rtgh
Headlines

ಗೃಹಲಕ್ಷ್ಮಿ ಯೋಜನೆಯಲ್ಲಿ ಹೊಸ ಅಪ್ಡೇಟ್ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್.! ಇನ್ನು ಹಣ ಜಮೆಯಾಗದವರು ತಪ್ಪದೇ ನೋಡಿ

gruhalakshmi scheme new update
Share

ಹಲೋ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಹಣ ಈಗಾಗಲೇ 6 ಕಂತುಗಳು ಮುಗಿದಿದ್ದು. ಆದರೂ ಸಹ ಕೆಲವರ ಖಾತೆಗಳಿಗೆ ಹಣ ಜಮೆಯಾಗಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಈ ಯೋಜನೆಯ ಬಗ್ಗೆ ಹೊಸ ಅಪ್ಡೇಟ್ ನೀಡಿದ್ದಾರೆ ಏನದು ಅಪ್ಡೇಟ್ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

gruhalakshmi scheme new update

Contents

ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆ ಏನು?

ಮೂರು ನಾಲ್ಕು ಬಾರಿ ಅರ್ಜಿ ಸಲ್ಲಿಸಿದರು ಕೂಡ ಖಾತೆಗೆ ಹಣ ಬಂದಿಲ್ಲ ಎಂದು ವಿಧಾನಸಭೆಯಲ್ಲಿ ಪ್ರಶ್ನೆ.

ಈಗಾಗಲೇ ಯೋಜನೆಗೆ ನೊಂದಾಯಿಸಿಕೊಂಡಿರುವ 1.21ಕೋಟಿ ಜನರಲ್ಲಿ 1.12ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣವೂ ಜಮೆಯಾಗಿದೆ. 8.21 ಲಕ್ಷ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತದೆ. ಪ್ರತಿ ತಿಂಗಳು 15 ನೇ ತಾರೀಖಿನ ನಂತರ ಖಾತೆಗೆ ಹಣ ಜಮೆಯಾಗಲಿದೆ. ಕೆಲವು ಜಿಲ್ಲೆಗಳ ಫಲಾನುಭವಿಗಳಿಗೆ e-kyc ಮಾಡಿಸದೆ ಇದ್ದರೆ / ತಪ್ಪಾದ ಬ್ಯಾಂಕ್ ಖಾತೆಯ ನಂಬರ್ ಕೊಟ್ಟಿದ್ದರೆ ಹಾಗೂ ಪಡಿತರ ಚೀಟಿಯಲ್ಲಿ ಯಜಮಾನಿ ಎಂದು ದಾಖಲಾದ ಹಣವೂ ಜಮೆಯಾಗಲಿಲ್ಲ.

ತಾಂತ್ರಿಕ ದೋಷ ಪರಿಹಾರ ಆದ ನಂತರ ಅವರ ಖಾತೆಗಳಿಗೆ ಸಹ ಹಣ ಜಮೆಯಾಗಲಿದೆ ಎಂದರು. ಹಾಗೆ ಈಗಾಗಲೇ ಮನೆಯ ಯಜಮಾನನ ಹೆಸರಿನಲ್ಲಿ ರೇಷನ್ ಕಾರ್ಡ್ ಇದ್ದರೆ ಶೀಘ್ರವೇ ಯಜಮಾನಿ ಹೆಸರಿನಲ್ಲಿ ರೇಷನ್ ಕಾರ್ಡ್ ಮಾಡಿಸಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ರೇಷನ್ ಕಾರ್ಡ್‌ನಲ್ಲಿ ಯಜಮಾನನ ಬದಲು ಯಜಮಾನಿ ಹೆಸರು ಬದಲಾವಣೆ ಮಾಡುವುದು ಹೇಗೆ?

ಸಮೀಪದ ರೇಷನ್‌ ಕಾರ್ಡ್ ಸೇವಾಕೇಂದ್ರಗಳಿಗೆ ಹೋಗಿ ಮುಖ್ಯಸ್ಥರ ಹೆಸರು ಬದಲಾವಣೆ ಮಾಡುವುದಕ್ಕೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಯೊಂದಿಗೆ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ & ಹಳೆಯ ರೇಷನ್ ಕಾರ್ಡ್ ಪ್ರತಿಯನ್ನು ನೀಡಬೇಕು. ನಂತರ ಕುಟುಂಬದ ಎಲ್ಲಾ ಸದಸ್ಯರು ಬಯೋಮೆಟ್ರಿಕ್‌ ದೃಡೀಕರಣದ ಮಾಡಿಸಬೇಕಾಗುತ್ತದೆ. ನಿಮ್ಮ ಎಲ್ಲಾ ವಿವರಗಳನ್ನು ಸೇವಾ ಕೇಂದ್ರದಲ್ಲಿ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಲಾಗುವುದು. ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಸ್ವೀಕೃತಿ ಸಂಖ್ಯೆಯು ಬರುತ್ತದೆ. ನಿಮ್ಮ ಎಲ್ಲಾ ದಾಖಲೆಗಳು ಪರಿಶೀಲನೆ ಆದ ನಂತರ ರೇಷನ್ ಕಾರ್ಡ್ ನೀಡುತ್ತಾರೆ. BPL ಕಾರ್ಡ್ ಹೊಂದಿರುವವರು ನಿಮ್ಮ ಆದಾಯ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ & BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸರ್ಕಾರವು ಹಲವಾರು ನಿಯಮಗಳನ್ನು ಜಾರಿಗೆ ಮಾಡಿದೆ

ಆನ್ಲೈನ್ ಮೂಲಕ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ಕ್ರಮಗಳು:- 

https://ahara.kar.nic.in/ಗೆ ಭೇಟಿ ನೀಡಬೇಕು.
ಮುಖಪುಟದಲ್ಲಿ ಇ-ಸೇವೆಗಳು ಎಂಬ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಎಂಬ ಆಪ್ಷನ್ ಕ್ಲಿಕ್ ಮಾಡಿಕೊಳ್ಳಬೇಕು. ಆಗ ಹೊಸ ಪೇಜ್ ಸಿಗಲಿದೆ. ನಿಮ್ಮ ಜಿಲ್ಲೆಗೆ ಹೆಸರು ಕ್ಲಿಕ್ ಮಾಡಿ ಹೊಸ ಸೇರ್ಪಡೆ/ ತಿದ್ದುಪಡಿ ಫಾರ್ಮ್‌ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು ಕುಟುಂಬದ ಎಲ್ಲಾ ಸದಸ್ಯರ ಹೆಸರು, ವಯಸ್ಸು, Aadhar card ನಂಬರ್ ಭರ್ತಿ ಮಾಡುಬೇಕು. ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪಲೋಡ್ ಮಾಡಿ ನಂತರ submit ಬಟನ್ ಕ್ಲಿಕ್ ಮಾಡಿ. ನಂತರ ಅರ್ಜಿ ಸಲ್ಲಿಕೆಯ ರಿಜಿಸ್ಟರ್‌ ನಂಬರ್‌ ಸಿಗುತ್ತದೆ. ಅದರಿಂದ ಅರ್ಜಿಯ ಸ್ಟೇಟಸ್‌ ಅನ್ನು ಟ್ರ್ಯಾಕ್‌ ಮಾಡಲು ಸಹಾಯವಾಗಲಿದೆ.

ಇತರೆ ವಿಷಯಗಳು

ಕೇಂದ್ರ ಸಚಿವ ಸಂಪುಟದಲ್ಲಿ ಕಬ್ಬು ಬೆಳೆಗಾರರಿಗೆ ಸಿಕ್ತು ಭರ್ಜರಿ ಗಿಫ್ಟ್.!‌ ಪ್ರತಿ ಕ್ವಿಂಟಲ್‌’ಗೆ 340 ರೂ ಹೆಚ್ಚಳ

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌.! ಮತ್ತೊಮ್ಮೆ ಅರ್ಜಿ ಸಲ್ಲಿಸಲು 10 ದಿನ ಕಾಲಾವಕಾಶ ನೀಡಿದ ಸರ್ಕಾರ


Share

Leave a Reply

Your email address will not be published. Required fields are marked *