rtgh
Headlines

BPL ಕಾರ್ಡ್‌ದಾರರಿಗೆ ಸಿಗುತ್ತೆ ಉಚಿತ ಎಲ್‌ಪಿಜಿ ಗ್ಯಾಸ್ ಸ್ಟವ್ & ಸಿಲಿಂಡರ್‌.!

pm ujjwala yojana
Share

ಹಲೋ ಸ್ನೇಹಿತರೇ, ಉಚಿತ ಸಿಲಿಂಡರ್‌ ಯೋಜನೆ ಲಾಭ ಪಡೆಯಲು ನೀವು ಕಡ್ಡಾಯವಾಗಿ BPL ಪಡಿತರ ಚೀಟಿ ಹೊಂದಿರಬೇಕಾಗುತ್ತದೆ. ಇದರೊಂದಿಗೆ ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆ ಎಲ್ಲವನ್ನೂ ಲಿಂಕ್‌ ಮಾಡಿರಬೇಕು. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.

pm ujjwala yojana

 ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2016ರಲ್ಲಿ ʼಪ್ರಧಾನ ಮಂತ್ರಿ ಉಜ್ವಲ ಯೋಜನೆʼಯನ್ನು ಜಾರಿ ಮಾಡಲಾಗಿದ್ದು. ಇದು ದೇಶದ ಬಡ ಮಹಿಳೆಯರಿಗೆ ಉಚಿತ ಗ್ಯಾಸ್‌ ಸಿಲಿಂಡರ್‌ಗಳನ್ನು ಒದಗಿಸುವ ಯೋಜನೆಯಾಗಿದೆ.

ಈ ಯೋಜನೆಯಡಿಯಲ್ಲಿ ವಾರ್ಷಿಕವಾಗಿ 3 ಸಿಲಿಂಡರ್‌ಗಳು ಉಚಿತವಾಗಿ ಸಿಗಲಿದೆ. ನೀವು ಬಿಪಿಎಲ್‌ ಕಾರ್ಡ್‌ದಾರರಾಗಿದ್ದರೆ  www.pmuy.gov.in ಈ ಸೈಟ್‌ಗೆ ಹೋಗಿ ಅರ್ಜಿ ಸಲ್ಲಿಸಬೇಕು. ಈ ಉಚಿತ ಸಿಲಿಂಡರ್‌ಗಳ ಯೋಜನೆಯ ಲಾಭ ಪಡೆಯಲು ನೀವು ಕಡ್ಡಾಯವಾಗಿ BPL ಪಡಿತರ ಚೀಟಿ ಹೊಂದಿರಬೇಕು. ಇದರೊಂದಿಗೆ ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ಎಲ್ಲವನ್ನೂ link ಮಾಡಿರಬೇಕು.

ಏನಿದು ಪ್ರಧಾನ ಮಂತ್ರಿ ಉಜ್ವಲ ಯೋಜನೆ?

ಕೇಂದ್ರ ಪೆಟ್ರೋಲಿಯಂ & ನೈಸರ್ಗಿಕ ಅನಿಲ ಸಚಿವಾಲಯವು ಪ್ರಾರಂಭಿಸಿದ ʼಪ್ರಧಾನ ಮಂತ್ರಿ ಉಜ್ವಲ ಯೋಜನೆʼ (PMUY)ಯನ್ನು BPL ಕುಟುಂಬಗಳಿಗೆ LPG ಸಂಪರ್ಕವನ್ನು ಒದಗಿಸುವ ಉದ್ದೇಶದಿಂದ ಆರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ, ನೀವು ಪ್ರತಿ ಸಂಪರ್ಕಕ್ಕೆ 1600 ರೂ., ಗ್ಯಾಸ್ ಸ್ಟವ್ ಖರೀದಿಸಲು & ಸಿಲಿಂಡರ್ ಮರುಪೂರಣ ಮಾಡಲು ಬಡ್ಡಿರಹಿತ ಸಾಲವನ್ನು ಪಡೆಯಲು ಅರ್ಹರಾಗಿರುತ್ತೀರಿ. ಎಲ್‌ಪಿಜಿ ಸಂಪರ್ಕದ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. BPL ಕುಟುಂಬಕ್ಕೆ ಸೇರಿದ & ತನ್ನ ಮನೆಯಲ್ಲಿ ಎಲ್‌ಪಿಜಿ ಸಂಪರ್ಕವನ್ನು ಹೊಂದಿರದ ಮಹಿಳೆಯು ಪಿಎಂಯುವೈ ಯೋಜನೆಯ ಲಾಭವನ್ನು ಪಡೆಯಬಹುದು. 

ಯಾರು PMUY ಪ್ರಯೋಜನ ಪಡೆಯಬಹುದು?  

  • 18 ವರ್ಷ ಮೇಲ್ಪಟ್ಟವರಾಗಿರಬೇಕು.
  • ಭಾರತೀಯ ಪ್ರಜೆಯಾಗಿರಬೇಕು.
  • ಇದೇ ರೀತಿಯ ಇತರ ಯೋಜನೆಗಳಗಡಿ ಯಾವುದೇ ಪ್ರಯೋಜನವನ್ನು ಪಡೆದಿರಬಾರದು.
  • LPG ಸಂಪರ್ಕವನ್ನು ಹೊಂದಿರದ BPL ಕುಟುಂಬದ ಮಹಿಳೆಯಾಗಿರಬೇಕು.
  • ಫಲಾನುಭವಿಗಳನ್ನು SC/ST ಕುಟುಂಬದಡಿಯಲ್ಲಿ SECC 2011 / BPL ಕುಟುಂಬಗಳ ಪಟ್ಟಿಯಲ್ಲಿ ಸೇರಿಸಬೇಕು, PMAY (ಗ್ರಾಮೀಣ), AAY, ಅತ್ಯಂತ ಹಿಂದುಳಿದ ವರ್ಗಗಳು (MBC), ಅರಣ್ಯವಾಸಿಗಳು, ನದಿ ದ್ವೀಪಗಳಲ್ಲಿ ವಾಸಿಸುವ & ಬುಡಕಟ್ಟು ಜನರು ಇದರಲ್ಲಿ ಸೇರಲಿದ್ದಾರೆ.

ಅವಶ್ಯಕ ದಾಖಲೆಗಳು

  • ಪುರಸಭೆ ಅಧ್ಯಕ್ಷರು / ಪಂಚಾಯತ್ ಪ್ರಧಾನರು ನೀಡಿದ BPL ಪ್ರಮಾಣಪತ್ರ
  • ವಿಳಾಸ ಪುರಾವೆ.
  • ಒಂದು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಬಿಪಿಎಲ್ ಪಡಿತರ ಚೀಟಿ
  • ಜಾತಿ ಪ್ರಮಾಣ ಪತ್ರ (caste certificate)
  • ಫೋಟೋ ಗುರುತಿನ ಪುರಾವೆ
  • ಕುಟುಂಬದ ಎಲ್ಲ ಸದಸ್ಯರ ಆಧಾರ್ ಸಂಖ್ಯೆಗಳು
  • ಬ್ಯಾಂಕ್ ಪಾಸ್ಬುಕ್/ ಜನ್‌ಧನ್ ಬ್ಯಾಂಕ್ ಖಾತೆಯ ವಿವರ

ಉಜ್ವಲಾ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?

ಹಂತ 1 – ಹತ್ತಿರದ LPG ವಿತರಕರಿಂದ ಅರ್ಜಿ ನಮೂನೆಯನ್ನು ಸಂಗ್ರಹಿಸಿ / www.pmuy.gov.in ನಿಂದ ಡೌನ್‌ಲೋಡ್ ಮಾಡಿ
ಹಂತ 2 – ಫಾರ್ಮ್ ಭರ್ತಿ ಮಾಡಿಕೊಳ್ಳಿ
ಹಂತ 3 – LPG ವಿತರಕರ ಕಚೇರಿಗೆ ಭೇಟಿ ನೀಡಿ ಫಾರ್ಮ್ ಸಲ್ಲಿಸಿ
ಹಂತ 4 – ಅರ್ಜಿಯನ್ನು ಸಲ್ಲಿಸಿದ ನಂತರ ಅದನ್ನು ಪ್ರಕ್ರಿಯೆಗೊಳಿಸಲಾಗುತ್ತದೆ. ದಾಖಲೆಗಳನ್ನು ಪರಿಶೀಲಿಸಿದ ನಂತರ & ಅರ್ಹತೆಯನ್ನು ಪರಿಶೀಲಿಸಿದ ನಂತರ ವಿವಿಧ ತೈಲ ಮಾರುಕಟ್ಟೆ ಕಂಪನಿಗಳಿಂದ LPG ಸಂಪರ್ಕವನ್ನು ನೀಡಲಾಗುವುದು.

ಇತರೆ ವಿಷಯಗಳು

ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ! SSLC ಪಾಸ್‌ ಆದ್ರೆ ಸಾಕು 52 ಸಾವಿರ ಸಂಬಳ!

ದೇಶದ ಜನತೆಗೆ ಬಂಪರ್‌ ಸುದ್ದಿ.!! ಈ ಬ್ಯಾಂಕ್‌ ಗೆ ಸಿಕ್ತು ಅತ್ಯುನ್ನತ ಪ್ರಶಸ್ತಿ


Share

Leave a Reply

Your email address will not be published. Required fields are marked *