rtgh
Headlines

ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ಸಿಗಲಿದೆ ಸಬ್ಸಿಡಿ! ಜಿಲ್ಲಾವಾರು ಅರ್ಜಿ ಸಲ್ಲಿಕೆ ಹೇಗೆ?

krishi bhagya scheme karnataka
Share

ಹಲೋ ಸ್ನೇಹಿತರೇ, ರೈತರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರ ಮಾತ್ರವಲ್ಲದೆ ರಾಜ್ಯ ಸರ್ಕಾರವು ಕೂಡ ಜಾರಿಗೆ ತಂದಿದ್ದು ಇತ್ತೀಚಿನ ದಿನಗಳಲ್ಲಿ ಕೆಲವು ಪ್ರಮುಖ ಯೋಜನೆಗಳು ರೈತರ ಅಭಿವೃದ್ಧಿಗೆ ರೈತರ ಸರ್ವತೋಮುಖ ವಿಕಸನಕ್ಕೆ ಸಹಾಯಕವಾಗುವಂತೆ ಇದೆ. ಅವುಗಳಲ್ಲಿ ಕೃಷಿ ಭಾಗ್ಯ ಯೋಜನೆ ಕೂಡ ಒಂದು. ಇದು ಸಾಂಪ್ರದಾಯಿಕ ಕೃಷಿಯ ಜೊತೆಗೆ ನೀರಿನ ಅಭಾವ ಇರುವ ಸಂದರ್ಭದಲ್ಲಿಯೂ ಹೇಗೆ ಕೃಷಿ ಮಾಡಬಹುದು ಎನ್ನುವುದನ್ನು ರೈತರಿಗೆ ತಿಳಿಸಿ ಕೊಡುವ ಸಲುವಾಗಿ ಆರಂಭಿಸಲಾಗಿದೆ.

krishi bhagya scheme karnataka

Contents

ರಾಜ್ಯದಲ್ಲಿ ರೈತರಿಗೆ ಸಿಗಲಿದೆ ಕೃಷಿ ಭಾಗ್ಯ ಯೋಜನೆಯ ಪ್ರಯೋಜನ:

ಈ ಯೋಜನೆಗಾಗಿ ಸುಮಾರು 24 ಜಿಲ್ಲೆಯ 106 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಒಂದು ಪ್ಯಾಕೇಜ್ ಮಾದರಿಯ ಸೌಲಭ್ಯವನ್ನು ರೈತರಿಗೆ ನೀಡಲಾಗುತ್ತಿದೆ. ಈ ಯೋಜನೆಯ ಅಡಿಯಲ್ಲಿ ಅಂತರ್ಜಲ ಅಭಿವೃದ್ಧಿ ಮತ್ತು ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ಬೇಸಿಗೆಯಲ್ಲಿಯೂ ಕೂಡ ಕೃಷಿ ಮಾಡುವುದು ಹೇಗೆ ಎಂದು ಅದರ ಬಗ್ಗೆ ಮಾಹಿತಿ ನೀಡಲಾಗುವುದು.

ಕೃಷಿಭಾಗ್ಯ ಯೋಜನೆಯಡಿಯಲ್ಲಿ ಯಾವ ಕೆಲಸಕ್ಕೆ ಸಬ್ಸಿಡಿ ಸಿಗಲಿದೆ?

* ಕೃಷಿ ಹೊಂಡ ನಿರ್ಮಾಣ
* ಕ್ಷೇತ್ರ ಬದು ನಿರ್ಮಾಣ
* ಕೃಷಿ ಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣ
* ಪಂಪ್ಸೆಟ್ ಖರೀದಿಸಲು ಸಬ್ಸಿಡಿ
* ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಸಿಕೊಳ್ಳಲು ಸಹಾಯ

ಇದನ್ನೂ ಸಹ ಓದಿ : ಚಿನ್ನ ಕೊಳ್ಳೋರಿಗೆ ಬಿಸಿ ತುಪ್ಪ! ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

  • ರೈತರ ಜಮೀನಿನ ಪಹಣಿ ಪತ್ರ
  • ಅರ್ಜಿ
  • ಎಫ್ ಐ ಡಿ ಅಂದ್ರೆ ಫ್ರೂಟ್ಸ್ ಐಡಿ (FRUITS ID) ಹೊಂದಿರಬೇಕು.
  • ಒಂದು ವೇಳೆ ರೈತರ ಬಳಿ ಫ್ರೂಟ್ಸ್ ಐಡಿ ಇಲ್ಲದೆ ಇದ್ದರೆ ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ ಮೊದಲಾದವುಗಳನ್ನು ನೀಡಬೇಕಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಕೃಷಿ ಬಗ್ಗೆ ಆ ಯೋಜನೆಯ ಅಡಿಯಲ್ಲಿ ಸಬ್ಸಿಡಿಯನ್ನು ಒಂದೊಂದೇ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತಿದ್ದು ಈಗ 24 ಜಿಲ್ಲೆಗಳಲ್ಲಿ ಮಾತ್ರ ಕಾಣಬಹುದು. ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ. ಅವರಿಂದ ಮಾಹಿತಿ ಪಡೆದುಕೊಂಡು ಸಬ್ಸಿಡಿ ಹಣಕ್ಕಾಗಿ ಅಪ್ಲೈ ಮಾಡಬಹುದು.

ಇತರೆ ವಿಷಯಗಳು:

ಈ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳು 3000‌ ರೂ. ಹಣ! ಅರ್ಜಿ ಸಲ್ಲಿಸಲು ಇಲ್ಲಿದೆ ಲಿಂಕ್

₹1000 ಮತ್ತೆ ಬರಲಾರಂಭ! ಮನೆಯಲ್ಲೇ ಕುಳಿತು ಚೆಕ್‌ ಮಾಡಿ

ಸರ್ಕಾರಿ ತರಬೇತಿ ಕೇಂದ್ರ ನೇಮಕಾತಿ!! ಆರಂಭದಲ್ಲೇ ಸಿಗತ್ತೆ ₹88,300/- ಸಂಬಳ


Share

Leave a Reply

Your email address will not be published. Required fields are marked *