rtgh
Headlines

ನರೇಗಾ ಕಾರ್ಮಿಕರ ಮಕ್ಕಳಿಗೆ ಸಿಹಿ ಸುದ್ದಿ.! ರಾಜ್ಯ ಸರ್ಕಾರದಿಂದ ಕೂಸಿನ ಮನೆ ಯೋಜನೆಗೆ ಚಾಲನೆ

kusina mane scheme
Share

ಹಲೋ ಸ್ನೇಹಿತರೇ, ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಲ್ಲಿ ಒಂದಾದ “ಕೂಸಿನ ಮನೆ” ಯೋಜನೆ ಒಂದು, ನರೇಗಾ ಕಾರ್ಮಿಕ ಮಹಿಳೆಯರ ಮಕ್ಕಳಿಗೆ ಈ ಯೋಜನೆಯನ್ನು ರೂಪಿಸಲಾಗಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

kusina mane scheme

ರಾಜ್ಯಾದ್ಯಂತ 3,787 ಕೂಸಿನ ಮನೆಗೆ ಸರ್ಕಾರವು ಚಾಲನೆಯನ್ನು ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೂಸಿನ ಮನೆ ನಿರ್ಮಾಣ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ಕೂಸಿನ ಮನೆ ರಾಜ್ಯ ಸಮಿತಿಯ ಮೇಲ್ವಿಚಾರಣೆ ಕಾರ್ಯ

  • ಯೋಜನೆಯ ಅನುಷ್ಠಾನಕ್ಕೆ ನೀತಿಯನ್ನು ರೂಪಿಸಿ, ಸರ್ಕಾರಿ ಆದೇಶ, ಮಾರ್ಗಸೂಚಿಯನ್ನು ಹೊರಡಿಸಲು ನಿರ್ದೇಶನವನ್ನು ನೀಡುವ ಕಾರ್ಯವನ್ನು ರಾಜ್ಯ ಸಮಿತಿಯು ಮಾಡಬೇಕಿದೆ.
  • ಇಲಾಖೆಯಿಂದ ಶಿಶುಪಾಲನಾ ಕೇಂದ್ರಗಳ ಕಾರ್ಯಾಚರಣೆಗೆ ಅಗತ್ಯ ಸಂಪನ್ಮೂಲ
    & ಬೆಂಬಲವನ್ನು ಪಡೆಯುವ ಸಲುವಾಗಿ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ.
  • ರಾಜ್ಯ ಮಟ್ಟದಲ್ಲಿ ಪ್ರಗತಿ ಪರಿಶೀಲನೆ ಮಾಡಲು ಅನುವಾಗುವಂತೆ ಪಂಚತಂತ್ರ 2.0 ತಂತ್ರಾಂಶದ ಅಭಿವೃದ್ಧಿ ಪಡಿಸಲು ಆಗತ್ಯ ನಿರ್ದೇಶನವನ್ನು ನೀಡಬೇಕಾಗುತ್ತದೆ.

ಕೂಸಿನ ಮನೆ ಯೋಜನೆ ಜಿಲ್ಲಾ ಮೇಲ್ವಿಚಾರಣಾ ಸಮಿತಿಯ ಕಾರ್ಯ:

  • ಶಿಶುಪಾಲನಾ ಕೇಂದ್ರಕ್ಕೆ ಉತ್ತಮ ಗುಣಮಟ್ಟದ ಆಹಾರ ಪೂರೈಕೆ.
  • ಮಕ್ಕಳಿಗೆ ಸಮತೋಲಿತ ಪೌಷ್ಟಿಕಾಂಶ..
  • ಆಹಾರ ಪಟ್ಟಿ (ಮೆನು) ನಿರ್ಧರಿಸುವಾಗ ಪೌಷ್ಟಿಕ ಆಹಾರ.
  • ಶಿಶುಪಾಲನಾ ಕೇಂದ್ರಕ್ಕೆ ಸಂಬಂಧಿಸಿದ ಕೆಲಸ ಮಾಡುತ್ತಿರುವ ಸಂಘಟನೆಯ ಜೊತೆ ಸಮನ್ವಯ ಸಾಧಿಸುವುದು.
  • ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಮಾಡುವುದು.

ತಾಲೂಕು ಮಟ್ಟದ ಕಾರ್ಯಕಾರಿ ಸಮಿತಿಯ ಕಾರ್ಯಗಳು :-

‘ಕೂಸಿನ ಮನೆ’ ಶಿಶುಪಾಲನಾ ಕೇಂದ್ರವನ್ನು ಆರಂಭಿಸಲು ಅರ್ಹವಿರುವ ಸರ್ಕಾರಿ ಕಟ್ಟಡವನ್ನು ಗುರುತಿಸಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯ ವಿದ್ಯುತ್ ಸಂಪರ್ಕ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಜವಾಬ್ದಾರಿಯುತ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಲಹಾ ಸೂಚನೆ ಪೆಟ್ಟಿಗೆ ವ್ಯವಸ್ಥೆಯನ್ನು ಮಾಡಬೇಕು. ಸಮಯಕ್ಕೆ ಸರಿಯಾಗಿ ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿಗಳು, ಹಾಲು ಮತ್ತು ಮೊಟ್ಟೆ ಸರಬರಾಜು ಆಗುವಂತೆ ನೋಡಿಕೊಳ್ಳುವುದು, ಜೊತೆಗೆ ಪೌಷ್ಟಿಕಾಂಶದ ಸಲಹೆ ಪಡೆದು ಸಮತೋಲಿತ ಆಹಾರ ಪಟ್ಟಿ ಸಿದ್ಧ ಪಡಿಸುವುದು.

ತಾಲ್ಲೂಕು ಮಟ್ಟದ ಮಾಸ್ಟರ್ ತರಬೇತುದಾರರನ್ನು ಗುರುತಿಸಿ ಜಿಲ್ಲಾ ಸಮಿತಿಗೆ ಕಳಿಸುವ ವ್ಯವಸ್ಥೆ ಮಾಡಬೇಕಾಗುತ್ತದೆ. ನರೇಗಾ ಕೂಲಿ ಕಾರ್ಮಿಕರ ಮಕ್ಕಳಿಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತದೆ. 3 ವರ್ಷದ ಒಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು ಎಂದು ಈ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.

ಕೂಸಿನ ಮನೆ ಚಾಲನೆಯ ಉಪಯೋಗ:

  • ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಮಾನ್ಯತೆಯನ್ನು ನೀಡುವ ನಿಟ್ಟಿನಲ್ಲಿ ಪ್ರಾರಂಭಗೊಳ್ಳುವ ಈ ಯೋಜನೆಯಲ್ಲಿ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಮಹಿಳೆಯರು ಧೈರ್ಯದಿಂದ ಕೆಲಸಕ್ಕೆ ಹೋಗಬಹುದಾಗಿದೆ.
  • ಮಕ್ಕಳ ಅಭಿವೃದ್ಧಿಗೆ ಉತ್ತಮ ಮಾರ್ಗವಾಗಿದೆ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರದಿಂದ ಉತ್ತಮ ದೈಹಿಕ ಬೆಳವಣಿಗೆಯನ್ನು ನೀಡಲು ಸಾಧ್ಯವಾಗುತ್ತದೆ.
  • ಒಟ್ಟಾರೆ ಈ ಯೋಜನೆಯಿಂದ ಮಹಿಳಾ ಸಬಲೀಕರಣದಿಂದ ಸಮಾಜದ ಒಟ್ಟಾರೆ ಅಭಿವೃದ್ಧಿ ಸಾಧ್ಯ & ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗಲಿದೆ.

ಇತರೆ ವಿಷಯಗಳು

ಮೋದಿ ಸರ್ಕಾರದ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ

ಯುವ ನಿಧಿ ಮಾಸಿಕ ಸ್ವಯಂ ಘೋಷಣೆ ಫಾರ್ಮ್: ಹಣ ಪಡೆಯಲು ಪ್ರತಿ ತಿಂಗಳು ಫಾರ್ಮ್ ಸಲ್ಲಿಸುವ ವಿಧಾನ


Share

Leave a Reply

Your email address will not be published. Required fields are marked *