rtgh
Headlines

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! 7ನೇ ವೇತನ ಆಯೋಗ ಜಾರಿಗೆ ರಾಜ್ಯ ಸರ್ಕಾರ ಸಿದ್ಧತೆ

7th Pay Commission
Share

ಹಲೋ ಸ್ನೇಹಿತರೇ, 7ನೇ ವೇತನ ಆಯೋಗ ಎಂಬುದು ಸರ್ಕಾರಿ ನೌಕರರಿಗೆ ಗಗನ ಕುಸುಮವೇ ಆಗಿದೆ. ಅದರಲ್ಲೂ ಕಳೆದ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸಿಕೊಂಡು ಬಂದಿರುವ ಸರ್ಕಾರಿ ನೌಕರರಿಗೆ ವೇತನ ಸರಿಯಾಗಿ ಹೆಚ್ಚಳ ಆಗುತ್ತಿಲ್ಲ ಎಂಬ ಬೇಸರ ಕಾಡುತ್ತಿದೆ. ಹೀಗಿದ್ದಾಗ ಹೊಸದಾಗಿ, ಕರ್ನಾಟಕದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ ಸರ್ಕಾರಿ ನೌಕರರಿಗೆ ಭರವಸೆ ನೀಡಿತ್ತು.

7th Pay Commission

ಆದರೆ ಇದೇ ಸಮಯಕ್ಕೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಅಡ್ಡ ಬಂತು. 2023 ವಿಧಾನಸಭೆ ಚುನಾವಣೆ ಸಮಯದಲ್ಲಿ ಅಂದಿನ ಬಿಜೆಪಿ ಪಕ್ಷದ ಸರ್ಕಾರದ ವಿರುದ್ಧ ಸರ್ಕಾರಿ ನೌಕರರು ಹೋರಾಟ ನಡೆಸಿದ್ದರು. ತೀವ್ರ ಎಚ್ಚರಿಕೆ ನೀಡಿ ಹೋರಾಟ ನಡೆಸಿದ್ದ ರಾಜ್ಯ ಸರ್ಕಾರಿ ನೌಕರರು ತಮ್ಮ ಬೇಡಿಕೆ ಈಡೇರುವ ನಂಬಿಕೆ ಇಟ್ಟುಕೊಂಡಿದ್ದರು. ಆದರೆ ಅದು ಈಡೇರಲೇ ಇಲ್ಲ, ಕೊನೆಗೆ ವಿಧಾನಸಭೆ ಚುನಾವಣೆಯು ಬಂತು. ಆಗ ಕಾಂಗ್ರೆಸ್ ಪಕ್ಷದ ನಾಯಕರು ತಾವು ಅಧಿಕಾರಕ್ಕೆ ಬಂದರೆ, ರಾಜ್ಯದ ಸರ್ಕಾರಿ ನೌಕರರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು.

ಹೀಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಕಳೆದರೂ 7ನೇ ವೇತನ ಆಯೋಗದ ಭರವಸೆ ಈಡೇರಿಲ್ಲ. ಈ ನಡುವೆ ಸರ್ಕಾರಿ ನೌಕರರ ಸಂಘ ಸಿಎಂ ಸಿದ್ದರಾಮಯ್ಯ & ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದೆ. ತಮ್ಮ ಬೇಡಿಕೆ ಈಡೇರಲಿ ಅಂತಾ ಆಗ್ರಹಿಸುತ್ತಿದ್ದಾರೆ ಕರ್ನಾಟಕದ ಸರ್ಕಾರಿ ನೌಕರರು. ಇದೀಗ ಲೋಕಸಭೆ ಚುನಾವಣೆ ಮುಗಿದಿದೆ, ಸಿಎಂ ಸಿದ್ದರಾಮಯ್ಯ ಅವರ ಮುಂದಿನ ನಡೆ ಏನು? ಬನ್ನಿ ತಿಳಿಯೋಣ.

ಇದನ್ನೂ ಸಹ ಓದಿ : ಎಲ್ಲಾ ರೈತರಿಗೆ ಸಿಗತ್ತೆ 10,000 ರೂ.! ರೈತ ಸಿರಿ ಯೋಜನೆಗೆ ಅರ್ಜಿ ಪ್ರಾರಂಭ

7ನೇ ವೇತನ ಆಯೋಗ ಸಿಹಿ ಸುದ್ದಿ ಪಕ್ಕಾ?

2024ರ ಮಾರ್ಚ್‌ 16ರಂದು ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಸಲ್ಲಿಕೆ ಆಗಿದೆ. ಸಿಎಂ ಸಿದ್ದರಾಮಯ್ಯ ಅವರು ಈ ವರದಿ ಸ್ವೀಕಾರ ಮಾಡಿದ್ದಾರೆ. ಈ ವರದಿ ಜಾರಿ ಮಾಡುವ ಭರವಸೆ ನೀಡಿದ್ದಾರೆ. 7ನೇ ವೇತನ ಆಯೋಗವು ಇದೀಗ ಕರ್ನಾಟಕ ಸರ್ಕಾರಿ ನೌಕರರ ಮೂಲ ವೇತನದ ಶೇಕಡಾ 27.5 ರಷ್ಟು ಹೆಚ್ಚಳ ಮಾಡೋದಕ್ಕೆ ಶಿಫಾರಸು ಮಾಡಿದೆ. ಹೀಗಿದ್ದಾಗ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಕೂಡ ಮುಗಿದು ಹೋಗಿದೆ.

ಸರ್ಕಾರಿ ನೌಕರರಿಂದ ಬೃಹತ್ ಹೋರಾಟ?

ಈ ಎಲ್ಲಾ ಕಾರಣಕ್ಕೆ ಸರ್ಕಾರಿ ನೌಕರರಲ್ಲಿ ಹೊಸ ಭರವಸೆ ಮೂಡಿದ್ದು, ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಸರ್ಕಾರ ಗುಡ್ ನ್ಯೂಸ್ ನೀಡುವ ಸಾಧ್ಯತೆ ಇದೆ. ಅಕಸ್ಮಾತ್ ಕರ್ನಾಟದಲ್ಲಿ ಸರ್ಕಾರಿ ನೌಕರರಿಗೆ ಸರಿಯಾಗಿ ವೇತನ ಪರಿಷ್ಕರಣೆ ಆಗದೇ ಇದ್ದರೆ, ಸರ್ಕಾರಿ ನೌಕರರಿಂದ ಬೃಹತ್ ಹೋರಾಟ ಕೂಡ ನಡೆಯುವ ಸಾಧ್ಯತೆ ಇದೆ. ಅದರಲ್ಲೂ ಬಿಬಿಎಂ ಚುನಾವಣೆಯ ಸಮಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ರಿಸ್ಕ್ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ. ಇದೇ ಕಾರಣಕ್ಕೆ ಸರ್ಕಾರಿ ನೌಕರರ ಭರವಸೆ ಈಡೇರುವ ಸಾಧ್ಯತೆ ದಟ್ಟವಾಗಿದೆ.

ಇತರೆ ವಿಷಯಗಳು:

ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್: ಮೋದಿ ಸರ್ಕಾರದಿಂದ ಹೊಸ ಯೋಜನೆ ಜಾರಿ

ಉಚಿತವಾಗಿ ಅಪ್ಡೇಟ್ ಮಾಡಲು ನೀಡಿದ್ದ ಕಾಲಾವಧಿಗೆ ಕೌಂಟ್ ಡೌನ್!

ಗೃಹಲಕ್ಷ್ಮಿಯರಿಗೆ ಶಾಕಿಂಗ್‌ ಸುದ್ದಿ: ಗೃಹಲಕ್ಷ್ಮಿ & ಶಕ್ತಿ ಯೋಜನೆಗೆ ಗುಡ್ ಬೈ ಹೇಳಲಿದ್ಯಾ ರಾಜ್ಯ ಸರ್ಕಾರ ?!


Share

Leave a Reply

Your email address will not be published. Required fields are marked *