rtgh
Headlines

ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಖಾತೆಗೆ ಜಮಾ! ಸ್ಟೇಟಸ್‌ ಚೆಕ್ ಮಾಡಿ

anna bhagya dbt status check
Share

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರ ತನ್ನ ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯನ್ನು ಕೂಡ ಜಾರಿಗೆ ತಂದು ಎಂಟು ತಿಂಗಳು ಕಳೆದಿವೆ. ಇಲ್ಲಿಯವರೆಗೂ ಫಲಾನುಭವಿಗಳಿಗೆ ಕೊಡಬಹುದಾದಷ್ಟು ಅಕ್ಕಿ ದಾಸ್ತಾನು ಇಲ್ಲದೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿಯ ಬದಲು ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170 ಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಾ ಬಂದಿದೆ.

anna bhagya dbt status check

ಹೌದು, ಕಳೆದ 8 ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಸರ್ಕಾರದ ಕಡೆಯಿಂದ ನೇರವಾಗಿ ಡಿಬಿಟಿ ಆಗುತ್ತಿದೆ. ಆದ್ರೆ ಸರ್ಕಾರ ಈಗಾಗಲೇ ಸಾಕಷ್ಟು ಜನರ ಬಿಪಿಎಲ್ ರೇಷನ್ ಕಾರ್ಡ್ ರದ್ದುಪಡಿ ಮಾಡಿದ್ದು, ಅಂತವರಿಗೆ ಮೇ ತಿಂಗಳ ಅನ್ನಭಾಗ್ಯ ಹಣ ಖಾತೆಗೆ ಜಮಾ ಆಗುವುದಿಲ್ಲ.

ಅನರ್ಹರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದು ಸರ್ಕಾರದ ಗಮನಕ್ಕೆ ಬಂದಿದೆ. ಬಿಪಿಎಲ್ ಕಾರ್ಡ್ ವಿತರಣೆ ಮಾಡುವುದು ಬಡತನ ರೇಖೆಗಿಂತ ಕೆಳಗಿರುವವರಿಗೆ ಆದರೆ ಉತ್ತಮ ಆದಾಯ ಹೊಂದಿರುವವರು ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ.

ಮಾತ್ರವಲ್ಲದೆ ಕಳೆದ ಆರು ತಿಂಗಳಿನಿಂದ ಒಂದು ಬಾರಿಯೂ ರೇಷನ್ ವಸ್ತುಗಳನ್ನು ಪಡೆದುಕೊಂಡಿಲ್ಲ, ಬದಲಿಗೆ ಸರಕಾರದ ಉಚಿತ ಯೋಜನೆಗಳ ಪ್ರಯೋಜನವನ್ನು ಮಾತ್ರ ಪಡೆದುಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಿರುವ ಸರ್ಕಾರ ಅಂಥವರ ಬಿಪಿಎಲ್ ಕಾರ್ಡ್ ಅನ್ನು ಬಹಳ ಸ್ಟ್ರಿಕ್ಟ್ ಆಗಿ ರದ್ದುಪಡಿಸಿದೆ.

ಇನ್ನು ಅನ್ನಭಾಗ್ಯ ಯೋಜನೆಯ ಹಣ ಏಪ್ರಿಲ್ ತಿಂಗಳ 20ನೇ ತಾರೀಕಿನ ಒಳಗಡೆ ಬಿಡುಗಡೆ ಆಗಿದೆ. ಸಾಕಷ್ಟು ಜನರ ಖಾತೆಗೆ 680 ರೂಪಾಯಿಗಳು ಜಮಾ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಹಣ ಬಂದಿರುವ ಡಿಬಿಟಿ ಸ್ಟೇಟಸ್ ಅನ್ನು ಸಾಕಷ್ಟು ಜನ ಶೇರ್ ಮಾಡಿದ್ದಾರೆ. ನೀವು ಕೂಡ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿದ್ದು, ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎನ್ನುವುದನ್ನು ಆನ್ಲೈನ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಸಹ ಓದಿ : ಎಲ್ಲಾರಿಗೂ ಈ ತಿಂಗಳ ಪಿಂಚಣಿ ಹಣ ಜಮಾ! ನಿಮಗೂ ಹಣ ಬಂದಿದೆಯಾ ನೋಡಿ

ಆನ್ಲೈನ್ ನಲ್ಲಿ ಡಿಬಿಟಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

 • DBT Karnataka ಎನ್ನುವ ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ.
 • ಈಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು
 • ನಂತರ ಆಧಾರ್ ಗೆ ಕನೆಕ್ಟ್ ಆಗಿರುವ ಮೊಬೈಲ್ ಗೆ ಬಂದು ಒಟಿಪಿ ಕಳುಹಿಸಲಾಗುತ್ತದೆ ಅದನ್ನು ನಮೂದಿಸಿ.
 • ನಂತರ ನಾಲ್ಕು ಅಂಕೆಯ ಪಾಸ್ವರ್ಡ್ ರಚಿಸಿಕೊಳ್ಳಬೇಕು
 • ನೆನಪಿಟ್ಟುಕೊಳ್ಳುವಂಥ ಪಾಸ್ವರ್ಡ್ ಹಾಕಿ ಯಾಕಂದ್ರೆ ಪ್ರತಿ ಬಾರಿ ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡಲು ಇದೇ ಪಾಸ್ವರ್ಡ್ ಬಳಸಬೇಕು.
 • ಪಾಸ್ವರ್ಡ್ ಹಾಕಿದ ಬಳಿಕ ನಿಮಗೆ ಒಂದು ಪುಟ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಅಲ್ಲಿ ನಾಲ್ಕು ಆಪ್ಷನ್ ಗಳು ಇದ್ದು ಕೊನೆಯದಾಗಿ ಪಾವತಿ ಸ್ಥಿತಿ ಎನ್ನುವ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.
 • ಈಗ ಸರ್ಕಾರದಿಂದ ಯಾವುದೇ ಯೋಜನೆಯ ಹಣ ನಿಮ್ಮ ಖಾತೆಗೆ ಬಂದರೆ ಅದರ ಬಗ್ಗೆ ಮಾಹಿತಿ ಸಿಗುತ್ತದೆ.
 • ನೀವು ಅನ್ನ ಭಾಗ್ಯ ಯೋಜನೆ ಎಂದು ಸೆಲೆಕ್ಟ್ ಮಾಡಿ ನಿಮ್ಮ ಖಾತೆಗೆ ಯಾವಾಗ ಎಷ್ಟು ಹಣ ಬಂದಿದೆ ಎನ್ನುವುದನ್ನು ತಿಳಿದುಕೊಳ್ಳಿ.

ಇನ್ನು DBT ಸ್ಟೇಟಸ್ ಚೆಕ್ ಮಾಡಲು ಎರಡನೇ ಮಾರ್ಗ:

 • ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
 • ಈ ಸರ್ವಿಸ್ ವಿಭಾಗಕ್ಕೆ ಹೋಗಿ
 • ನಂತರ ಎಡಭಾಗದಲ್ಲಿ ಮೂರು ಲೈನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ
 • ಈ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ
 • ಡಿ ಬಿ ಟಿ ಸ್ಟೇಟಸ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ
 • ಬಳಿಕ ಮೂರು ಲಿಂಗಗಳಿರುವ ಬೇರೆ ಬೇರೆ ಜಿಲ್ಲೆಗಳನ್ನು ತೋರಿಸಲಾಗುತ್ತದೆ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿ ಅದರ ಮೇಲ್ಗಡೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
 • ಈಗ ಡಿಬಿಟಿ ಸ್ಥಿತಿ ತಿಳಿದುಕೊಳ್ಳಿ ಎನ್ನುವ ಕೊನೆಯ ಆಯ್ಕೆಯನ್ನು ಕ್ಲಿಕ್ ಮಾಡಿ
 • ನಂತರ ವರ್ಷ ತಿಂಗಳು ನಿಮ್ಮ ಆರ್ಸಿ ನಂಬರ್ ಹಾಗೂ ಕ್ಯಾಪ್ಚ ಸಂಖ್ಯೆಯನ್ನು ನಮೂದಿಸಿ ಗೋ ಎಂದು ಕ್ಲಿಕ್ ಮಾಡಿ
 • ಅನ್ನ ಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗಿರುವ ಬಗ್ಗೆ ಸಂಪೂರ್ಣ ವಿವರ ಇಲ್ಲಿ ಕಾಣಿಸುತ್ತದೆ.
 • ಪಾವತಿ ಪ್ರಗತಿಯಲ್ಲಿ ಇದೆ ಎನ್ನುವ ಸಂದೇಶ ಕಾಣಿಸಿದ್ರೆ ನಿಮ್ಮ ಖಾತೆಗೆ ಸದ್ಯದಲ್ಲಿಯೇ ಹಣ ಜಮಾ ಆಗಲಿದೆ ಎಂದು ಅರ್ಥ.

ಇತರೆ ವಿಷಯಗಳು:

ರೈತರಿಗೆ ಸಿಗುತ್ತೆ ಬಡ್ಡಿ ರಹಿತ 3 ಲಕ್ಷ ರೂ. ಸಾಲ! ಈ ಕಾರ್ಡ್ ಇದ್ರೆ ಬೇಗ ಅಪ್ಲೈ ಮಾಡಿ

ಸರ್ಕಾರದಿಂದ ಎಲ್ಲಾ ಜನರಿಗೆ 78000 ರೂ ರಿಯಾಯಿತಿ! ಅರ್ಜಿ ನಮೂನೆ ಭರ್ತಿ ಪ್ರಾರಂಭ

ವಾಹನ ಸವಾರರಿಗೆ ಗುಡ್‌ ನ್ಯೂಸ್! ಮೇ 7 ರಂದು ಟ್ರಾಫಿಕ್ ಚಲನ್ ಮನ್ನಾಕ್ಕೆ ಸರ್ಕಾರದ ಸೂಚನೆ


Share

Leave a Reply

Your email address will not be published. Required fields are marked *