ಬೆಂಗಳೂರು: ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮೀ ಹಣ ಬಾರದೇ ಇರುವ ಮತ್ತೊಂದು ಅಪ್ ಡೇಟ್ ಅನ್ನು ನೀಡಲಾಗಿದೆ. ಅದೇ ಯಜಮಾನಿಯರಿಗೆ ಹಣ ಬರದೇ ಇದ್ರೆ, ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಂತೆ ಸೂಚನೆಯನ್ನು ನೀಡಲಾಗಿದೆ.
ಇದರ ಬಗ್ಗೆ ರಾಜ್ಯ ಸರ್ಕಾರದಿಂದ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದ್ದು, ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಂಡು, ಕೆಲ ಮಹಿಳೆಯರಿಗೆ ದುಡ್ಡು ಬಾರದೇ ಇರುವುದರ ಬಗ್ಗೆ ದೂರುಗಳು ಬರುತ್ತಿವೆ.
ಈ ಸಮಸ್ಯೆಗಳ ನಿವಾರಣೆಗಾಗಿ ಯಜಮಾನಿಯರು ಕೆಲವು ತಾಂತ್ರಿಕ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುವಂತೆ ತಿಳಿಸಿದೆ.
ಸರ್ಕಾರದ ಗೃಹಲಕ್ಷ್ಮೀ ರೂ.2000 ಹಣವು ಬಾರದಂತ ಮಹಿಳೆಯರು, ತಪ್ಪದೇ KYC ಯನ್ನು ಮಾಡಿಸುವಂತೆ ತಿಳಿಸಿದೆ. ಅಲ್ಲದೇ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು. ರೇಷನ್ ಕಾರ್ಡ್ ನಲ್ಲಿರೋ ಪ್ರತಿಯೊಬ್ಬ ಸದಸ್ಯರ KYC ಅಪ್ಡೇಟ್ ಆಗಿರಬೇಕು.
ಇದನ್ನೂ ಸಹ ಓದಿ: ಜೂನ್‌ನಲ್ಲಿ ಬ್ಯಾಂಕ್‌ಗಳಿಗೆ ಭರ್ಜರಿ ರಜೆ! ಇಷ್ಟು ದಿನ ಸಿಗಲ್ಲ ಬ್ಯಾಂಕ್ ಸೇವೆ
ಇನ್ನೂ ಪಡಿತರ ಚೀಟಿಯ ಸದಸ್ಯರು ಬ್ಯಾಂಕ್ ಗೆ ತೆರಳಿ ತಮ್ಮ ಆಧಾರ್ ಸಂಖ್ಯೆ ನೀಡಿ, KYC ಅಪ್ಡೇಟ್ ಮಾಡಿಸಿಕೊಳ್ಳಬೇಕು. ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳು NPCI ಮಾಡಿಸಿಕೊಳ್ಳುಚುದು ಕಡ್ಡಾಯವಾಗಿದೆ. ಬ್ಯಾಂಕ್ ಖಾತೆಯಲ್ಲಿನ ಹೆಸರು, ಆಧಾರ್ ಕಾರ್ಡ್ ನಲ್ಲಿನ ಹೆಸರು ಒಂದೇ ಆಗಿದ್ಯಾ ಅಂತ ಚೆಕ್ ಮಾಡಿಕೊಳ್ಳಿ. ತಪ್ಪಿದ್ದರೇ ಸರಿ ಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.
ಈ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಮಾಡಿಕೊಂಡರೆ, ಪ್ರತಿ ತಿಂಗಳು 2000 ರೂ. ನಿಮ್ಮ ಬ್ಯಾಂಕ್ ಖಾತೆಗೆ ಜಮಾವಾಗಲಿದೆ ಎಂದು ರಾಜ್ಯ ಸರ್ಕಾರ ಮಾಹಿತಿಯನ್ನು ನೀಡಿದೆ.
ಇತರೆ ವಿಷಯಗಳು:
ಇನ್ಮುಂದೆ ಉಚಿತ ಕರೆಂಟ್ ಬಿಲ್ನಿಂದ ಆಧಾರ್ ಡೀಲಿಂಕ್ ಮಾಡುವುದು ಇನ್ನೂ ಸುಲಭ!
ಜೂನ್ 1 ರಿಂದ ಡಿಎಲ್‌ಗಾಗಿ ಆರ್‌ಟಿಒಗೆ ಭೇಟಿ ನೀಡುವ ಅಗತ್ಯವಿಲ್ಲ! ಹೊಸ ನಿಯಮ