rtgh
Headlines

8th Pay Commision ಗೆ ಗ್ರೀನ್‌ ಸಿಗ್ನಲ್! ಮೋದಿ ಸರ್ಕಾರದ ಮೊದಲ ಘೋಷಣೆ

8th Pay Commision
Share

ಹಲೋ ಸ್ನೇಹಿತರೆ, ಕೇಂದ್ರದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮುಂದಿನ ತಿಂಗಳಿನಲ್ಲಿ ಸರ್ಕಾರ ಬಜೆಟ್‌ ಮಂಡನೆ ಮಾಡಲಿದ್ದು, ಕೇಂದ್ರ ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ 8ನೇ ವೇತನ ಆಯೋಗ ರಚನೆಯ ಘೋಷಣೆ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಲಾಗಿದೆ.

8th Pay Commision

ಪ್ರತೀ ಸಾರಿಯೂ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೊಸ ಬಜೆಟ್‌ ಮಂಡನೆ ಮಾಡುಲಾಗುತ್ತದೆ. ಹೀಗಾಗಿ ಎನ್‌ಡಿಎ ಸರ್ಕಾರ ಜುಲೈ ನಲ್ಲಿ ಬಜೆಟ್‌ ಮಂಡಿಸುವ ವೇಳೆ ವೇತನ ಆಯೋಗ ರಚನೆಯ ಘೋಷಣೆ ಮಾಡುವ ಸಾಧ್ಯತೆ ಇದೆ ಹೆಚ್ಚಿದೆ.

ಪ್ರತಿ 10 ವರ್ಷಗಳಿಗೆ ಒಂದು ಬಾರಿ ಕೇಂದ್ರ ಸರ್ಕಾರ ವೇತನ ಆಯೋಗ ರಚನೆ ಮಾಡಿ, ಅದರ ವರದಿ ಪಡೆದು ಅನುಷ್ಠಾನ ವೇತನ ಆಯೋಗ ಮಾಡಲಾಗುತ್ತದೆ. 2016ರ ಜನವರಿಯಲ್ಲಿ 7ನೇ ವೇತನ ಆಯೋಗ ವರದಿ ನೀಡಿತ್ತು. ಇದರ ಅನ್ವಯ 2026ರ ಜನವರಿಗೆ 8ನೇ ವೇತನ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ ಅನುಷ್ಠಾನಗೊಳ್ಳಬೇಕಿದೆ.

8ನೇ ವೇತನ ಆಯೋಗ ರಚನೆ ಮಾಡುವ ಕುರಿತು ಸರ್ಕಾರ ಇನ್ನೂ ಯಾವುದೇ ರೀತಿಯ ತೀರ್ಮಾನವನ್ನು ಪ್ರಕಟಿಸಿಲ್ಲ. ಆದರೆ ಈಗ ಚುನಾವಣೆ ಮುಗಿದು ಎನ್‌ಡಿಎ 3.0 ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕಾರಣ ಆದ್ದರಿಂದ ಯಾವ ನಿಲುವು ಕೈಗೊಳ್ಳಲಾಗುತ್ತದೆ? ಎಂದು ಕಾದು ನೋಡಬೇಕಿದೆ.

ಇದನ್ನು ಓದಿ: ಪಿಎಂ ಕಿಸಾನ್ ನಿಧಿ ಹಣ ₹8000! ₹2000 ರೂ ಹೆಚ್ಚಳಕ್ಕೆ ನಿರ್ಧಾರ

ಒಮ್ಮೆ ಸರ್ಕಾರ ವೇತನ ಆಯೋಗ ರಚನೆ ಮಾಡುವ ತೀರ್ಮಾನ ಕೈಗೊಂಡರೆ ಅದು ವೇತನ, ಭತ್ಯೆ, ಪಿಂಚಣಿ ಮುಂತಾದವುಗಳನ್ನು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲು ಸುಮಾರು 12ರಿಂದ 18 ತಿಂಗಳ ಅವಧಿ ಬೇಕಾಗಲಿದೆ. ಇನ್ನೂ ದೇಶದಲ್ಲಿ 5 ವರ್ಷ ಲೋಕಸಭೆ ಚುನಾವಣೆ ಇಲ್ಲ. ಆದ್ದರಿಂದ ಹೊಸ ಸರ್ಕಾರ 8ನೇ ವೇತನ ಆಯೋಗ ಯಾವಾಗ ರಚಿಸಲಿದೆ? ಎಂಬುದೇ ಪ್ರಶ್ನೆಯಾಗಿದೆ.

8ನೇ ವೇತನ ಆಯೋಗ ರಚನೆಯಾಗಿ ಜಾರಿಯಾದರೆ ಸುಮಾರು 49 ಲಕ್ಷ ಸರ್ಕಾರಿ ನೌಕರರು, 68 ಲಕ್ಷ ಪಿಂಚಣಿದಾರರಿಗೆ ಸಹಾಯವಾಗಲಿದೆ. ಸಂಬಳ, ಭತ್ಯೆಗಳು ಕೂಡ ಹೆಚ್ಚಾಗಲಿವೆ.

8ನೇ ವೇತನ ಆಯೋಗದ ಅನುಸಾರ ಫಿಟೆಂಟ್‌ ಸೌಲಭ್ಯಗಳು ಸೇರಿ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 8 ರಿಂದ 26 ಸಾವಿರ ರೂ. ವರೆಗೆ ಏರಿಕೆಯಾಗುವ ನಿರೀಕ್ಷೆ ಇದೆ. 7ನೇ ವೇತನ ಆಯೋಗ ಕೇಂದ್ರ ಸರ್ಕಾರಿ ನೌಕರರಿಗೆ 2.57ರಷ್ಟು ಫಿಟೆಂಟ್‌ ಸೌಲಭ್ಯದ ನೀಡಲು ಶಿಫಾರಸು ಮಾಡಿತ್ತು. ಬಳಿಕ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 18,0000 ರೂ.ಗೆ ಏರಿಕೆಯಾಗಿತ್ತು.

8ನೇ ವೇತನ ಆಯೋಗ ಜಾರಿಗೆ ಬಂದರೆ ವೇತನದ ಜೊತೆ ವಿವಿಧ ಭತ್ಯೆಗಳು, ಪಿಂಚಣಿ ವ್ಯವಸ್ಥೆಯಲ್ಲಿ ಕೂಡ ಬದಲಾವಣೆಯಾಗಲಿದೆ. ಬದಲಾಗುತ್ತಿರುವ ಜೀವನ ಶೈಲಿಗೆ ಅನುಗುಣವಾಗಿ ವೇತನವೂ ಏರಿಕೆಯಾಗಬೇಕಿದೆ. 8ನೇ ವೇತನ ಆಯೋಗ ರಚನೆಯಾಗಿ ಅದರ ವರದಿ ಅನುಷ್ಠಾನವಾಗಬೇಕು ಎಂದು ಸರ್ಕಾರಿ ನೌಕರರ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಕೇಂದ್ರದ ಹೊಸ ಸರ್ಕಾರ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಲಿದೆಯೇ? ಕಾದು ನೋಡಬೇಕಿದೆ.

ಇತರೆ ವಿಷಯಗಳು:

ಬಸ್‌ ಪ್ರಯಾಣಿಕರಿಗೆ ಹೊಸ ಸೌಲಭ್ಯ! ಇನ್ಮುಂದೆ UPI ಮೂಲಕ ಟಿಕೆಟ್‌ ಖರೀದಿ

ಪ್ರಮಾಣವಚನ ಸ್ವೀಕರಿಸಿದ 24 ಗಂಟೆಯೊಳಗೆ ಈ ಸ್ಕೀಮ್ ಗೆ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್!


Share

Leave a Reply

Your email address will not be published. Required fields are marked *