ಹಲೋ ಸ್ನೇಹಿತರೇ, SSLC ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಾಗಬೇಕು ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಕಾಗಬಾರದು ಎಂಬ ನಿಟ್ಟಿನಲ್ಲಿ ಈ ಬಾರಿ ಕೆಲವು ಪರೀಕ್ಷೆಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲಾಗಿತ್ತು. ಆದರೂ ಸಹ ರಾಜ್ಯದಲ್ಲಿ ಈ ಬಾರಿ ಫಲಿತಾಂಶ ನಿರೀಕ್ಷೆಯ ಮಟ್ಟವನ್ನು ತಲುಪದೇ ಇರುವುದು ಸರ್ಕಾರಕ್ಕೆ ಬೇಸರ ತಂದಿದೆ.
ಇದರಿಂದ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ವರ್ಷದಿಂದ ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ಕೊಡದಿರಲು ಸೂಚನೆ ನೀಡಿದ್ದಾರೆ.
Contents
ರಾಜ್ಯಾದ್ಯಂತ ಚರ್ಚೆ ಆಗುತ್ತಿದೆ ಈ ಬಾರಿಯ ಫಲಿತಾಂಶ
ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ನೀಡಿದರೂ ಸಹ ರಾಜ್ಯದಲ್ಲಿ ಈ ಬಾರಿಯ ಫಲಿತಾಂಶ ಕಡಿಮೆ ಆಗಿದ್ದು ರಾಜ್ಯ ಸರ್ಕಾರದ ವೈಫಲ್ಯ ಎಂದು ಹೇಳಲಾಗಿದೆ.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಿಎಂ
ಈ ವರ್ಷ SSLC ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ ನೀಡಿರುವ ಬಗ್ಗೆ ಸಿಎಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ 20 ಗ್ರೇಸ್ ಮಾರ್ಕ್ಸ್ ನೀಡಿರುವ ಕಾರಣ & ಉದ್ದೇಶದ ಬಗ್ಗೆ ವಿವರಣೆಯನ್ನು ಕೇಳಿದರು. ಅಧಿಕಾರಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ನಿಮಗೆ ಯಾರು ಹೇಳಿದ್ದು ಎಂದು ಪ್ರಶ್ನೆ ಮಾಡಿದ್ದಾರೆ.
ಅಧಿಕಾರಗಳ ಉತ್ತರ ಏನು?:
ಸಿಎಂ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿದ ಅಧಿಕಾರಿಗಳು ಈ ಹಿಂದೆ ಕೋವಿಡ್ ಸಮಯದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಸಲುವಾಗಿ 5 ರಿಂದ 10 ಗ್ರೇಸ್ ಮಾರ್ಕ್ಸ್ ನೀಡಲಾಗಿದ್ದು. ಈಗ ಅದೇ ನಿಯಮವನ್ನು ಮುಂದುವರೆಸಿದ್ದೇವೆ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ ಈಗ ಕೋವಿಡ್ ಇಲ್ಲ ಮತ್ತೇಕೆ ಗ್ರೇಸ್ ಮಾರ್ಕ್ಸ್ ನೀಡಿದ್ದೀರಿ ಎಂದು ಮತ್ತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ. ಈ ಬಾರಿಯ SSLC ಮಕ್ಕಳಿಗೇ ರಾಜ್ಯದಲ್ಲಿ ಒಟ್ಟು 1.70 ಲಕ್ಷ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಲಾಗಿದೆ ಎಂಬುದನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ.
2023-24 ಶೈಕ್ಷಣಿಕ ವರ್ಷದ ರಾಜ್ಯದ SSLC ಫಲಿತಾಂಶ ಹೀಗಿದೆ :-
2023-24 ಶೈಕ್ಷಣಿಕ ವರ್ಷದಲ್ಲಿ SSLC ಪರೀಕ್ಷೆ ಬರೆದವರ ಅಂಕೆ 8,59,967 ಲಕ್ಷ ವಿಧ್ಯಾರ್ಥಿಗಳು ಮತ್ತು ಇದರಲ್ಲಿ ಒಟ್ಟು 6,31,204 ವಿದ್ಯಾರ್ಥಿಗಳು ಪಾಸ್ ಆಗಿದ್ದರೂ. ಶೇಕಾಡಾ 94% ಫಲಿತಾಂಶ ಗಳಿಸಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ ಮತ್ತು ಶೇಕಡಾ 50.59% ಗಳಿಸಿ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
ಇತರೆ ವಿಷಯಗಳು
ಗಗನಕ್ಕೇರಿದ ತೆಂಗಿನಕಾಯಿ ಬೆಲೆ.! ಧಿಡೀರನೆ ₹50 ಕ್ಕೆ ಜಂಪ್
ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ! SSLC ಪಾಸ್ ಆದ್ರೆ ಸಾಕು