ಹಲೋ ಸ್ನೇಹಿತರೆ, ಕೃಷಿ ಜಮೀನಿಂದ ರೈತರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕು ಅಂದರೆ ರಸ್ತೆ ಎನ್ನುವುದು ಬಹಳ ಮುಖ್ಯ. ರಸ್ತೆ ಇಲ್ಲದೆ ಇದ್ರೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಅಥವಾ ಬಂಡಿದಾರಿ ಹೊಂದಿರುವುದು ಬಹಳ ಮುಖ್ಯವಾಗಿದೆ. ಆದರೆ ಭೂಸ್ವಾಧೀನ ಕಾಯ್ದೆ ಬಂದ ನಂತರ ಕಾಲು ದಾರಿ ಅಥವಾ ಬಂಡಿದಾರಿ ಬಹಳ ವರ್ಷಗಳಿಂದ ಇದ್ದರೆ ಅದನ್ನು ಮುಚ್ಚಿ ತಮ್ಮ ಸ್ವಂತ ಜಮೀನು ವಶಡಿಸಿಕೊಂಡಿರುವವರು ಸಾಕಷ್ಟು ಜನ ಇದ್ದಾರೆ.
ಈ ಕಾರಣದಿಂದಾಗಿ ತಮ್ಮ ಜಮೀನಿಗೆ ಹೋಗಲು ಸಾಧ್ಯವಾಗದೆ ಇರುವ ರೈತರು ಕಷ್ಟ ಪಡುವಂತೆ ಆಗಿದೆ. ಆದರೆ ಈಗ ಸಾರ್ವಜನಿಕ ರಸ್ತೆ ರದ್ದಾಗುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಮಾನ ನೀಡಿದೆ.
Contents
ಹೈಕೋರ್ಟ್ ಕೇಸ್ ಅರ್ಜಿ!
ತುಮಕೂರಿನ MPMC ಗಾಗಿ ಜಮೀನು ಅನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ನಂತರದ ದಿನಗಳಲ್ಲಿ ಅಲ್ಲಿಯ ಕಾಲುದಾರಿಯನ್ನು ಸಹ ಮುಚ್ಚಲಾಗಿತ್ತು. 2019 ಫೆಬ್ರುವರಿ 5ರಂದು, APMCಗೆ ನೋಟಿಸ್ ಕೊಡಲಾಗಿತ್ತು. ಇಡೀ ಆಸ್ತಿ ಎಎಂಪಿಸಿ ಪಾಲಾಗಿದ್ದು ಯಾವುದೇ ಕಾಲು ದಾರಿ ಅಥವಾ ಓಡಾಡುವವರಿಗೆ ಅವಕಾಶ ಇಲ್ಲ ಎಂದು ಎಎಂಪಿಸಿ ತಿಳಿಸಿತ್ತು. ಹೀಗಾಗಿ ಅದರ ವಿರುದ್ಧ ನೋಟಿಸ್ ಅನ್ನು ಜಾರಿಗೊಳಿಸಲಾಗಿತ್ತು.
ಹೈಕೋರ್ಟ್ ಕೊಟ್ಟ ತೀರ್ಪು ಏನು!
ಭೂಕಂದಾಯ ಇಲಾಖೆ ಕಾಯ್ದೆ ಸೆಕ್ಷನ್ 67ರ ಅಡಿಯಲ್ಲಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಇರುವ ರಸ್ತೆಗಳನ್ನು, ಓಣಿಗಳು, ಬೀದಿಗಳು ಸರ್ಕಾರಕ್ಕೆ ಸೇರಿವೆ ಅದನ್ನು ಯಾರೂ ಕೂಡ ತನ್ನ ಸ್ವಂತ ಆಸ್ತಿಯನ್ನಾಗಿ ಮಾಡಿ ಕೊಳ್ಳುವಂತಿಲ್ಲ. ಅದು ಸಾರ್ವಜನಿಕರಿಗೆ ಸೇರಬೇಕಾಗಿದ್ದು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ತುಮಕೂರು ತಾಲೂಕಿನ ಗುಬ್ಬಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅರ್ಜಿ ವಿಚಾರಣೆ ನಡೆಸಿದ ಬಳಿಕ ನ್ಯಾಯಮೂರ್ತಿ ಗೋವಿಂದರಾಜು ಏಕ ಸದಸ್ಯ ಪೀಠ ತೀರ್ಪನ್ನು ನೀಡಿದೆ.
ಬಿ – ಖರಾಬು ಭೂಮಿ ಯಾರಿಗ್ ಸೇರಿದ್ದು!
ಖರಾಬು ವ್ಯಾಪ್ತಿಯಲ್ಲಿ ಬರುವ ಆಸ್ತಿಗೆ ಪಬ್ಲಿಕ್ ರೈಟ್ಸ್ ರದ್ದಾಗುವುದಿಲ್ಲ ಎಂದು ತಿಳಿಸಲಾಗಿದೆ. ಹಾಗಾಗಿ ಯಾರೋಬ್ಬರು ಇದು ತನ್ನ ಸ್ವಂತ ಆಸ್ತಿ ಎಂದು ಕಾಲುದಾರಿ ಅಥವಾ ಬಂಡಿದಾರಿಯನ್ನು ಮುಚ್ಚುವಂತಿಲ್ಲ. ಹೀಗಾಗಿ ರೈತರು ಇನ್ನು ಮುಂದೆ ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಇಲ್ಲ ಎಂದು ಯಾವುದೇ ರೀತಿ ಯೋಚನೆ ಮಾಡುವಂತಿಲ್ಲ. ಕಾನೂನು ಇದಕ್ಕೆ ಪರಿಹಾರ ನೀಡಿದ್ದು ಒಂದು ವೇಳೆ ಈಗಾಗಲೇ ಇರುವ ದಾರಿಯನ್ನು ಮುಚ್ಚಲು ಪ್ರಯತ್ನಿಸಿದರೆ ಅಂತರ ವಿರುದ್ಧ ದೂರು ದಾಖಲಿಸಬಹುದು.
ಇತರೆ ವಿಷಯಗಳು:
ಎಲ್ಲಾ ಮಹಿಳೆಯರಿಗೆ ₹15000! ತಕ್ಷಣ ಫಾರ್ಮ್ ಭರ್ತಿ ಮಾಡಿ
ರೈತರಿಗೆ ಸಿಗುತ್ತೆ ಬಡ್ಡಿ ರಹಿತ 3 ಲಕ್ಷ ರೂ. ಸಾಲ! ಈ ಕಾರ್ಡ್ ಇದ್ರೆ ಬೇಗ ಅಪ್ಲೈ ಮಾಡಿ