rtgh
Headlines

ಇ‌ನ್ಮುಂದೆ ಉಚಿತ ಕರೆಂಟ್ ಬಿಲ್​ನಿಂದ ಆಧಾರ್ ಡೀಲಿಂಕ್ ಮಾಡುವುದು ಇನ್ನೂ ಸುಲಭ!

Aadhaar Delink from Current Bill
Share

ಹಲೋ ಸ್ನೇಹಿತರೇ, ಗೃಹಜ್ಯೋತಿ ಸ್ಕೀಮ್ ರಾಜ್ಯಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿದೆ. ಬಹುತೇಕ ಕುಟುಂಬಗಳು ಇದರ ಪ್ರಯೋಜನ ಪಡೆಯುತ್ತಿವೆ. 200 ಯುನಿಟ್​ಗಳೊಳಗೆ ವಿದ್ಯುತ್ ಬಳಸುವ ಗ್ರಾಹಕರಿಗೆ ಉಚಿತವಾಗಿ ವಿದ್ಯುತ್ ಒದಗಿಸುವ ಈ ಯೋಜನೆಯಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡಬೇಕಾಗುತ್ತದೆ. ಒಂದು ಕಡೆ ಲಿಂಕ್ ಆಗಿರುವ ಆಧಾರ್ ಅನ್ನು ಇನ್ನೊಂದು ಕನೆಕ್ಷನ್​ಗೆ ಲಿಂಕ್ ಮಾಡಲು ಆಗುವುದಿಲ್ಲ. ಮನೆ ಬದಲಾಯಿಸುವ ಬಾಡಿಗೆದಾರರಿಗೆ ಇದರಿಂದ ಸಮಸ್ಯೆ ಆಗುತ್ತಿದೆ. ಸರ್ಕಾರ ಇದನ್ನು ಪರಿಗಣಿಸಿ, ಬಿದ್ಯುತ್ ಬಿಲ್​ನಿಂದ ಆಧಾರ್ ಡೀಲಿಂಕ್ ಮಾಡುವ ಅವಕಾಶ ಕೊಟ್ಟಿದೆ.

Aadhaar Delink from Current Bill

ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಸ್ಕೀಮ್​ಗಳಲ್ಲಿ ಗೃಹಜ್ಯೋತಿ ಯೋಜನೆಯೂ ಒಂದು. ಪ್ರತೀ ಮನೆಗೂ 200 ಯೂನಿಟ್​ಗಳವರೆಗೆ ಉಚಿತವಾಗಿ ವಿದ್ಯುತ್ ಸರಬರಾಜು ಒದಗಿಸುವ ಯೋಜನೆ ಇದಾಗಿದೆ. ಪ್ರತೀ ಬೆಸ್ಕಾಂ ಖಾತೆಗೂ ಒಂದು ಆಧಾರ್ ನಂಬರ್ ಅನ್ನು ಲಿಂಕ್ ಮಾಡಿದರೂ ಸಾಕು ಗೃಹಜ್ಯೋತಿ ಸ್ಕೀಮ್ ಚಾಲೂ ಆಗುತ್ತದೆ. 200 ಯೂನಿಟ್​ಗಿಂತ ಕಡಿಮೆ ವಿದ್ಯುತ್ ವ್ಯಯಿಸುವ ಮನೆಗಳಿಗೆ ಈ ಸ್ಕೀಮ್ ಅನ್ವಯ ಆಗುತ್ತದೆ. ಬಾಡಿಗೆ ಮನೆಯಲ್ಲಿರುವವರು ವಿದ್ಯುತ್ ಬಿಲ್​ಗೆ ತಮ್ಮ ಆಧಾರ್ ನಂಬರ್ ಜೋಡಿಸಿರುತ್ತಾರೆ. ಇಂಥ ಬಾಡಿಗೆದಾರರು ಮನೆ ಬದಲಾಯಿಸಿ ಬೇರೆ ಮನೆಗೆ ಬಾಡಿಗೆಗೆ ಹೋದಾಗ ಹೇಗೆ? ಹಿಂದಿನ ಮನೆಯ ವಿದ್ಯುತ್ ಬಿಲ್​ಗೆ ಆಧಾರ್ ಲಿಂಕ್ ಆಗಿರುವುದರಿಂದ ಬದಲಾಯಿಸಲಾದ ಮನೆಯ ವಿದ್ಯುತ್ ಬಿಲ್​ಗೆ ಅದೇ ಆಧಾರ್ ಜೋಡಿಸಲು ಆಗುವುದಿಲ್ಲ. ಬಹಳಷ್ಟು ಬಾಡಿಗೆದಾರರು ಇದೇ ವಿಚಾರವಾಗಿ ಪರಿತಪಿಸುತ್ತಿದ್ದಾರೆ.

ಈ ಸಮಸ್ಯೆಯು ಸರ್ಕಾರ ಮತ್ತು ಎಸ್ಕಾಂಗಳ ಅರಿವಿಗೆ ಬಂದಿದೆ. ಗೃಹಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಬಿಲ್​ನಿಂದ ಆಧಾರ್ ಅನ್ನು ಡೀಲಿಂಕ್ ಮಾಡುವ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಆಫ್​ಲೈನ್​ನಲ್ಲಿ ಇದನ್ನು ಮಾಡಬಹುದು. ಅಂದರೆ ನಿಮ್ಮ ಎಸ್ಕಾಂ ಕಚೇರಿಗೆ ಹೋಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆಧಾರ್ ಡೀಲಿಂಕ್ ಮಾಡಬಹುದು. ಆನ್​ಲೈನ್​ನಲ್ಲಿ ಸೇವಾ ಸಿಂಧು ಪೋರ್ಟಲ್​ನಲ್ಲಿ ಆದಷ್ಟೂ ಬೇಗ ಈ ಸೌಲಭ್ಯ ಲಭ್ಯ ಇರಲಿದೆ ಎಂಬ ಮಾಹಿತಿ ಗೊತ್ತಾಗಿದೆ.

ಆಫ್​ಲೈನ್​ನಲ್ಲಿ ಗೃಹಜ್ಯೋತಿ ಸ್ಕೀಮ್​ನಿಂದ ಆಧಾರ್ ಡೀಲಿಂಕ್ ಮಾಡುವ ಪ್ರಕ್ರಿಯೆ:

ನಿಮ್ಮ ಮನೆಗೆ ಸಮೀಪದ ಎಸ್ಕಾಂ ಕಚೇರಿಗೆ ಹೋಗಿ ಆಧಾರ್ ಡೀಲಿಂಕ್ ಮಾಡಿಸಬಹುದು. ಮನೆಯ ವಿದ್ಯುತ್ ಬಿಲ್, ಲಿಂಕ್ ಆಗಿರುವ ಆಧಾರ್ ಕಾರ್ಡ್ ಪ್ರತಿ, ನಿಮ್ಮ ಭಾವಚಿತ್ರ, ಬಾಡಿಗೆ ಕರಾರು ಪತ್ರ ಈ ದಾಖಲಾತಿಗಳನ್ನು ಜೊತೆಯಲ್ಲಿ ಕೊಂಡೊಯ್ಯಿರಿ. ಹಾಗೆಯೇ, ಗೃಹಜ್ಯೋತಿ ಸ್ಕೀಮ್​ಗೆ ಅರ್ಜಿ ಸಲ್ಲಿಸಲಾಗಿದ್ದ ಅಪ್ಲಿಕೇಶನ್ ನಂಬರ್ ಮತ್ತು ಮೊಬೈಲ್ ನಂಬರ್​ನ ಮಾಹಿತಿಯನ್ನು ಕಚೇರಿಯಲ್ಲಿ ತಿಳಿಸಬೇಕಾಗುತ್ತದೆ.

ಇದನ್ನೂ ಸಹ ಓದಿ : ದೇಶಾದ್ಯಂತ ನಾಗರಿಕರಿಗೆ 60,000 ರೂಪಾಯಿಗಳ ಜೀವಮಾನದ ಪಿಂಚಣಿ ಘೋಷಣೆ!!

ಆನ್​ಲೈನ್​ನಲ್ಲಿ ಗೃಹಜ್ಯೋತಿ ಯೋಜನೆ ರದ್ದು ಮಾಡುವ ಕ್ರಮ:

ಆನ್​ಲೈನ್​ನಲ್ಲಿ ಗೃಹ ಜ್ಯೋತಿ ಸ್ಕೀಮ್ ಅಡಿಯಲ್ಲಿ ಆಧಾರ್ ಡೀಲಿಂಕ್ ಮಾಡುವ ಸೌಲಭ್ಯ ಈಗ ಇಲ್ಲ. ಶೀಘ್ರದಲ್ಲೇ ಇದು ಲಭ್ಯವಾಗಲಿದೆ. ಆಗ ನೀವು ಸೇವಾ ಸಿಂಧು ವೆಬ್​ಸೈಟ್​ಗೆ ಹೋಗಿ ಸ್ಕೀಮ್ ಕ್ಯಾನ್ಸಲ್ ಮಾಡಬಹುದು. ಪೋರ್ಟಲ್​ನ ವಿಳಾಸ ಇಂತಿದೆ: sevasindhugs1.karnataka.gov.in/gruhajyothi

  • ಇಲ್ಲಿ ಮುಖ್ಯಪುಟದಲ್ಲಿ ‘ಗೃಹಜ್ಯೋತಿ ಅರ್ಜಿ ರದ್ದುಗೊಳಿಸಿ’ ಎನ್ನುವ ಲಿಂಕ್ ಇರುತ್ತದೆ.
  • ರದ್ದುಗೊಳಿಸಲು ಇರುವ ಕಾರಣ ಸೇರಿದಂತೆ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ
  • ಅಲ್ಲಿ ಕೇಳಲಾದ ದಾಖಲೆಗಳ ಸ್ಕ್ಯಾನ್ಡ್ ಕಾಪಿ ಅಥವಾ ಫೋಟೋಕಾಪಿಯನ್ನು ಅಪ್​ಲೋಡ್ ಮಾಡಿ ಸಲ್ಲಿಸಬೇಕು.

ಇತರೆ ವಿಷಯಗಳು:

ಜೂನ್‌ನಲ್ಲಿ ಬ್ಯಾಂಕ್‌ಗಳಿಗೆ ಭರ್ಜರಿ ರಜೆ! ಇಷ್ಟು ದಿನ ಸಿಗಲ್ಲ ಬ್ಯಾಂಕ್‌ ಸೇವೆ

ಜೂನ್‌ ನಿಂದ ಕಟ್ಟಬೇಕು ಡಬಲ್‌ ತೆರಿಗೆ! ಇಲಾಖೆಯಿಂದ ಹೊಸ ನಿಯಮ ಜಾರಿ

‌UPI ಬಳಕೆದಾರರಿಗೆ ಶಾಕಿಂಗ್‌ ಸುದ್ದಿ: ಜೂನ್‌ನಿಂದ Google Pay ಬಂದ್!


Share

Leave a Reply

Your email address will not be published. Required fields are marked *