರ್ಟಿಗಳನ್ನು ಮಾರಾಟ ಮಾಡುವಂತಹ ಜನರ ಸಂಖ್ಯೆ ಹೆಚ್ಚಾಗಿದೆ. ಇವರಿಂದ ಮೋಸ ಹೋಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿ ಖರೀದಿಸಿ ಎಡವಟ್ಟು ಆಗುವುದಕ್ಕಿಂತ ಮುಂಚೆ ಖರೀದಿಸುವುದಕ್ಕಿಂತ ಮುಂಚೇನೆ ನೀವು ಎಲ್ಲಾ ಪ್ರಾಪರ್ಟಿ ದಾಖಲೆಗಳನ್ನು ಸರಿಯಾಗಿ ಗಮನಿಸಿ ಹಾಗೂ ಕಾನೂನು ಸಲಹೆಗಾರರ ಮೂಲಕ ನೋಡಿ ಮುಂದುವರೆಯುವುದು ಒಳ್ಳೆಯದು ಎಂಬುದು ನಮ್ಮ ಅನಿಸಿಕೆ.

ಇದನ್ನೂ ಸಹ ಓದಿ : ಪಶುಸಂಗೋಪನೆಗಾಗಿ ಪ್ರತಿಯೊಬ್ಬರಿಗೂ ₹50,000 ಲಕ್ಷ ನಗದು!!

ಈ ದಾಖಲೆಗಳನ್ನು ಪ್ರಮುಖವಾಗಿ ಪರಿಶೀಲಿಸಿ:

  • ಮೊದಲಿಗೆ ನಿಮಗೆ ಮಾರಾಟ ಆಗುತ್ತಿರುವಂತಹ ಪ್ರಾಪರ್ಟಿಯ ಅಸಲಿ ಮಾಲೀಕರು ಯಾರು ಅನ್ನೋದನ್ನ ಕ್ರಾಸ್ ಚೆಕ್ ಮಾಡಿಕೊಳ್ಳಿ.
  • ಆ ಸೈಟ್ ಅವರಿಗೆ ಯಾವ ರೀತಿಯಲ್ಲಿ ಸಿಕ್ಕಿದೆ, ಉಡುಗೊರೆ ರೂಪದಲ್ಲಿ ಸಿಕ್ಕಿದೆಯಾ ಅಥವಾ ಹೇಗೆ ಸಿಕ್ಕಿದೆ ಅನ್ನೋದನ್ನ ತಿಳಿದುಕೊಳ್ಳಬೇಕಾಗಿರುತ್ತದೆ ಯಾಕೆಂದರೆ ಇಲ್ಲಿ ಕೂಡ ಮೋಸ ಅಡಗಿರುತ್ತದೆ.
  • ಆನ್ಲೈನಲ್ಲಿ ನೀವು ಖರೀದಿ ಮಾಡುತ್ತಿರುವಂತಹ ಪ್ರಾಪರ್ಟಿಯ ಮೇಲೆ ಯಾವುದಾದರೂ ಕೇಸ್ ಇದಿಯಾ ಅನ್ನೋದನ್ನ ಕೂಡ ಚೆಕ್ ಮಾಡಬೇಕಾಗಿರುತ್ತದೆ. ಇಲ್ಲವಾದಲ್ಲಿ ಖರೀದಿ ಮಾಡಿದ ನಂತರ ನೀವು ಅದರ ಸಮಸ್ಯೆಯನ್ನು ಎದುರಿಸಬೇಕಾಗಿರುತ್ತದೆ.
  • ತಪ್ಪದೇ ಆಸ್ತಿ ಪತ್ರದಲ್ಲಿ ಮ್ಯೂಟೇಷನ್ ಅನ್ನು ಚೆಕ್ ಮಾಡಿ. ಅದರ ಜೊತೆಯಲ್ಲಿ ನೀವು ಖರೀದಿ ಮಾಡುತ್ತಿರುವಂತಹ ಪ್ರಾಪರ್ಟಿಗೆ ಯಾವುದಾದರೂ ಸಾಲ ಇದೆ ಅನ್ನೋದನ್ನ ಕೂಡ ಚೆಕ್ ಮಾಡುವುದನ್ನ ಮರೆಯಬೇಡಿ.
  • ಈ ವಿಚಾರದಲ್ಲಿ ಅನುಭವ ಇರುವವರನ್ನು ನಿಮ್ಮ ಜೊತೆ ಸೇರಿಸಿಕೊಳ್ಳಿ ಹಾಗೂ ಪ್ರಾಪರ್ಟಿ ಅಕ್ಕಪಕ್ಕ ಇರುವವರನ್ನು ಇದರ ವಿಚಾರದ ಬಗ್ಗೆ ಸ್ವಲ್ಪ ಮಾಹಿತಿಯನ್ನು ಕೇಳಿ ಪಡೆದುಕೊಳ್ಳಿ. ನಂತರವೇ ನಿಧಾನಕ್ಕೆ ಮುಂದುವರೆದು ಸಾಕ್ಷಿಗಳ ಸಮ್ಮುಖದಲ್ಲಿ ಹಣಕಾಸಿನ ವ್ಯವಹಾರವನ್ನು ಮುಗಿಸಿದ ನಂತರ ನಿಧಾನಕ್ಕೆ ಆಸ್ತಿ ಪತ್ರವನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಿ ಹಾಗೂ ಈ ಸಂದರ್ಭದಲ್ಲಿ ಪ್ರತಿಯೊಂದು ವಿಚಾರಗಳನ್ನು ಕೂಡ ಕ್ಲಿಯರ್ ಮಾಡಿಕೊಳ್ಳಿ. ಎಲ್ಲಾ ಕ್ಲಿಯರ್ ಮಾಡಿಕೊಂಡು ನಂತರವಷ್ಟೇ ಆಸ್ತಿ ಪತ್ರವನ್ನು ನೀವು ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಿ.

ಇತರೆ ವಿಷಯಗಳು:

ರಾಜ್ಯದ ರೈತರಿಗೆ ಸಿಹಿ ಸುದ್ದಿ! ಸೂರ್ಯ ರೈತ ಯೋಜನೆಯಡಿ ಉಚಿತ ಸೋಲಾರ್‌ ಪಂಪ್‌ಸೆಟ್

ಮಹಿಳೆಯರಿಗೆ ಈ ಯೋಜನೆಯಡಿ 11,000 ರೂ.! ಆಫ್ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ

ಮುಂದಿನ ಐದು ದಿನಗಳವರೆಗೆ ಈ ಭಾಗದಲ್ಲಿ ಭಾರೀ ಮಳೆಯ ಎಚ್ಚರಿಕೆ!


Share

Leave a Reply

Your email address will not be published. Required fields are marked *