rtgh
Headlines

ಕೇಂದ್ರದಿಂದ ಮಹಿಳೆಯರಿಗೆ ಭರ್ಜರಿ ಸುದ್ದಿ.! ಇನ್ಮುಂದೆ ನಿಮ್ಮದಾಗಲಿದೆ ಸ್ವಂತ ಡ್ರೋನ್

drone didi scheme
Share

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಈಗಾಗಲೇ ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ, ಇದರಿಂದ ದೇಶದಾದ್ಯಂತ ಸಾಕಷ್ಟು ಮಹಿಳೆಯರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎನ್ನಬಹುದು.

drone didi scheme

ಉದ್ಯೋಗ ಮಾಡುವ ಮಹಿಳೆಯರಿಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ರೈತ ಮಹಿಳೆಯರಿಗೂ ಕೂಡ ಅನುಕೂಲವಾಗುವಂತೆ ಮಹತ್ತರ ಯೋಜನೆ ಒಂದನ್ನು ಸರ್ಕಾರ ಘೋಷಿಸಿದೆ ಅದುವೇ ಡ್ರೋನ್ ದಿದಿ ಯೋಜನೆ.

ಏನಿದು ಡ್ರೋನ್ ದಿದಿ ಯೋಜನೆ?

ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ ನೀಡುವ ಯೋಜನೆ ಇದಾಗಿದೆ. ಮಹಿಳೆಯರು ಈ ಡ್ರೋನ್ ಅನ್ನು ಪಡೆದುಕೊಂಡು ಅದನ್ನು ಕೃಷಿ ಭೂಮಿಯಲ್ಲಿ ಗೊಬ್ಬರ ಸಿಂಪಡಣೆ ಮತ್ತು ಕೀಟನಾಶಕಗಳ ಸಿಂಪಡಣೆಗೆ ಬಳಸಿಕೊಳ್ಳಬಹುದು. ಇನ್ನೂ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಅಂದ್ರೆ 2023- 24ನೇ ಸಾಲಿನಿಂದ 2025- 26ನೇ ಹಣಕಾಸಿನ ವರ್ಷದವರೆಗೆ ಡ್ರೋನ್ ಅನ್ನು ರೈತಾಪಿ ಮಹಿಳೆಯರು ತಮ್ಮ ಕೃಷಿ ಚಟುವಟಿಕೆಗಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

Drone ಬಳಕೆಗೆ ಸಿಗುತ್ತದೆ ಟ್ರೈನಿಂಗ್

ಕೃಷಿ ಚಟುವಟಿಕೆಗೆ ಬಳಸಬಹುದಾದ ಡ್ರೋನ್ ಅನ್ನು ಹೇಗೆ ಬಳಕೆ ಮಾಡಬೇಕು ಎಂದು ಮಹಿಳೆಯರಿಗೆ ತಿಳಿದಿರುವುದಿಲ್ಲ. ಇದನ್ನು ತಿಳಿಸುವುದಕ್ಕಾಗಿಯೇ ಕೆಲವು ಮಹಿಳಾ ಪೈಲೆಟ್ ಗಳನ್ನು ಸರ್ಕಾರವೇ ನಿಗದಿ ಮಾಡಿದೆ, ಮತ್ತು ಅಂತಹ ಪೈಲೆಟ್ ಗಳಿಗೆ ಗೌರವಧನವನ್ನು ಕೂಡ ಸರ್ಕಾರದ ಕಡೆಯಿಂದ ನೀಡಲಾಗುತ್ತದೆ. ಕೃಷಿ ಚಟುವಟಿಕೆಗೆ ಡ್ರೋನ್ ಬಳಕೆ ಮಾಡಿದರೆ ಸುಮಾರು 10 ಜನ ಕೃಷಿಕರು ಮಾಡುವ ಕೆಲಸವನ್ನು ಒಂದೇ ಒಂದು ಡ್ರೋನ್ ಮಾಡುತ್ತದೆ.

ಹಾಗಾಗಿ ಕೃಷಿ ಚಟುವಟಿಕೆಗೆ ಅಗತ್ಯ ಇರುವ ಗೊಬ್ಬರ ಮತ್ತು ಔಷಧ ಸಿಂಪಡಣೆಗೆ ಡ್ರೋನ್ ಬಳಕೆ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಸರ್ಕಾರ ಮನಗಂಡಿದೆ. ಇದಕ್ಕಾಗಿ ರೈತಾಪಿ ಮಹಿಳೆಯರಿಗೆ ಡ್ರೋನ್ ನೀಡುವುದರ ಮೂಲಕ ಅವರ ಕೃಷಿ ಚಟುವಟಿಕೆಯನ್ನು ಇನ್ನಷ್ಟು ಸರಾಗವಾಗಿಸಲು ಸರ್ಕಾರ ಮುಂದಾಗಿದೆ.

ನರೇಗಾ ಕಾರ್ಮಿಕರ ಮಕ್ಕಳಿಗೆ ಸಿಹಿ ಸುದ್ದಿ.! ರಾಜ್ಯ ಸರ್ಕಾರದಿಂದ ಕೂಸಿನ ಮನೆ ಯೋಜನೆಗೆ ಚಾಲನೆ

15,000 ವೇತನ ಪಡೆಯಿರಿ

ಸ್ವ ಸಹಾಯ ಗುಂಪಿನಲ್ಲಿ ಮಹಿಳೆಯರು ಸದಸ್ಯತ್ವವನ್ನು ಹೊಂದಿರುತ್ತಾರೆ, ಹಾಗಾಗಿ ಈ ಗುಂಪಿನಲ್ಲಿ ಯಾವುದಾದರೂ ಒಬ್ಬ ಮಹಿಳೆಗೆ ಮೊದಲು ಡ್ರೋನ್ ತರಬೇತಿಯನ್ನು ನೀಡಲಾಗುತ್ತದೆ. ಮತ್ತು 15 ಸಾವಿರ ರೂಪಾಯಿ ತಿಂಗಳು ವೇತನ ನೀಡಲಾಗುತ್ತಿದೆ.

ಡ್ರೋನ್ ಖರೀದಿ ಹೇಗೆ?

ಸ್ವಸಹಾಯ ಗುಂಪುಗಳಲ್ಲಿ ಡ್ರೋನ್‌ ಅನ್ನು ಖರೀದಿ ಮಾಡಿದ ಮಹಿಳೆಯರು ಶೇಕಡ 80% ನಷ್ಟು ಆರ್ಥಿಕ ನೆರವನ್ನು ಸರ್ಕಾರ ನೀಡುತ್ತದೆ. ಡ್ರೋನ್ ಪರಿಕರ ಗಳಿಗಾಗಿ 8 ಲಕ್ಷ ರೂಪಾಯಿಗಳ ಆರ್ಥಿಕ ನೆರವನ್ನು ಪಡೆಯಬಹುದು.

ಅಗ್ರಿಕಲ್ಚರಲ್ ಇನ್ಫ್ರಾ ಫೈನಾನ್ಸಿಂಗ್ ಫೆಸಿಲಿಟಿ ಉಳಿದ ಮೊತ್ತವನ್ನು 3% ಬಡ್ಡಿ ದರದಲ್ಲಿ ನೀಡುತ್ತದೆ. ಒಟ್ಟಿನಲ್ಲಿ ಮಹಿಳೆಯರು ಕೂಡ ಇನ್ಮುಂದೆ ತಮ್ಮ ಹೊಲಕ್ಕೆ ಹೋಗದೆ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕೃಷಿ ಚಟುವಟಿಕೆಗಳನ್ನು ಮಾಡಿಕೊಳ್ಳಬಹುದು.

ಇತರೆ ವಿಷಯಗಳು:

ಮೋದಿ ಸರ್ಕಾರದ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ

ಯುವ ನಿಧಿ ಮಾಸಿಕ ಸ್ವಯಂ ಘೋಷಣೆ ಫಾರ್ಮ್: ಹಣ ಪಡೆಯಲು ಪ್ರತಿ ತಿಂಗಳು ಫಾರ್ಮ್ ಸಲ್ಲಿಸುವ ವಿಧಾನ


Share

Leave a Reply

Your email address will not be published. Required fields are marked *