rtgh
Headlines

ʻಯಶಸ್ವಿನಿ ಯೋಜನೆʼ ಫಲಾನುಭವಿಗಳಿಗೆ ದಿಢೀರನೆ ಬಂತು ಮತ್ತೊಂದು ಗುಡ್‌ ನ್ಯೂಸ್!!

Yashavini Health Care Scheme
Share

ಹಲೋ ಸ್ನೇಹಿತರೆ, ರಾಜ್ಯ ಸರ್ಕಾರವು ಯಶಸ್ವಿನಿ ಯೋಜನೆ ಫಲಾನುಭವಿಗಳಿಗೆ ಗುಡ್‌ ನ್ಯೂಸ್ ನೀಡಿದೆ. ಇದರ ಹಿನ್ನಲೆಯಲ್ಲಿ ‘ಯಶಸ್ವಿನಿ’ ಯೋಜನೆಯಡಿ 200ಕ್ಕೂ ಅಧಿಕ ಚಿಕಿತ್ಸೆಗಳ ದರವನ್ನು ಪರಿಷ್ಕರಣೆ ಮಾಡಿದೆ. ಇದರಿಂದಾಗಿ ಯೋಜನೆಯಡಿ ನೋಂದಣಿಗೆ ಖಾಸಗಿ ಆಸ್ಪತ್ರೆಗಳು ಆಸಕ್ತಿ ತೋರುತ್ತಿದ್ದು, ಆಸ್ಪತ್ರೆಗಳ ಜಾಲ ರಾಜ್ಯದಾದ್ಯಂತ ಇನ್ನಷ್ಟು ವಿಸ್ತರಣೆಯಾಗುತ್ತಿದೆ.

Yashavini Health Care Scheme

ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಜಾರಿಯಲ್ಲಿರುವ ಸಹಕಾರ ಇಲಾಖೆಯಲ್ಲಿ 2022-23 ನೇ ಸಾಲಿಗೆ ಸಹಕಾರ ಸಂಘಗಳ ಸದಸ್ಯರು ಮತ್ತು ಅವರ ಅವಲಂಭಿತ ಕುಟುಂಬ ವರ್ಗದವರಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು 2022-23 ನೇ ಸಾಲಿಗೆ 2022ರ ನವೆಂಬರ್, 01 ರಿಂದ ಈ ಯೋಜನೆಯನ್ನು ಮರು ಜಾರಿಗೊಳಿಸಿದೆ.

ಇದನ್ನು ಓದಿ: ಬಂದೇ ಬಿಡ್ತು HSRP ನಂಬರ್‌ ಪ್ಲೇಟ್‌ ನೋಂದಣಿ ಡೆಡ್‌ಲೈನ್‌! ಇನ್ನೂ ಹಾಕಿಸದೇ ಇದ್ದವರು ದಂಡ ಕಟ್ಟಲು ರೆಡಿಯಾಗಿ

ಸರ್ಕಾರವು ಅನೇಕ ಚಿಕಿತ್ಸೆಗಳ ದರವನ್ನು ಪರಿಷ್ಕರಿಸಿ, ಶೇ 300ರವರೆಗೂ ಚಿಕಿತ್ಸಾ ದರವನ್ನು ಹೆಚ್ಚಳ ಮಾಡಿದೆ. ಇದರ ಪರಿಣಾಮ ಯೋಜನೆ ಪ್ರಾರಂಭವಾದಾಗ 370 ಇದ್ದ ಖಾಸಗಿ ಆಸ್ಪತ್ರೆಗಳ ಸಂಖ್ಯೆ, ಈಗ 600ರ ಗಡಿಯನ್ನು ದಾಟಿದೆ. ಅಂಕಿ-ಅಂಶಗಳು 637 ಯೋಜನೆಯಡಿ ನೋಂದಾಯಿತ 602 ನೆಟ್ವರ್ಕ್ ಆಸ್ಪತ್ರೆಗಳು ಈ ಯೋಜನೆಯಡಿ ಹಾಗೂ ನೋಂದಾಯಿತ 2,128 ಖಾಸಗಿ ಆಸ್ಪತ್ರೆಗಳು ಈ ಯೋಜನೆಯಡಿ ಲಭ್ಯವಾಗುವ 206 ದರ ಪರಿಷ್ಕರಣೆಗೆ ಒಳಗಾದ ಚಿಕಿತ್ಸೆಗಳು’ಯಶಸ್ವಿನಿ’ ಯೋಜನೆಯಡಿ ಫಲಾನುಭವಿಗಳು ಗರಿಷ್ಠ ₹5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ಈ ಯೋಜನೆಯಡಿ ವ್ಯಕ್ತಿಯು ಈ ನೆಟ್‌ವರ್ಕ್ ಇರುವ ಆಸ್ಪತ್ರೆಗಳಿಗೆ ನೇರವಾಗಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದು.

ಗ್ರಾಮೀಣ ಸಹಕಾರ ಸಂಘಗಳು ಅಥವಾ ಸ್ವ-ಸಹಾಯ ಗುಂಪುಗಳ ಗರಿಷ್ಟ 4 ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ. 500 ಗಳ ಠೇವಣಿಯನ್ನು ಮತ್ತು 4 ಕ್ಕಿಂತ ಹೆಚ್ಚು ಸದಸ್ಯರಿ ಇರುವ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಲಾ ರೂ.100 ಗಳನ್ನು ಪಾವತಿಸುವುದು. ಹಾಗೆಯೇ ನಗರ ಸಹಕಾರ ಸಂಘಗಳ ಗರಿಷ್ಟ 4 ಸದಸ್ಯರಿರುವ ಕುಟುಂಬ ಒಂದಕ್ಕೆ ವಾರ್ಷಿಕ ರೂ.1000 ಗಳ ಠೇವಣಿಯನ್ನು ಮತ್ತು 4 ಕ್ಕಿಂತ ಹೆಚ್ಚಿನ ಸದಸ್ಯರಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರು ತಲಾ ರೂ.200 ಗಳನ್ನು ಪಾವತಿಸಿ, ಆಧಾರ್ ಕಾರ್ಡ್ ಪ್ರತಿ ಮತ್ತು ಪೋಟೋದೊಂದಿಗೆ ಹತ್ತಿರದ ಸಹಕಾರ ಸಂಘಗಳಿಗೆ ನೀಡಿ ಈ ಯೋಜನೆ ಸದಸ್ಯತ್ವ ಪಡೆದು ಲಾಭ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.

ಇತರೆ ವಿಷಯಗಳು:

ತಿಂಗಳ ಆರಂಭದಲ್ಲೇ ಗುಡ್ ನ್ಯೂಸ್! LPG ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆ

ಒಂದೇ ಮೊಬೈಲ್‌ ನಂಬರ್‌ನಿಂದ ಎರಡೆರಡು ಬ್ಯಾಂಕ್ ಖಾತೆ ಹೊಂದಿರುವವರಿಗೆ RBI ಖಡಕ್ ರೂಲ್ಸ್!


Share

Leave a Reply

Your email address will not be published. Required fields are marked *