ಹಲೋ ಸ್ನೇಹಿತರೆ, ಕಳೆದ ಮಾರ್ಚ್ 1ರಿಂದ ಮಾರ್ಚ್ 22 ರವರೆಗೆ ನಡೆದ 2nd ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದೆ, ವಿದ್ಯಾರ್ಥಿಗಳ ಕುತೂಹಲ ಹಾಗೂ ಭಯ ಹೆಚ್ಚಾಗಲಾರಂಭಿಸಿದೆ. ಫಲಿತಾಂಶವನ್ನು ಹೇಗೆ ಚೆಕ್ ಮಾಡುವುದು? ಫಲಿತಾಂಶ ನೀಡಲು ಸಮಸ್ಯೆ ಎದುರಾದರೇ ಏನು ಮಾಡಬೇಕು? ಈ ಎಲ್ಲಾ ಮಾಹಿತಿಯ ಬಗ್ಗೆ ಇಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಸಾಮಾನ್ಯವಾಗಿ ಪಿಯುಸಿ ಸೇರಿದಂತೆ ಯಾವುದೇ ಪರೀಕ್ಷೆಯ ಫಲಿತಾಂಶ ಚೆಕ್ ಮಾಡುವಾಗ ಅನೇಕರು ಸಮಸ್ಯೆ ಎದುರಿಸುತ್ತಾರೆ. ಎಷ್ಟೇ ಬಾರಿ ರಿಸಲ್ಟ್ ಚೆಕ್ ಮಾಡಿದರೂ ಸರ್ವರ್ ಸಮಸ್ಯೆಯಿಂದ ಫಲಿತಾಂಶವೂ ಸಿಗದೆವ ಒದ್ದಾಡುತ್ತಿರುತ್ತಾರೆ, ಇತ್ತ ಅದಕ್ಕೆ ಪರಿಹಾರವೂ ಸಿಗದೆ ಗೊಂದಲಕ್ಕೊಳಗಾಗುತ್ತಾರೆ. ಅಂತವರಿಗೆಂದೇ ಈ ಪರಿಹಾರದ ಮಾರ್ಗವನ್ನು ನೀಡಲಾಗಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಬಹುಮುಖ್ಯವಾದ ಹಂತವಾದ ದ್ವಿತೀಯ ಪಿಯುಸಿ ಫಲಿತಾಂಶ ಸುಲಭವಾಗಿ ಪರಿಶೀಲನೆ ಮಾಡಲು ಇಷ್ಟು ಮಾಡಿ ಸಾಕು.
ಇದನ್ನು ಓದಿ: ಇಂದು ಬೆಳಿಗ್ಗೆ 11 ಗಂಟೆಗೆ ದ್ವಿತೀಯ PUC ಫಲಿತಾಂಶ ಔಟ್!
Contents
ಫಲಿತಾಂಶ ಪರಿಶೀಲಿಸುವಾಗ ಸಮಸ್ಯೆ ಬಂದ್ರೆ ಏನು ಮಾಡಬೇಕು?
ಮೊದಲು ನಿಮ್ಮ ಮೊಬೈಲ್‌ನಲ್ಲಿ ಕರ್ನಾಟಕ ಶಾಲಾ ಪರೀಕ್ಷೆಯ ಅಧಿಕೃತ ವೆಬ್‌ಸೈಟ್ karresults.nic.in ಎಂದು ಟೈಪ್ ಮಾಡಿ ಗೂಗಲ್‌ನಲ್ಲಿ ಸರ್ಚ್ ಮಾಡಬೇಕು. ನಂತರ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ವಿವರಗಳನ್ನು ಟೈಪ್ ಮಾಡಿ ಕ್ಲಿಕ್ ಮಾಡಿದರೆ ನಿಮ್ಮ ಫಲಿತಾಂಶ ಸಾಮಾನ್ಯವಾಗಿ ಕಾಣಬೇಕು. ಆದರೆ ಕೆಲವೊಬ್ಬರಿಗೆ ರಿಸಲ್ಟ್ ಸಿಗದೇ ಮತ್ತೊಮ್ಮೆ ಪ್ರಯತ್ನಿಸಿ ಅಥವಾ ಇನ್ಯಾವುದಾದರೂ ಸಂದೇಶ ಕಾಣಿಸುತ್ತದೆ.
ಫಲಿತಾಂಶವನ್ನು ನೇರವಾಗಿ ನೋಡಲು ಇಲ್ಲಿ ನೀಡಿರುವ “2nd PUC Results App 2024” ಅನ್ನು ಡೌನ್‌ಲೋಡ್ ಮಾಡಿ
2nd PUC Results | Click Here |
ಸಾಮಾನ್ಯವಾಗಿ ಫಲಿತಾಂಶ ಚೆಕ್ ಮಾಡುವ ಕೆಲವೊಮ್ಮೆ ಆತುರದಿಂದ ತಪ್ಪಾದ ಸಂಖ್ಯೆಗಳು ಅಥವಾ ವಿವರಗಳನ್ನು ಹಾಕಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀವು ನಿಮ್ಮ ರಿಜಿಸ್ಟರ್ ನಂಬರ್ ಅನ್ನು ಸರಿಯಾಗಿ ಹಾಕಿದ್ದೀರಾ ಎಂದು ಚೆಕ್ ಮಾಡಿ. ನಂತರ ನೀವು ನಿಮ್ಮ ಇತರ ವಿವರಗಳನ್ನು ಸರಿಯಾಗಿ ಹಾಕಿದ್ದೀರಾ ಎಂದು ಪರಿಶೀಲನೆ ಮಾಡಿ ನಂತರ ಮತ್ತೊಮ್ಮೆ ಫಲಿತಾಂಶ ಚೆಕ್ ಮಾಡಿ. ಆಗಲೂ ನಿಮಗೆ ಇದೇ ರೀತಿ ಎರರ್ ಕಾಣಿಸಿಕೊಂಡರೆ ನೀವು ಹೊಸದಾಗಿ ಗೂಗಲ್ ಪುಟ ಓಪನ್ ಮಾಡಿ ಆರಂಭದಿಂದ ಸರ್ಚ್ ಮಾಡಿ. ಆಗ ಖಂಡಿತವಾಗಿಯೂ ನಿಮಗೆ ಫಲಿತಾಂಶ ಕಾಣಸಿಗುತ್ತದೆ.
ರಿಸಲ್ಟ್ ಚೆಕ್ ಮಾಡೋದು ಹೇಗೆ?
- ಹಂತ 1: ನೀವು karresults.nic.in ಅಥವಾ pue.kar.nic ಪಿಯುಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಹಂತ 2: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ.
- ಹಂತ 3: ಲಾಗಿನ್ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆಯೊಂದಿಗೆ ಯಾವ ವಿಭಾಗವೆಂದು ಕ್ಲಿಕ್ ಮಾಡಬೇಕು(ವಿಜ್ಞಾನ, ವಾಣಿಜ್ಯ ಮತ್ತು ಕಲೆ ಆಯ್ಕೆ ಮಾಡಿಕೊಳ್ಳಿ)
- ಹಂತ 4: ಕ್ಲಿಕ್ ಮಾಡಿದ ನಂತರ ನಿಮಗೆ ಫಲಿತಾಂಶವು ಸ್ಕ್ರೀನ್ ಮೇಲೆ ಕಾಣಿಸುತ್ತದೆ.
- ಹಂತ 5: ಈಗ ನೀವು ನಿಮ್ಮ ಫಲಿತಾಂಶವನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇತರೆ ವಿಷಯಗಳು:
ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆ! ತಕ್ಷಣ ಈ ಲಿಂಕ್ ಮೂಲಕ ಚೆಕ್ ಮಾಡಿ
ಈ ದಾಖಲೆ ಇಲ್ಲದಿದ್ದರೆ ಖಾತೆಗೆ ಬರಲ್ಲ ಹಣ! ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ಬಿಡುಗಡೆ