rtgh
Headlines

ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶಾತಿಗೆ 1 ತಿಂಗಳ ದಿನಾಂಕ ವಿಸ್ತರಣೆ.! ತಕ್ಷಣ ಅಪ್ಲೇ ಮಾಡಿ

rte karnataka admission
Share

ಹಲೋ ಸ್ನೇಹಿತರೇ, 2024-25ನೇ ಸಾಲಿಗೆ ಖಾಸಗಿ ಶಾಲೆಗಳಲ್ಲಿ 1 ರಿಂದ 8ನೇ ತರಗತಿ ವರೆಗೆ ಉಚಿತ ಪ್ರವೇಶಾತಿಗೆ ಆನ್‌ಲೈನ್‌ ಅರ್ಜಿಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ. ಹೊಸ ವೇಳಾಪಟ್ಟಿಯನ್ನು ಕೂಡ ನೀಡಲಾಗಿದೆ. ಹಾಗೂ ನೆರೆಹೊರೆ ಶಾಲೆ ಚೆಕ್‌ ಮಾಡುವ ವಿಧಾನವನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

rte karnataka admission

ಖಾಸಗಿ ಶಾಲೆಗಳು ಮತ್ತು ಸರ್ಕಾರಿ ಅನುದಾನಿತ, ಅನುದಾನ ರಹಿತ (ಅಲ್ಪಸಂಖ್ಯಾತವಲ್ಲದ) ಶಾಲೆಗಳಲ್ಲಿ 1 ರಿಂದ 8ನೇ ತರಗತಿ ವರೆಗೆ ಶಿಕ್ಷಣ ಹಕ್ಕು ಕಾಯಿದೆ 2009 ರ ಅಡಿ ಉಚಿತವಾಗಿ ಪ್ರವೇಶ ಪಡೆಯಲು ಇತ್ತೀಚೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಶಾಲಾ ಶಿಕ್ಷಣ ಇಲಾಖೆ ಅಧಿಸೂಚನೆಯನ್ನು ಹೊರಡಿಸಿದೆ. ಇದೀಗ ಸದರಿ ಪ್ರವೇಶಾತಿ ಅರ್ಜಿಗೆ ಅವಧಿ ವಿಸ್ತರಣೆ ಮಾಡಲಾಗಿದೆ.

ಈ ಹಿಂದೆಯೂ RTE ಅಡಿ ದಾಖಲಾತಿಗೆ ಅಪ್ಲೇ ಮಾಡಲು ಕೊನೆಯ ದಿನಾಂಕವಾಗಿ 22-04-2024 ರವರೆಗೆ ಅವಕಾಶ ನೀಡಲಾಗಿದ್ದು. ಉಪನಿರ್ದೇಶಕರುಗಳಿಂದ ಸ್ವೀಕೃತವಾದ ಮನವಿಗಳ ಮೇರೆಗೆ ಅರ್ಜಿ ಸಲ್ಲಿಸುವ ಅವಧಿಯ ದಿನಾಂಕವನ್ನು ಈಗ 20-05-2024 ರವರೆಗೂ ವಿಸ್ತರಣೆ ಮಾಡಲಾಗಿದೆ ಜೊತೆಗೆ ಪರಿಷ್ಕೃತ ವೇಳಾಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಿದೆ.


2024-25ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆಯಡಿ ದಾಖಲಾತಿಗೆ ನಿಗದಿಪಡಿಸಿರುವ ಪರಿಷ್ಕೃತ ವೇಳಾಪಟ್ಟಿಯು ಕೆಳಗಿನಂತಿದೆ.

ಚಟುವಟಿಕೆದಿನಾಂಕ
ಅನುದಾನಿತ ಶಾಲೆಗಳು ಸೇರಿದಂತೆ ದಾಖಲಾತಿ ಕೋರಿ ಪೋಷಕರು Online ಅರ್ಜಿ ಸಲ್ಲಿಸುವ ದಿನಾಂಕ22-03-2024 To 20-05-2024
ಇ.ಐ.ಡಿ ಮೂಲಕ ಸಲ್ಲಿಸಿದ ಅರ್ಜಿಗಳ ದತ್ತಾಂಶದ ನೈಜತೆ ಚೆಕ್‌ ಮಾಡಿ30-05-2024 ವರೆಗೆ
ವಿಶೇಷ ಪ್ರವರ್ಗಗಳು & ಕ್ರಮಬದ್ಧವಲ್ಲದ ಅರ್ಜಿಗಳ ಚೆಕ್‌ ಮಾಡುವುದು30-05-2024 ವರೆಗೆ.
ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ01-06-2024
online ತಂತ್ರಾಂಶದ ಮುಖಾಂತರ ಮೊದಲ ಸುತ್ತಿನ ಸೀಟು ಹಂಚಿಕೆ05-06-2024
ಶಾಲೆಗಳಲ್ಲಿ ದಾಖಲಾತಿ ಆರಂಭ06-06-2024 To 13-06-2024
ಶಾಲೆಗಳಲ್ಲಿ ದಾಖಲಾದ ಮೊದಲ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ Upload ಮಾಡುವುದು06-06-2024 ರಿಂದ 14-06-2024
Online ತಂತ್ರಾಂಶದ ಮೂಲಕ 2ನೇ ಸುತ್ತಿನಲ್ಲಿ ಸೀಟು ಹಂಚಿಕೆ19-06-2024
2ನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ಸಮಯ20-06-2024 ರಿಂದ 27-06-2024
ಶಾಲೆಗಳಲ್ಲಿ ದಾಖಲಾದ 2ನೇ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಜೋಡಿಸುವುದು20-06-2024 ರಿಂದ 28-06-2024 ರವರೆಗೆ.

RTE ಅಡಿ ಪ್ರವೇಶಕ್ಕೆ ನೆರೆ ಹೊರೆ ಶಾಲೆ ತಿಳಿಯುವ ವಿಧಾನ

  • ಪೋಷಕರು ಮೇಲೆ ನೀಡಲಾದ ವೆಬ್‌ ಲಿಂಕ್ ‘RTE – ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ’ ಕ್ಲಿಕ್ ಮಾಡಿಕೊಳ್ಳಿ.
  • ತೆರೆದ ವೆಬ್‌ ಪುಟದಲ್ಲಿ ಜಿಲ್ಲೆ, ಬ್ಲಾಕ್‌ (ತಾಲ್ಲೂಕು), ಗ್ರಾಮ, ವಾರ್ಡ್‌ನ್ನು ಆಯ್ಕೆ ಮಾಡಿ.
  • ನಂತರ ನಿಮ್ಮ ಸುತ್ತ ಮುತ್ತ ಹತ್ತಿರದಲ್ಲಿರುವ ಸರ್ಕಾರಿ ಮತ್ತು ಅನುದಾನಿತ, ಅನುದಾನರಹಿತ, ಖಾಸಗಿ ಶಾಲೆಗಳ ಲಿಸ್ಟ್‌ ಕಾಣಿಸುತ್ತದೆ.
  • ನಿಮ್ಮ ಆಸಕ್ತಿಯ ಶಾಲೆಗೆ ಅಪ್ಲೇ ಮಾಡಿ.

ತಂದೆ, ತಾಯಿ, ಪಾಲಕರು ಸ್ವಂತ ಮೊಬೈಲ್‌ ಫೋನ್‌ & ಇಂಟರ್‌ನೆಟ್‌ ಸೌಲಭ್ಯ ಲಭ್ಯವಿದ್ದಲ್ಲಿ ಆನ್‌ಲೈನ್‌ ಮೂಲಕ ನೇರವಾಗಿ ಅಪ್ಲೇ ಮಾಡಬಹುದು.

ಇತರೆ ವಿಷಯಗಳು

ಶಾಲಾ ಮಕ್ಕಳಿಗೆ ಬೇಸಿಗೆ ರಜೆಯ ಮಜಾ.! ರಾಜ್ಯದಲ್ಲಿ ಎಷ್ಟು ದಿನ ರಜೆ ಇಲ್ಲಿದೆ ವೇಳಾಪಟ್ಟಿ

ಈ ಯೋಜನೆಯಡಿ ಸಿಗಲಿದೆ ಉಚಿತ ಹೊಲಿಗೆ ಯಂತ್ರ.! ಅರ್ಜಿ ಸಲ್ಲಿಸಲು ಹತ್ತಿರದ CSC ಕೇಂದ್ರಕ್ಕೆ ಭೇಟಿ ನೀಡಿ


Share

Leave a Reply

Your email address will not be published. Required fields are marked *