rtgh
Headlines

DL ಹೊಸ ನಿಯಮ ವದಂತಿಗೆ ಬ್ರೇಕ್! ಜೂ.1ರಿಂದ ಯಾವುದೇ ನಿಯಮ ಬದಲಾಗಿಲ್ಲ

New Driving Licence Rules
Share

ಹಲೋ ಸ್ನೇಹಿತರೇ, ಚಾಲನಾ ಪರವಾನಗಿ (DL) ಪಡೆಯುವುದು, ವಾಹನ ಚಾಲನಾ ಪರೀಕ್ಷೆ ಹಾಗೂ ಚಾಲನಾ ತರಬೇತಿ ಕೇಂದ್ರಗಳಿಗೆ ಸಂಬಂಧಿಸಿದಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜಾರಿಗೆ ತಂದಿರುವ ಹೊಸ ನಿಯಮಾವಳಿಯು ರಾಜ್ಯದಲ್ಲಿ ಸದ್ಯಕ್ಕೆ ಜಾರಿಯಾಗುವುದಿಲ್ಲ. ಹೊಸ ನಿಯಮಾವಳಿ ಜಾರಿ ಸಂಬಂಧ ಸಚಿವಾಲಯದಿಂದ ರಾಜ್ಯದ ಸಾರಿಗೆ ಇಲಾಖೆಗೆ ಈವರೆಗೆ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ, ಹಿಂದಿನಂತೆಯೇ ಆರ್‌ಟಿಒ ಕಚೇರಿಗಳಲ್ಲೇ ಡಿ.ಎಲ್‌ ನೀಡಿಕೆ ಮತ್ತು ವಾಹನ ಚಾಲನಾ ಪರೀಕ್ಷೆ ನಡೆಯಲಿದೆ.

New Driving Licence Rules

ಜೂ.1 ರಿಂದ ಡಿ.ಎಲ್‌. ನೀಡಿಕೆ ನಿಯಮ ಸಂಪೂರ್ಣ ಬದಲಾಗಲಿದೆ. ಸಾರ್ವಜನಿಕರು ಜೂ.1ರ ನಂತರ ಡಿ.ಎಲ್‌. ಪಡೆಯಲು ಮತ್ತು ಚಾಲನಾ ಪರೀಕ್ಷೆಗಾಗಿ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಹೋಗಬೇಕಿಲ್ಲ. ಬದಲಿಗೆ ಖಾಸಗಿ ವಾಹನ ಚಾಲನಾ ತರಬೇತಿ ಕೇಂದ್ರಗಳಲ್ಲೇ ಚಾಲನಾ ಪರೀಕ್ಷೆಗೆ ಹಾಜರಾಗಿ, ಡಿ.ಎಲ್‌ ಪಡೆಯಬಹುದೆಂದು ಸಚಿವಾಲಯ ಹೊಸ ಆದೇಶ ಹೊರಡಿಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ.

ಯಾವುದೇ ಬದಲಾವಣೆ ಆಗಿಲ್ಲ

“ಜೂ.1ರ ನಂತರ ವಾಹನ ಚಾಲನಾ ತರಬೇತಿ ಕೇಂದ್ರಗಳೇ ಡಿ.ಎಲ್‌. ನೀಡುತ್ತವೆ. ಡಿ.ಎಲ್‌ಗಾಗಿ ಸಾರ್ವಜನಿಕರು ಆರ್‌ಟಿಒ ಕಚೇರಿಗಳಿಗೆ ಹೋಗಬೇಕಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲ ಮಾಧ್ಯಮಗಳಲ್ಲೂ ಈ ಸುದ್ದಿ ಪ್ರಕಟವಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟತೆಯಿಲ್ಲ.

ಇದನ್ನೂ ಸಹ ಓದಿ : DL ಗಾಗಿ ನೀವು RTO ಕಚೇರಿಗೆ ಹೋಗುವ ಅವಶ್ಯಕತೆ ಇಲ್ಲ! ಜೂ. 1ರಿಂದ ಹೊಸ ನಿಯಮ

ಚಾಲನಾ ತರಬೇತಿ ಕೇಂದ್ರಗಳು ಚಾಲನಾ ಪರೀಕ್ಷೆಯಲ್ಲಿಉತ್ತೀರ್ಣರಾದವರಿಗೆ ಪ್ರಮಾಣ ಪತ್ರವನ್ನಷ್ಟೇ ನೀಡುತ್ತವೆ. ಆ ಪ್ರಮಾಣಪತ್ರಗಳ ಆಧಾರದಲ್ಲಿ ಆರ್‌ಟಿಒ ಕಚೇರಿಗಳಲ್ಲಿ ಡಿ.ಎಲ್‌. ನೀಡಲಾಗುತ್ತದೆ. ಡಿ.ಎಲ್‌. ನೀಡಿಕೆ ವಿಚಾರದಲ್ಲಿ ಆರ್‌ಟಿಒಗೆ ಇರುವ ಅಧಿಕಾರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ,”ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತರಬೇತಿ ಕೇಂದ್ರದಲ್ಲೇ ಪರೀಕ್ಷೆ

ಹೊಸ ಆದೇಶದ ಪ್ರಕಾರ, ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರಗಳೇ ಚಾಲನಾ ಪರೀಕ್ಷೆ ನಡೆಸಲಿವೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಆಯಾ ಕೇಂದ್ರಗಳೇ ಪ್ರಮಾಣಪತ್ರ ನೀಡಲಿವೆ. ಸಾರ್ವಜನಿಕರು ಡಿ.ಎಲ್‌.ಗೆ ಅರ್ಜಿ ಹಾಕುವಾಗ ಆ ಪ್ರಮಾಣಪತ್ರ ಸಲ್ಲಿಸಿದರೆ, ಆರ್‌ಟಿಒ ಕಚೇರಿಗಳಲ್ಲಿ ಮತ್ತೆ ಚಾಲನಾ ಪರೀಕ್ಷೆಗೆ ಹಾಜರಾಗಬೇಕಿಲ್ಲಎಂಬ ಸುದ್ದಿ ವೈರಲ್‌ ಆಗಿದೆ.

ಖಾಸಗಿ ವ್ಯಕ್ತಿಗಳು, ಸ್ವಯಂ ಸೇವಾ ಸಂಸ್ಥೆಗಳು, ಕಾರ್ಪೊರೇಟ್‌ ಕಂಪನಿಗಳು, ವಾಹನ ಉತ್ಪಾದನಾ ಕಂಪನಿಗಳು ಅಥವಾ ಯಾವುದೇ ಕಂಪನಿಯೂ ವಾಹನ ಚಾಲನಾ ತರಬೇತಿ ಹಾಗೂ ಚಾಲನಾ ಪರೀಕ್ಷಾ ಕೇಂದ್ರವನ್ನು ಆರಂಭಿಸಬಹುದು. ಒಂದು ಕಂಪನಿಯು ರಾಜ್ಯವೊಂದರಲ್ಲಿ ಗರಿಷ್ಠ ಐದು ಕೇಂದ್ರಗಳನ್ನಷ್ಟೇ ತೆರೆಯಬಹುದು. ಕೇಂದ್ರಗಳನ್ನು ತೆರೆಯಲು ಕಡ್ಡಾಯವಾಗಿ ಕೆಲ ಮೂಲಸೌಕರ್ಯಗಳನ್ನು ಹೊಂದಿರಬೇಕೆಂದು ಸಚಿವಾಲಯ ಷರತ್ತು ವಿಧಿಸಿದೆ.

ಇತರೆ ವಿಷಯಗಳು:

ವಾಹನ ಸವಾರರಿಗೆ ಬಿಗ್‌ ಶಾಕ್! ಇಂದಿನಿಂದ ದೇಶಾದ್ಯಂತ ಟೋಲ್ ದರ ಹೆಚ್ಚಳ

ಮತ್ತೆ ಮುಂದುವರಿದ ವರುಣನ ಅಬ್ಬರ..! ಈ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

ಸಿಲಿಂಡರ್‌ ಬೆಲೆಯಲ್ಲಿ ₹72 ರಷ್ಟು ಇಳಿಕೆ..! LPG ಬಳಕೆದಾರರಿಗೆ ಗುಡ್ ನ್ಯೂಸ್


Share

Leave a Reply

Your email address will not be published. Required fields are marked *