rtgh
Headlines

ವಾಹನ ಸವಾರರಿಗೆ ಅಲರ್ಟ್.!‌ ಫಾಸ್ಟ್ ಟ್ಯಾಗ್ ಬಳಕೆಗೆ ಇಂದಿನಿಂದ ಹೊಸ ನಿಯಮ ಜಾರಿ

one vehicle one fastag
Share

ಹಲೋ ಸ್ನೇಹಿತರೇ, ಈಗಾಗಲೇ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಿದೆ ಅದರ ಜೊತೆಗೆ ಹಲವಾರು ನಿಯಮಗಳು ಬದಲಾವಣೆ ಆಗುತ್ತದೆ. ಈಗಾಗಲೇ ಬ್ಯಾಂಕ್ ನ ಕೆಲವು ರೂಲ್ಸ್‌ಗಳು ಹಾಗೂ ಪಿಎಫ್ ನಿಯಮಗಳು ಬದಲಾವಣೆಯಾಗಿದೆ. ಅದರ ಜೊತೆಗೆ ಏಪ್ರಿಲ್ ಒಂದರಿಂದ ಫಾಸ್ಟ್ ಟ್ಯಾಗ್ ನಿಯಮಗಳು ಸಹ ಬದಲಾವಣೆಯಾಗಲಿದೆ. ಹಾಗಾದರೆ ಬದಲಾವಣೆಯಾಗಿರುವ ನಿಯಮಗಳ ಬಗ್ಗೆ ತಿಳಿಯಿರಿ.

one vehicle one fastag

Contents

ಫಾಸ್ಟ್ ಟ್ಯಾಗ್ ನಿಯಮಗಳು :- 

ಈಗಾಗಲೇ ಹೇಳಿರುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇನ್ನೂ ಮುಂದೆ ಒಂದು ವಾಹನದಲ್ಲಿ ಒಂದಕ್ಕಿಂತ ಹೆಚ್ಚು ಫಾಸ್ಟ್‌ಟ್ಯಾಗ್ ಅಳವಡಿಕೆ ಮಾಡುವಂತಿಲ್ಲ ಎಂಬ ನಿಯಮವನ್ನು ಜಾರಿ ಮಾಡಿದೆ. ಜೊತೆಗೆ ಒಂದೇ ಫಾಸ್ಟ್‌ಟ್ಯಾಗ್ ಒಂದಕ್ಕಿಂತ ಹೆಚ್ಚಿನ ವಾಹನಗಳಿಗೆ ಬಳಸುವುದನ್ನು ಸಹ ನಿಷೇಧಿಸಲಾಗಿದೆ.

ಈ ನಿಯಮದ ಪ್ರಮುಖ ಕಾರಣ :-

ಟೋಲ್ ಗೇಟ್ ನಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಿ ತ್ವರಿತ ಚಲನೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರಾಷ್ಟ್ರೀಯ ಹೆದ್ದಾರಿ (NHAI) ‘ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್’ ನಿಯಮವನ್ನು ಜಾರಿಗೆ ತಂದಿದೆ. ಈ ಉಪಕ್ರಮವು ಟೋಲ್ ಸಂಗ್ರಹ ವ್ಯವಸ್ಥೆಯ ದಕ್ಷತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಫಾಸ್ಟ್ ಟ್ಯಾಗ್ ಎಂದರೇನು?

ಟೋಲ್ ಗೇಟ್‌ನಲ್ಲಿ ಹೆಚ್ಚಿನ ವಾಹನ ದಟ್ಟಣೆಯನ್ನು ತಡೆಯುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರವು ಪರಿಚಯಿಸಿದೆ.

FASTag ಯಾವಾಗ ಜಾರಿ ಆಯಿತು?:

ಈ ಫಾಸ್ಟ್ ಟ್ಯಾಗ್ ನಿಯಮವು 2019 ಡಿಸೆಂಬರ್ 01 ರಂದು ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿದೆ. ಈಗಾಗಲೇ ದೇಶದ ತುಂಬಾ ಈ ಯೋಜನೆಯು ಪ್ರಚಲಿತವಾಗಿದೆ. ಆದರೆ ಈ ಯೋಜನೆಗೆ ಟ್ಯಾಗ್ ಮಾಡಲಾಗಿರುವ ನಿಮ್ಮ ಖಾತೆಯಲ್ಲಿ ಹೆಚ್ಚಿನ ಹಣ ಇರಬೇಕಾಗುತ್ತದೆ.

ಫಾಸ್ಟ್ ಟ್ಯಾಗ್ ಪಡೆದುಕೊಳ್ಳುವುದು ಹೇಗೆ?: 

NHAI ಫಾಸ್ಟ್ ಟ್ಯಾಗ್ ನೀಡಲು ದೇಶದ 22 ಬ್ಯಾಂಕ್ ಗಳಿಗೆ ಅನುಮತಿಯನ್ನು ನೀಡಿದೆ. ಜೊತೆಗೆ NHAI ಶಾಖೆಗಳಲ್ಲಿ ಮತ್ತು NHAI ಅಧಿಕೃತ ವೆಬ್ಸೈಟ್‌ಗಳಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಬ್ಯಾಂಕ್‌ಗಳ ವೆಬ್ಸೈಟ್ ನಲ್ಲಿ ಹಾಗೂ ಅಮೆಜಾನ್ ನಂತಹ ಹಲವಾರು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಫಾಸ್ಟ್ ಟ್ಯಾಗ್ ಕಾರ್ಡ್‌ ಆನ್‌ಲೈನ್‌ನಲ್ಲಿ ಒದಗಿಸುತ್ತವೆ.

FASTag ಪಡೆಯಲು ನೀಡಬೇಕಾದ ದಾಖಲೆಗಳು :-

  • ವಿಳಾಸದ ದಾಖಲೆ,
  • ನಿಮ್ಮ ಗುರುತಿನ ದಾಖಲೆ,
  • ನಿಮ್ಮ passport size photo,
  • ವಾಹನದ ನೋಂದಣಿ ಪ್ರಮಾಣಪತ್ರವನ್ನು (RC) ನೀಡಬೇಕು.

ಇತರೆ ವಿಷಯಗಳು

ಹಿರಿಯ ನಾಗರಿಕರ ರೈಲು ಟಿಕೆಟ್ ವಿನಾಯಿತಿ ರದ್ದು; ಇನ್ಮುಂದೆ ಪ್ರಯಾಣದ ದರ ಎಷ್ಟಿರಲಿದೆ ಗೊತ್ತೇ?

ಕಾಶಿ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ಸಹಾಯಧನ!! ಈ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ


Share

Leave a Reply

Your email address will not be published. Required fields are marked *