rtgh
Headlines

ರೈತರಿಗೆ ಕಂಟಕ ತಂದ ಆಧಾರ್‌ ಜೋಡಣೆ! ಈ ರೀತಿ ಮಾಡಿಲ್ಲ ಅಂದ್ರೆ ಬರಲ್ಲ ʻಬೆಳೆ ವಿಮೆʼ ಪರಿಹಾರ

Aadhar Link
Share

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಸ್ವಾಗತ. 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ನಾಶವಾದ ರೈತರಿಗೆ ಬೆಳೆ ವಿಮೆ ಪರಿಹಾರ ಮಂಜೂರು ಮಾಡಲಾಗಿದೆ. ರೈತರು ತಮ್ಮ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡದಿದ್ದರೆ ಖಾತೆಗೆ ಬೆಳೆ ವಿಮೆ ಪರಿಹಾರ ಹಣ ಜಮೆ ಆಗುವುದಿಲ್ಲ ಇಲಾಖೆ ಸ್ಫಷ್ಟನೆ ನೀಡಿದೆ.

Aadhar Link

ಕಲಬುರಗಿ ಜಿಲ್ಲೆಯ 1,62,071 ರೈತರು, 1,86,850 ಹೆಕ್ಟರ್‌ ಪ್ರದೇಶದಲ್ಲಿ ಬೆಳೆ ವಿಮೆ ಯೋಜನೆಯಡಿ ತಮ್ಮ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು, ಇದಕ್ಕಾಗಿ ರೂ.160.30 ಕೋಟಿಗಳಷ್ಟು ಬೆಳೆ ವಿಮಾಕಂತಿನ ರೂಪದಲ್ಲಿ ವಿಮಾ ಸಂಸ್ಥೆಗೆ ಹಣ ಸಂದಾಯವಾಗಿರುತ್ತದೆ. ಇದರಲ್ಲಿ ರೈತರ ಕೊಡುಗೆ ರೂ. 18.47 ಕೋಟಿ, ರಾಜ್ಯ ಸರ್ಕಾರದ ಕೊಡುಗೆ ರೂ. 70.92 ಕೋಟಿ ಹಾಗೂ ಕೇಂದ್ರ ಸರ್ಕಾರದ ಕೊಡುಗೆ ರೂ. 70.92 ಕೋಟಿ ಸೇರಿದೆ.

ಬೆಳೆ ಕಟಾವಿನ ಆಧಾರದ ಮೇಲೆ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಸೋಯಾಬೀನ್‌ ಹಾಗೂ ತೊಗರಿ ಬೆಳೆ ಬೆಳೆಯುವ ರೈತರಿಗೆ ಜಿಲ್ಲೆಯ ಒಟ್ಟು 69,829 ರೈತರ ಬ್ಯಾಂಕ ಖಾತೆಗೆ ₹ 94.558 ಕೋಟಿ ಹಾಗೂ ಸ್ಥಳೀಯ ಪ್ರಕೃತಿ ವಿಕೋಪದಡಿ 18,433 ರೈತರ ಖಾತೆಗೆ ₹ 6.242 ಕೋಟಿ ವಿಮೆ ಮೊತ್ತ ಹಾಗೂ ಬೆಳೆ ರಾಶಿ ಸಂದರ್ಭದಲ್ಲಿ ಆಗುವ ಹಾನಿ ಘಟಕದಡಿ 382 ರೈತರ ಬ್ಯಾಂಕ ಖಾತೆಗೆ ನೇರವಾಗಿ ಡಿ.ಬಿ.ಟಿ ಮೂಲಕ ರೂ. 81.927 ಲಕ್ಷ ವಿಮೆ ಮೊತ್ತವನ್ನು ಪಾವತಿಸಲಾಗಿದೆ.

ಇದನ್ನು ಓದಿ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಸ್ಥಗಿತವಾಗುತ್ತಾ? ಇಲ್ಲಿದೆ ಸಿಎಂ ಸ್ಪಷ್ಟನೆ..!

ಹೀಗೆ ಒಟ್ಟು 88,644 ರೈತರ ಬ್ಯಾಂಕ್ ಖಾತೆಗಳಿಗೆ ಡಿ.ಬಿ.ಟಿ ಮೂಲಕ ರೂ. 101.619 ಕೋಟಿ ಬೆಳೆ ವಿಮೆ ಪರಿಹಾರವನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ 281 ರೈತರ ಬ್ಯಾಂಕ ಖಾತೆಗಳು ಆಧಾರ ಸಂಖ್ಯೆ ಜೋಡನೆಯಾಗದ ಕಾರಣದಿಂದ ರೂ. 35.95 ಲಕ್ಷ ಪರಿಹಾರ ಮೊತ್ತ ರೈತರ ಖಾತೆಗೆ ಜಮೆಯಾಗಿರುವುದಿಲ್ಲ. ರೈತರ ವಿವರಗಳು ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದ್ದು ಸದರಿ ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ ಜೋಡಣೆ ಮಾಡಿದಲ್ಲಿ ಮಾತ್ರ ಅವರ ಬ್ಯಾಂಕ ಖಾತೆಗೆ ಬೆಳೆ ವಿಮೆ ಪರಿಹಾರ ಜಮೆಯಾಗಲಿದೆ.

ಈಗಾಗಲೇ ಡಿಸೆಂಬರ್‌ ತಿಂಗಳ 2023 ರಲ್ಲಿ ಜಿಲ್ಲೆಯಲ್ಲಿ ಮಳೆ ಆಶ್ರಿತ ತೊಗರಿ ಬೆಳೆ ವಿಮೆ ಮಾಡಿಸಿದ 1,20,724 ರೈತರ ಬ್ಯಾಂಕ ಖಾತೆಗೆ ನೇರವಾಗಿ ಡಿ.ಬಿ.ಟಿ ಮೂಲಕ ₹83.63 ಕೋಟಿ ಮಧ್ಯಂತರ ಪರಿಹಾರವನ್ನು ಈಗಾಗಲೇ ಜಮೆ ಮಾಡಲಾಗಿರುತ್ತದೆ. ಒಟ್ಟಾರೆಯಾಗಿ ಕಲಬುರಗಿ ಜಿಲ್ಲೆಯಲ್ಲಿ 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರ ಬ್ಯಾಂಕ ಖಾತೆಗೆ ನೇರವಾಗಿ ಡಿ.ಬಿ.ಟಿ ಮೂಲಕ ರೂ. 185.249 ಕೋಟಿ ಬೆಳೆ ವಿಮೆ ಪರಿಹಾರ ಜಮೆ ಮಾಡಲಾಗಿದೆ.

ಇತರೆ ವಿಷಯಗಳು:

ಇನ್ಮುಂದೆ ನಿಮ್ಮ ನಿಮ್ಮ ಗ್ರಾಮಪಂಚಾಯಿತಿಗಳಲ್ಲೇ ಸಿಗಲಿದೆ ಈ ಹೊಸ ಸೌಲಭ್ಯ!

ರಾಜ್ಯದ್ಯಂತ 18 ಲಕ್ಷ ರೈತರ ನೋಂದಣಿ! ಕುಸುಮ್‌ ಯೋಜನೆಯಡಿ ಉಚಿತ ಸೌರ ಪಂಪ್‌ಸೆಟ್‌


Share

Leave a Reply

Your email address will not be published. Required fields are marked *