rtgh
Headlines

‘HSRP’ ನಂಬರ್ ಪ್ಲೇಟ್‌ ಹಾಕಿಸಲು ಡೆಡ್‌ ಲೈನ್; ಜೂನ್ 1 ರಿಂದ ಬೀಳುತ್ತೆ ದಂಡ ಹುಷಾರು!

hsrp number plate deadline
Share

ಹಲೋ ಸ್ನೇಹಿತರೇ, ಕರ್ನಾಟಕ ಸಾರಿಗೆ ಇಲಾಖೆಯು ರಾಜ್ಯದಲ್ಲಿ ಎಲ್ಲ ವಾಹನಗಳಿಗೂ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳು (HSRP) ಅಳವಡಿಕೆಗೆ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರ ಈಗಾಗಲೇ 3 ಬಾರಿ ಅವಧಿ ವಿಸ್ತರಣೆ ಮಾಡಿ ಮೇ 31ಕ್ಕೆ ಗಡುವು ವಿಸ್ತರಿಸಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..

hsrp number plate deadline

2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್ನಲ್ಲಿ ಅಧಿಸೂಚನೆ ಹೊರಡಿಸಿತ್ತು. ರಾಜ್ಯದಲ್ಲಿ ಸುಮಾರು ಎರಡು ಕೋಟಿ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಗತ್ಯವಿದೆ ಎಂದು ಸಾರಿಗೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ರಾಜ್ಯ ಸಾರಿಗೆ ಇಲಾಖೆ ಮೇ. 31ರವರೆಗೆ ಎಚ್ ಎಸ್ ಆರ್ ಪಿ ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಅದಾದನಂತರ ಜೂ. 1 ರಿಂದ ಪೊಲೀಸ್ ಇಲಾಖೆ ಜೊತೆಗೂಡಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಅವಧಿಯೊಳಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ 500 ರೂ.ನಿಂದ 1,000 ರೂ.ವರೆಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಸಹ ಓದಿ : ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ! ಹೊಸ ದರ ಬಿಡುಗಡೆ

ರಾಜ್ಯದಲ್ಲಿ 2019 ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಿರುವ ಸುಮಾರು 2 ಕೋಟಿ ದ್ವಿಚಕ್ರ, ತ್ರಿಚಕ್ರ, ಲಘು ಮೋಟಾರು ವಾಹನ, ಪ್ರಯಾಣಿಕ ಕಾರುಗಳು, ಮಧ್ಯಮ, ಭಾರಿ ವಾಣಿಜ್ಯ ವಾಹನ, ಟ್ರೈಲರ್‌, ಟ್ರ್ಯಾಕ್ಟರ್‌ಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ.

ಎಚ್‌ಎಸ್‌ಆರ್‌ಪಿ ಅಳವಡಿಸದಿದ್ರೆ ವಾಹನ ಮಾಲೀಕತ್ವ, ವಿಳಾಸ ವರ್ಗಾವಣೆ, ಕಂತು ಕರಾರು ನಮೂದು, ರದ್ದತಿ, ಅರ್ಹತಾಪತ್ರ ನವೀಕರಣ ಸೇವೆಗೆ ಅನುಮತಿ ಇರುತ್ತಿರಲಿಲ್ಲ. ಹಾಗೇ ಇದರ ಜೊತೆ ಭಾರಿ ಪ್ರಮಾಣದ ದಂಡ ಕೂಡ ಮಾರ್ಗಸೂಚಿ ಪಾಲಿಸದ ವಾಹನ ಮಾಲೀಕರಿಗೆ ತಟ್ಟುತ್ತಿತ್ತು.

ಇತರೆ ವಿಷಯಗಳು:

ಇಂದಿನಿಂದ ಈ ಜಿಲ್ಲೆಗಳಲ್ಲಿ 5 ದಿನ ಆಲಿಕಲ್ಲು ಸಹಿತ ಮಳೆ..!

ಗೃಹಲಕ್ಷ್ಮಿ10ನೇ ಕಂತಿನ ಹಣ ಖಾತೆಗೆ ಜಮೆ ! ಹಣ ಜಮಾ ಆಗದೇ ಇರುವವರು ಈ ರೀತಿ ಮಾಡಿ

ಪ್ರತಿ ತಿಂಗಳಿಗೆ ₹95 ಸಾವಿರ ಸಂಬಳ.! ಈ ಕೆಲಸಕ್ಕೆ ಇಂದೇ ಅರ್ಜಿಯನ್ನು ಸಲ್ಲಿಸಿ


Share

Leave a Reply

Your email address will not be published. Required fields are marked *