rtgh
Headlines

2nd PUC ಪಾಸಾದವರಿಗೆ ಹೊಸ ಅಪ್ಡೇಟ್.! ಇನ್ಮುಂದೆ TC ಆನ್‌ಲೈನ್‌ನಲ್ಲೇ ಲಭ್ಯ

karnataka migration certificate
Share

ಹಲೋ ಸ್ನೇಹಿತರೇ, 2nd PUC ಪಾಸ್‌ ಮಾಡಿದ ವಿದ್ಯಾರ್ಥಿಗಳು ಮುಂದಿನ ಶಿಕ್ಷಣದ ಪ್ರವೇಶ ವೇಳೆ ತಾವು ಓದಿದ ಕಾಲೇಜಿನಿಂದ ಪಡೆದ ವಲಸೆ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಇದನ್ನು ಪಡೆಯಲು ಈಗ ಓದಿದ ಕಾಲೇಜಿಗೆ ಹೋಗುವ ಅಗತ್ಯವಿಲ್ಲ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

karnataka migration certificate

2nd PUC ಪಾಸಾದ ವಿದ್ಯಾರ್ಥಿಗಳು ತಮ್ಮ ಮುಂದಿನ ಯಾವುದೇ ಶಿಕ್ಷಣಕ್ಕೆ ಪ್ರವೇಶ ಪಡೆಯಲು ತಾವು ಓದಿದ ಕಾಲೇಜಿನಿಂದ ಕಡ್ಡಾಯವಾಗಿ ವಲಸೆ ಪ್ರಮಾಣ ಪತ್ರವನ್ನು ಪಡೆಯಬೇಕಿರುತ್ತದೆ. ಅದನ್ನು ತಾವು ಮುಂದೆ ಎಲ್ಲಿ ಪ್ರವೇಶ ಪಡೆಯುತ್ತೀರೋ ಅಲ್ಲಿ ನೀಡಬೇಕು.

ಇಷ್ಟು ವರ್ಷಗಳವರೆಗೆ ವಿದ್ಯಾರ್ಥಿಗಳು ತಮ್ಮ ವಲಸೆ ಪ್ರಮಾಣ ಪತ್ರ ಪಡೆಯಲು ತಾವು ಓದಿರುವ ಕಾಲೇಜಿಗೆ ಬಂದು ಭೌತಿಕವಾಗಿ ಅರ್ಜಿ ಸಲ್ಲಿಸಿ, ಪ್ರಮಾಣ ಪತ್ರ ಪಡೆದುಕೊಳ್ಳಬೇಕಿತ್ತು. ಆದರೆ ಈಗ ಈ ಸೌಲಭ್ಯವನ್ನು ಆನ್‌ಲೈನ್‌ ಮೂಲಕವೇ ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯನಿರ್ಣಯ ಮಂಡಲಿಯೇ ನೀಡುತ್ತಿದೆ. ವಿದ್ಯಾರ್ಥಿಗಳು ಈಗ ಕಾಲೇಜಿಗೆ ವಲಸೆ ಪ್ರಮಾಣಪತ್ರಕ್ಕಾಗಿ ಅಲೆಯುವ ಅಗತ್ಯವಿರುವುದಿಲ್ಲ. ನಿಮ್ಮ ಮನೆಯಿಂದ ಮೊಬೈಲ್‌ನಲ್ಲೇ, ಲ್ಯಾಪ್‌ಟಾಪ್‌ನಲ್ಲೇ ವರ್ಗಾವಣೆ ಪ್ರಮಾಣ ಪತ್ರ ಪಡೆಯಲು ಅಪ್ಲೇ ಮಾಡಿ, ನಿಮಿಷದಲ್ಲೇ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ನೀವು ಡೌನ್‌ಲೋಡ್‌ ಮಾಡಿದ ಈ ವಲಸೆ ಪ್ರಮಾಣ ಪತ್ರವನ್ನು ನಂತರ DTP ಸೆಂಟರ್‌ಗಳಲ್ಲಿ ಪ್ರಿಂಟ್ ತೆಗೆಸಿಕೊಳ್ಳಬಹುದಾಗಿದೆ. ಹಾಗಿದ್ರೆ ಅರ್ಜಿ ಹಾಕುವುದು ಹೇಗೆ ಎಂದು ತಿಳಿಯಿರಿ.

ಯಾರೆಲ್ಲ ಆನ್‌ಲೈನ್‌ ಮೂಲಕ ವಲಸೆ ಪ್ರಮಾಣ ಪತ್ರಕ್ಕಾಗಿ ಅರ್ಜಿ ಹಾಕಬಹುದು?

2008 ಕ್ಕೂ ಹಿಂದಿನ ವರ್ಷಗಳಲ್ಲಿ 2nd PUC ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಶಾಲೆಗೆ ಭೇಟಿ ನೀಡಿ ಭೌತಿಕವಾಗಿ ಅರ್ಜಿ ಹಾಕುವ ಮೂಲಕ ವಲಸೆ (ವರ್ಗಾವಣೆ) ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು. 2008 ರ ನಂತರದಲ್ಲಿ ಪಾಸಾದವರು ಆನ್‌ಲೈನ್‌ ಮೂಲಕ ಅರ್ಜಿ ಹಾಕಬಹುದು.

ದ್ವಿತೀಯ ಪಿಯುಸಿ ಪಾಸಾದವರು ವಲಸೆ ಪ್ರಮಾಣ ಪತ್ರಕ್ಕಾಗಿ ಆನ್‌ಲೈನ್‌ ಅರ್ಜಿ ಹಾಕುವ ವಿಧಾನ

– ಕೆಎಸ್‌ಇಎಬಿ ಮಂಡಲಿಯ ಅಧಿಕೃತ ವೆಬ್‌ಸೈಟ್‌ https://kseab.karnataka.gov.in/ ಗೆ ಭೇಟಿ ನೀಡಿ.
– ತೆರೆದ ವೆಬ್‌ಪುಟದಲ್ಲಿ ‘ಆನ್‌ಲೈನ್‌ ಸೇವೆಗಳು’ ಎಂದಿರುತ್ತದೆ ಗಮನಿಸಿ.
– ‘2nd PUC’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಹಲವು ಆಯ್ಕೆಗಳು ಕಂಡುಬಹುತ್ತದೆ.
– 2nd PUC ಪಾಸಾದವರು ‘ ಪಿಯುಸಿ ವಲಸೆ ಪ್ರಮಾಣ ಪತ್ರ ಪಡೆಯುವುದು’ ಎಂಬುದನ್ನು ಕ್ಲಿಕ್ ಮಾಡಿ.
– ಮತ್ತೊಂದು ವೆಬ್‌ಪೇಜ್‌ ಓಪನ್‌ ಆಗುತ್ತದೆ.
– ಈ ವೆಬ್‌ಪುಟದಲ್ಲಿ ‘Apply for Migration Certificate’ ಕ್ಲಿಕ್ ಮಾಡಿ.
– 2nd PUC ನೋಂದಣಿ ಸಂಖ್ಯೆ, ವರ್ಷ, ತಿಂಗಳು ಮಾಹಿತಿ ನೀಡಿ. ‘View’ button ಮೇಲೆ ಕ್ಲಿಕ್ ಮಾಡಿ.
– ನಿಮ್ಮ ಎಲ್ಲಾ ಮಾಹಿತಿಗಳು ಕಾಣಸಿಗುತ್ತದೆ. ಸರಿಯಾಗಿದ್ದರೆ ಮುಂದುವರೆದು ಕೇಳಲಾದ ಮಾಹಿತಿ ನಮೂದಿಸಿ. ‘Generate OTP’ ಕ್ಲಿಕ್ ಮಾಡಿ.
– ನೀವು ನೀಡಿದ ಮೊಬೈಲ್‌ ನಂಬರ್‌ಗೆ OTP ಬರುತ್ತದೆ. ಅದನ್ನು ನೀಡಿ ವಿವರಗಳನ್ನು ಸೇವ್‌ ಮಾಡುವುದು.
– ನಂತರ ‘Make Payment’ ಮೆನುವಿನ ಮೇಲೆ ಕ್ಲಿಕ್ ಮಾಡಿ. ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಿ.
– ಶುಲ್ಕ ಪಾವತಿಸಿದ ನಂತರದ ಕ್ಷಣದಲ್ಲೇ ವಲಸೆ ಪ್ರಮಾಣ ಪತ್ರವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಸೂಚನೆ
ನಿಗದಿತ ಶುಲ್ಕ ಪಾವತಿಯ ನಂತರವೂ Payment Not Done ಎಂದು ಬಂದಿಲ್ಲವೆಂದರೆ, ಶುಲ್ಕ ಸಂದಾಯ ವಿವರಗಳನ್ನು – PGI reference number, ಅರ್ಜಿ ಸಂಖ್ಯೆ, ಅಭ್ಯರ್ಥಿಯ ಹೆಸರು ವಿವರಗಳನ್ನು – [email protected] ಗೆ ಇ-ಮೇಲ್‌ ಮಾಡಬೇಕು.

ಇತರೆ ವಿಷಯಗಳು

ಶಾಲಾ ಶಿಕ್ಷಕರಿಗೆ ಸಿಹಿಸುದ್ದಿ! SSLC ವಿಶೇಷ ತರಗತಿ ನಡೆಸುವ ಶಿಕ್ಷಕರಿಗೆ ಗಳಿಕೆ ರಜೆ

SSLC Exam-2: ಜೂ.14 ರಿಂದ 2ನೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭ!


Share

Leave a Reply

Your email address will not be published. Required fields are marked *