rtgh
Headlines

ಈ ಯೋಜನೆಯಡಿ ಸಿಗುತ್ತೆ 5 ಲಕ್ಷ!! ಅರ್ಜಿ ಸಲ್ಲಿಸಿದವರಿಗೆ ಮಾತ್ರ ಇದರ ಲಾಭ

 Yashaswini Scheme
Share

ಬೆಂಗಳೂರು : ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯಡಿಯಲ್ಲಿ ಬರುವ 200ಕ್ಕೂ ಹೆಚ್ಚು ಚಿಕಿತ್ಸಾದ ದರವನ್ನು ಪರಿಷ್ಕರಣೆ ಮಾಡಿದೆ. ಯಶಸ್ವಿನಿ ಯೋಜನೆಯ ಮೂಲಕ ಬರುವ ದರವು ಕಡಿಮೆಯಿದ್ದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಈ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆಯನ್ನು ನೀಡಲು ಹಿಂದೇಟು ಹಾಕುತ್ತಿದ್ದವು.

 Yashaswini Scheme

ಇದರಿಂದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಖಾಸಗಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳು ಸಿಗುವುದು ಕಷ್ಟವಾಗಿತ್ತು. ಇದನ್ನು ಅರಿತ ಸರ್ಕಾರ ಯೋಜನೆಯ ಚಿಕಿತ್ಸಾ ದರವನ್ನು ಶೇ. 300ರವರೆಗೂ ಹೆಚ್ಚಳವನ್ನು ಮಾಡಿದೆ. ಪರಿಣಾಮ 370ರಷ್ಟಿದ್ದ ಖಾಸಗಿ ಆಸ್ಪತ್ರೆಗಳ ಸಂಖ್ಯೆಯು 600ರ ಗಡಿಯನ್ನು ದಾಟಿದೆ.

ಈ ಯೋಜನೆಯಡಿ 2,128 ಚಿಕಿತ್ಸೆಗಳು ಲಭ್ಯವಾಗಲಿದ್ದು, ಈ ಪೈಕಿ 206 ಚಿಕಿತ್ಸೆಗಳ ದರದ ಪರಿಷ್ಕರಣೆಯನ್ನು ಮಾಡಲಾಗಿದೆ. ಈ ಮೊದಲು ಯೋಜನೆಯಡಿ 1,650 ಚಿಕಿತ್ಸೆಗಳನ್ನು ಒದಗಿಸಲಾಗುತ್ತಿತ್ತು. ಯೋಜನೆಯಡಿ ಒಟ್ಟು 637 ನೆಟ್ವರ್ಕ್ ಆಸ್ಪತ್ರೆಗಳು ನೋಂದಣಿಯಾಗಿದ್ದು, ಇದರಲ್ಲಿ 602 ಖಾಸಗಿಯ ಆಸ್ಪತ್ರೆಗಳು ನೋಂದಣಿಯನ್ನು ಮಾಡಿಕೊಂಡಿವೆ.

ಯಶಸ್ವಿನಿ ಯೋಜನೆಯಡಿಯೂ ಫಲಾನುಭವಿಗಳು ಗರಿಷ್ಠ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ಈ ಯೋಜನೆಯಡಿ ವ್ಯಕ್ತಿಯು ನೆಟ್ವರ್ಕ್ ಆಸ್ಪತ್ರೆಗಳಿಗೆ ನೇರವಾಗಿ ತೆರಳಿದ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಇದರಿಂದಾಗಿ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆಯು ಸುಲಭ ಸಾಧ್ಯವಾಗಲಿದೆ.

ರಾಜ್ಯಾದ್ಯಂತ ಇಂದು ಭಾರೀ ಮಳೆ! ಈ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಸರ್ಕಾರದಿಂದ ಹೊಸದೊಂದು ಯೋಜನೆ!! ಮಹಿಳೆ ಸಾಲಗಾರರಿಗೆ 1 ಕೋಟಿ


Share

Leave a Reply

Your email address will not be published. Required fields are marked *