ಹಲೋ ಸ್ನೇಹಿತರೆ, ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಯನ್ನು ಉಚಿತವಾಗಿ ಅಪ್ಡೇಟ್ ಮಾಡಲು ನೀಡಿದ್ದ ಕಾಲಾವಧಿಯನ್ನು ಆಧಾರ್ ಪ್ರಾಧಿಕಾರ 2024ರ ಜೂನ್ 14ರವರೆಗೆ ವಿಸ್ತರಿಸಿದ್ದು, ಜೂನ್ 14 ರೊಳಗೆ ಅಪ್ ಡೇಟ್ ಮಾಡಲು ಮತ್ತೆ ಸೂಚನೆ ನೀಡಿದೆ. ಇದರ ಜೊತೆ ಇನ್ನೂ ಮೂರು ತಿಂಗಳು ಆಧಾರ್ ಕಾರ್ಡ್ ಬಳಕೆದಾರರು ಉಚಿತ ಆಧಾರ್ ಅಪ್ಡೇಟ್ ಪ್ರಯೋಜನ ಪಡೆಯಬಹುದು ಎಂದು ತಿಳಿಸಲಾಗಿದೆ.
ಉಚಿತ ಅಪ್ಡೇಟ್ ಸೇವೆಯು ಆನ್ಲೈನ್ ಮಾತ್ರ ಲಭ್ಯವಿದ್ದು, ಅಲ್ಲಿ ದಾಖಲೆಗಳನ್ನು ನೀಡುವುದರ ಮೂಲಕ ತಿದ್ದುಪಡಿಗೆ ಮನವಿ ಸಲ್ಲಿಸಬಹುದಾಗಿದೆ. ಹಾಗೆಯೇ ಆಧಾರ್ ಕೇಂದ್ರದಲ್ಲಿ 50 ರೂ. ಪಾವತಿಸುವುದು ಕಡ್ಡಾಯವಾಗಿದೆ.
ಇದನ್ನು ಓದಿ: ಮಗಳ ಭವಿಷ್ಯಕ್ಕಾಗಿ ಸರ್ಕಾರದ ಯೋಜನೆ! ಮದುವೆ ವಯಸ್ಸಿಗೆ 63 ಲಕ್ಷ
Contents
ಆನ್ಲೈನ್ನಲ್ಲಿ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು ಸರಳ ಮತ್ತು ಸುಲಭವಾದ ಹಂತಗಳು ಇಲ್ಲಿವೆ:
- ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಈ https://myaadhaar.uidai.gov.in/ ವೆಬ್ಸೈಟ್ಗೆ ಲಾಗ್ ಇನ್ ಮಾಡಿ.
- ‘ವಿಳಾಸವನ್ನು ನವೀಕರಿಸಲು ಮುಂದುವರಿಯಿರಿ’ ಆಯ್ಕೆಯನ್ನು ಆರಿಸಿ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTPಯನ್ನು ನಮೂದಿಸಿ.
- ‘ಡಾಕ್ಯುಮೆಂಟ್ ಅಪ್ಡೇಟ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ; ನಿವಾಸಿಯ ಪ್ರಸ್ತುತ ವಿವರಗಳನ್ನು ನೀಡಲಾಗುತ್ತದೆ.
- ವಿವರಗಳನ್ನು ಪರಿಶೀಲಿಸಿ ನಂತರ ಮುಂದಿನ ಹೈಪರ್ ಲಿಂಕ್ ಕ್ಲಿಕ್ ಮಾಡಿ.
- ಈಗ ಡ್ರಾಪ್ಡೌನ್ ಪಟ್ಟಿಯಿಂದ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಯನ್ನು ಆಯ್ಕೆಯನ್ನು ಕ್ಲಿಕ್ ಮಾಡಿ.
- ನಂತರದಲ್ಲಿ ನಿಮ್ಮ ವಿಳಾಸಕ್ಕೆ ಸಂಬಂಧಿಸಿದ ಪುರಾವೆಗಳನ್ನು ಅಪ್ಲೋಡ್ ಮಾಡಿ
- ಈಗ ‘ಸಲ್ಲಿಸಿ’ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಕೊನೆಯ 14 ಅಂಕಿಗಳ ನವೀಕರಣ ಸಂಖ್ಯೆಯನ್ನು (ಯುಆರ್‌ಎನ್) ರಚಿಸಿದ ನಂತರ, ನಿಮ್ಮ ಆಧಾರ್ ನವೀಕರಣ ವಿನಂತಿಯನ್ನು ಅನುಮೋದಿಸಲಾಗುತ್ತದೆ.
ಇತರೆ ವಿಷಯಗಳು:
ಅಂಗವಿಕಲ ಅಭ್ಯರ್ಥಿಗಳಿ ಜೂ. 10 ರಿಂದ 12ರ ವರೆಗೆ ವೈದ್ಯಕೀಯ ತಪಾಸಣೆ!
Jio ಗ್ರಾಹಕರಿಗೆ ಅಂಬಾನಿ ಗಿಫ್ಟ್! ಅತೀ ಕಡಿಮೆ ಬೆಲೆಗೆ ಈ ವರ್ಷದ ರಿಚಾರ್ಜ್ ಘೋಷಣೆ