ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದಿಂದ 56,879 ರೈತರ ಒಟ್ಟು 440.30 ಕೋಟಿ ರೂ ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಆದೇಶ ಹೊರಡಿಸಲಾಗಿದೆ. ಎಷ್ಟು ರೈತರ ಸಾಲ ಮನ್ನಾ ಆಗುತ್ತದೆ ಮತ್ತು ಯಾವೆಲ್ಲಾ ಬ್ಯಾಂಕ್‌ನಲ್ಲಿ ಬಡ್ಡಿ ಮನ್ನಾವಾಗಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರಿಗೆ ಅರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ್‌ನಲ್ಲಿ ಜಮೀನಿನ ಮೇಲೆ ಪಡೆದಿರುವ ಮಧ್ಯಮಾವಧಿ, ದೀರ್ಘಾವಧಿ ಸುಸ್ತಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿದೆ. ಸಂಪೂರ್ಣ ಬಡ್ಡಿ ಮನ್ನಾಕ್ಕೆ ಯಾರೆಲ್ಲ ಅರ್ಹರು? ಅರ್ಹತಾ ಮಾನದಂಡಗಳೇನು?
ಯಾವೆಲ್ಲಾ ಬ್ಯಾಂಕ್ ಗಳಲ್ಲಿನ ಬಡ್ಡಿ ಮನ್ನಾ ಅಗಲಿದೆ:
ಗ್ರಾಮೀಣ ಭಾಗಗಳಲ್ಲಿನ ಸಹಕಾರ ಸಂಘಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ & ಪ್ರಾಥಮಿಕ ಸಹಕಾರಿ & ಗ್ರಾಮೀಣಾಭಿವೃದ್ದಿ ಬ್ಯಾಂಕ್‌ನಲ್ಲಿನ ಕೃಷಿ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದು.
ಬಡ್ಡಿ ಮನ್ನಕ್ಕೆ ಯಾರೆಲ್ಲಾ ಅರ್ಹರು?
ಈ ಮೇಲೆ ತಿಳಿಸಿರುವ ಬ್ಯಾಂಕ್‌ನಲ್ಲಿ ಕೃಷಿ ಸಾಲವನ್ನು ಮಾಡಿರುವ ರೈತರುಗಳು 31 ಡಿಸೆಂಬರ್ 2023 ರವರೆಗಿನ ಕಂತನ್ನು 20 ಫೆಬ್ರವರಿ 2024 ರ ಒಳಗಾಗಿ ನೀವು ಸಾಲವನ್ನು ಪಡೆದ ಸಂಬಂಧಪಟ್ಟ ಶಾಖೆಯಲ್ಲಿ ಸಂಪೂರ್ಣ ಸಾಲ ಬಾಕಿಯನ್ನು ಪಾವತಿಸಿದ್ರೆ ಮಾತ್ರ ಬಡ್ಡಿ ಮನ್ನಾದ ಲಾಭವನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ : ವೃದ್ಧರಿಗೆ ಗಾಲಿ ಕುರ್ಚಿ, ವಾಕಿಂಗ್ ಸ್ಟಿಕ್ ಭಾಗ್ಯ!!
ಬಡ್ಡಿ ಮನ್ನಾದ ಪ್ರಕ್ರಿಯೆ
ಕೃಷಿ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಮೊದಲಿಗೆ ಬ್ಯಾಂಕ್‌ನಿಂದ ಸುಸ್ತಿ ಸಾಲಗಾರರಾಗಿರುವ ರೈತರಿಗೆ 5 ದಿನಗಳ ಒಳಗೆ ತಿಳಿವಳಿಕೆ ಪತ್ರವನ್ನು ಕಳುಹಿಸಬೇಕು.
ಸಾಲ ವಸೂಲಾತಿಗೆ ನಿಗದಿಪಡಿಸಿದ 20 ಫೆ. 2024 ರಿಂದ 45 ದಿನಗಳ ಒಳಗೆ ಬಡ್ಡಿ ಮನ್ನಾದ ಎಲ್ಲಾ ಬಿಲ್ಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ, ಲ್ಯಾಂಪ್ಸ್, ಪಿಕಾರ್ಡ, ಡಿಸಿಸಿ ಬ್ಯಾಂಕ್ ಶಾಖೆಗಳು ಸಹಕಾರ ಇಲಾಖೆಗಳಿಗೆ ಬಿಲ್ಲನ್ನು ಸಲ್ಲಿಸಬೇಕು.
ಒಟ್ಟು ಕೃಷಿ ಸಾಲಕ್ಕೆ ತಗಲುವ ಬಡ್ದಿ ಮೊತ್ತವನ್ನು ಸಹಕಾರ ಇಲಾಖೆಯು ಭರಿಸಲಾಗುತ್ತದೆ ಎಂದು ಸಂಬಂಧಪಟ್ಟ ಇಲಾಖೆಯು ಮಾಹಿತಿಯನ್ನು ಹಂಚಿಕೊಂಡಿದೆ.
ಎಷ್ಟು ಸಾಲ ತೆಗೆದುಕೊಂಡಿದ್ದೀರ ಎಂದು ತಿಳಿಯುವ ವಿಧಾನ:
Step-1: ಮೊದಲಿಗೆ Bele sala status check ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ. ನಂತರ ನಿಮ್ಮ ಹೋಬಳಿ, ಜಿಲ್ಲೆ, ತಾಲ್ಲೂಕು, ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ಸರ್ವೆ ನಂಬರ್ ಹಾಕಿ.
Step-2: ನಂತರ View button ಮೇಲೆ ಕ್ಲಿಕ್ ಮಾಡಿ ನಿಮ್ಮ ಜಮೀನಿನ ಪಹಣಿ, ಉತಾರ್, RTC ತೆರೆದುಕೊಳ್ಳುವುದು ಇದೆ ಪಹಣಿಯ ಕೊನೆಯ ಕಾಲಂ ನಲ್ಲಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲವನ್ನು ಪಡೆಯಲಾಗಿದೆ? ಯಾವ ಬ್ಯಾಂಕ್? ಎಂಬ ಎಲ್ಲಾ ಮಾಹಿತಿಯನ್ನು ತಿಳಿಯಬಹುದು.
ಇತರೆ ವಿಷಯಗಳು :
ಉಚಿತ ಗೋಬರ್ ಗ್ಯಾಸ್ ಯೋಜನೆ!! ಮರು ಅರ್ಜಿ ಆಹ್ವಾನ, ಇಲ್ಲಿ ಅಪ್ಲೇ ಮಾಡಿ
NMMS ವಿದ್ಯಾರ್ಥಿವೇತನದ ಕೊನೆಯ ದಿನಾಂಕ ವಿಸ್ತರಣೆ! ಇಂದೇ ಅರ್ಜಿ ಸಲ್ಲಿಸಿ ವಾರ್ಷಿಕ ₹12,000 ಪಡೆಯಿರಿ