rtgh
Headlines

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ನಿಯಮ ಚೇಂಜ್! ಈ ದಾಖಲೆಗಳು ಅತ್ಯಗತ್ಯ

New Ration Card Application
Share

ಹಲೋ ಸ್ನೇಹಿತರೆ, ಇಂದು ರೇಷನ್ ಕಾರ್ಡ್ ಒಂದು ಇದ್ದರೆ ಸರಕಾರದಿಂದ ಅನೇಕ ರೀತಿಯ ಸೌಲಭ್ಯ ಗಳು ದೊರೆಯಲಿದೆ. ಬಡ ವರ್ಗದ ಜನತೆಯ ಹಸಿವು ನೀಗಿಸಲು ಆಹಾರ ಇಲಾಖೆಯು ರೇಷನ್ ಕಾರ್ಡ್ ಅನ್ನು 3 ವಿಧಗಳಾಗಿ ವಿಂಗಡಣೆ ಮಾಡಿದ್ದು ವ್ಯಕ್ತಿಯ ಆದಾಯದ ಮೇರೆಗೆ ಈ ಕಾರ್ಡ್ ವಿತರಣೆಯಾಗಲಿದೆ.‌ ಇಂದು ಗ್ಯಾರಂಟಿ ಯೋಜನೆಗಳ ಬಳಕೆಗೆ ಈ ರೇಷನ್ ಕಾರ್ಡ್ ಕಡ್ಡಾಯವಾಗಿ ಅಗತ್ಯವಿದ್ದು ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಹೆಚ್ಚಿನ ಜನರು ಕಾಯುತ್ತಿದ್ದಾರೆ.‌ ಸರಕಾರ ಇದಕ್ಕಾಗಿ ಅವಕಾಶ ‌ಕೂಡ ಮಾಡಿ ಕೊಟ್ಟಿದ್ದು ಎಪ್ರಿಲ್ ಒಂದರಿಂದ ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ ಸಿಕ್ಕಿದೆ.

New Ration Card Application

ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ ಮಾಡಲು ಮತ್ತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅವಕಾಶವನ್ನು ನೀಡಿದೆ. ಹಾಗಾಗಿ ಯಾರೆಲ್ಲ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿಲ್ಲ ಮತ್ತೆ ಅರ್ಜಿ ಸಲ್ಲಿಸಬಹುದು.‌ ಹೊಸ‌ ಪಡಿತರ ಚೀಟಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ಅರ್ಜಿ ಹಾಕಲು ಈ ದಾಖಲೆಗಳು ಅಗತ್ಯವಾಗಿ ಬೇಕು:

  • ಜನನ ಪ್ರಮಾಣ ಪತ್ರ
  • ಮತದಾನದ ಗುರುತಿನ ಚೀಟಿ
  • ಆಧಾರ್ ಕಾರ್ಡ್
  • ಡ್ರೈವಿಂಗ್ ಲೈಸೆನ್ಸ್
  • ಮೊಬೈಲ್ ಸಂಖ್ಯೆ
  • ಪೋಟೋ
  • ಸ್ವಯಂ ಘೋಷಿತ ಪ್ರಮಾಣ ಪತ್ರ

ಇದನ್ನು ಓದಿ: ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಖಾತೆಗೆ ಜಮಾ! ಸ್ಟೇಟಸ್‌ ಚೆಕ್ ಮಾಡಿ

ಹೀಗೆ ಅರ್ಜಿ ಸಲ್ಲಿಕೆ ಮಾಡಿ:

  • ಮೊದಲಿಗೆ‌ ನೀವು ಆಹಾರ‌ ಇಲಾಖೆಯ ವೆಬ್ ಸೈಟ್ kar.nic.in ಗೆ ಹೋಗಿ,
  • ನಂತರ ಇ-ಸೇವೆಗಳು ಎನ್ನುವ ಆಯ್ಕೆ ‌ಇರಲಿದ್ದು ಇ- ಪಡಿತರ ಚೀಟಿ ಆಯ್ಕೆ ಇರಲಿದೆ.
  • ಬಳಿಕ‌ ಇಲ್ಲಿ ನೂತನ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಲಿಂಕ್ ಸಿಗಲಿದ್ದು ನಿಮ್ಮ‌ ಹೆಸರು ವಿಳಾಸ, ಜಿಲ್ಲೆ,ಗ್ರಾಮ ಇತ್ಯಾದಿ ಅಲ್ಲಿ ಕೇಳುವಂತ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
  • ನಂತರದಲ್ಲಿ ನೀವು ಬಿಪಿಎಲ್ ಅಥವಾ ಎಪಿಎಲ್ ಹೊಸ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುತ್ತಿದ್ದೀರಾ ಎನ್ನುವುದನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಕೇಳಲಾದ ದಾಖಲೆಗಳನ್ನು ಅಪ್ ಲೋಡ್ ಮಾಡಿ‌.

ಅರ್ಹತೆ ಏನು?

ಹೊಸದಾಗಿ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಕೆ ಮಾಡುವವರು ಕರ್ನಾಟಕದ ಖಾಯಂ ನಿವಾಸಿಗಳು ಆಗಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು. ಒಂದು ಲಕ್ಷಕ್ಕಿಂತ ಕುಟುಂಬದ ವಾರ್ಷಿಕ ಆದಾಯವು ಕಡಿಮೆ ಇದ್ದಾಗ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಹಾಕಬಹುದು‌. ಇನ್ನು ಹೊಸದಾಗಿ ಮದುವೆಯಾಗಿರುವಂತಹ ದಂಪತಿಗಳು ಪ್ರತ್ಯೇಕ ಮನೆ ಮಾಡಿದ್ದರೆ ಪ್ರತ್ಯೇಕ ವಾಸಿಸುತ್ತಿದ್ದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.‌ ಈಗಾಗಲೇ ರೇಷನ್ ಕಾರ್ಡ್ ಇದ್ದವರು ಮತ್ತೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ಇತರೆ ವಿಷಯಗಳು:

ರೈಲು ಪ್ರಯಾಣಿಕರಿಗೆ ಹೊಸ ರೂಲ್ಸ್! ರೈಲ್ವೆ ಸಚಿವಾಲಯದಿಂದ ಘೋಷಣೆ

ಚುನಾವಣೆ ನಂತರ ಉದ್ಯೋಗಿಗಳಿಗೆ ಗುಡ್‌ ನ್ಯೂಸ್:‌ 80 ಸಾವಿರಕ್ಕೆ ಏರಿಕೆಯಾಗಲಿದೆ ವೇತನ!


Share

Leave a Reply

Your email address will not be published. Required fields are marked *