rtgh
Headlines

ಪ್ರತಿ ತಿಂಗಳು 3000 ಬರುವ ಕೇಂದ್ರ ಸರ್ಕಾರದ ಹೊಸ ಯೋಜನೆ!

National Pension Scheme
Share

ಹಲೋ ಸ್ನೇಹಿತರೆ, ಭಾರತ ದೇಶದಲ್ಲಿರುವ ಎಲ್ಲರೂ ಉತ್ತಮವಾಗಿ ಜೀವನ ಸಾಗಿಸಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಆ ಎಲ್ಲಾ ಯೋಜನೆಗಳ ಸೌಲಭ್ಯ ಸಿಗುವುದು ಈ ಅರ್ಹತೆ ಹೊಂದಿರುವ ಜನರಿಗೆ ಮಾತ್ರ. ಇದೀಗ ಕೇಂದ್ರ ಸರ್ಕಾರವು ಜನರಿಗಾಗಿ ಮತ್ತೊಂದು ಯೋಜನೆಯನ್ನು ಪರಿಚಯಿಸಿದೆ, ಆ ಯೋಜನೆ ಯಾವುದು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.

National Pension Scheme

ಇದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನೀಡುತ್ತಿರುವ ಸ್ವಯಂ ಪ್ರೇರಿತ ಕೊಡುಗೆಯ ಪಿಂಚಣಿ ಯೋಜನೆ ಇದಾಗಿರುತ್ತದೆ. ಇದನ್ನು ಮತ್ತೊಂದು ಹೆಸರಿನಲ್ಲಿ ಸಹ ಕರೆಯಲಾಗುತ್ತದೆ. ಸ್ವಯಂ ಉದ್ಯೋಗಿಗಳು ಹಾಗೂ ವ್ಯಾಪಾರಿಗಳಿಗಾಗಿ ಜಾರಿಗೆ ತಂದಿರುವಂತಹ ರಾಷ್ಟ್ರೀಯ ಪಿಂಚಣಿ ಯೋಜನೆಯಾಗಿದೆ. ಈ ಯೋಜನೆಯ ಲಾಭವನ್ನು ಸಣ್ಣ ವ್ಯಾಪಾರ ಮಾಡುವ ಹಲವು ಜನರು ಕೂಡ ಪಡೆದುಕೊಳ್ಳಬಹುದು.

ಪ್ರತಿ ತಿಂಗಳು ಸಿಗಲಿದೆ ₹3000 ಪಿಂಚಣಿ!

ನ್ಯಾಷನಲ್ ಪೆನ್ಶನ್ ಸ್ಕೀಮ್ ಲಾಭ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರಿಗೆ 60 ವರ್ಷ ತಲುಪಿದ ಬಳಿಕ ಪ್ರತಿ ತಿಂಗಳು ₹3000 ರೂಪಾಯಿ ಪಿಂಚಣಿ ಹಣ ಬರುತ್ತದೆ. ಒಂದು ವೇಳೆ ಪೆನ್ಶನ್ ಪಡೆಯುವ ವ್ಯಕ್ತಿ ಮರಣ ಹೊಂದಿದರೆ, ಅವರ ಸಂಗಾತಿಗೆ ಇದರಲ್ಲಿ ಅರ್ಧದಷ್ಟು ಹಣ ಅಂದರೆ ಪ್ರತಿ ತಿಂಗಳು ₹1500 ರೂಪಾಯಿ ಪೆನ್ಶನ್ ಪಡೆಯುತ್ತಾರೆ.

ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಸಣ್ಣ ವ್ಯಾಪಾರಿಗಳು, ಸಣ್ಣ ಚಿಲ್ಲರೆ ಅಂಗಡಿ ಹೊಂದಿರುವವರು, ಅಂಗಡಿ ಓನರ್ ಗಳು, ಅಕ್ಕಿ ಗಿರಣಿ ಅಂಗಡಿ ಹೊಂದಿರುವವರು, ವರ್ಕ್ ಶಾಪ್ ಇರುವವರು,, ತೈಲ ಗಿರಣಿ ಅಂಗಡಿಯನ್ನು ಹೊಂದಿರುವವರು, ಸ್ವಯಂ ಉದ್ಯೋಗ ಮಾಡುತ್ತಿರುವವರು, ಸಣ್ಣ ಹೋಟೆಲ್ ವ್ಯಾಪಾರಿಗಳು, ರಿಯಲ್ ಎಸ್ಟೇಟ್ ಏಜೆನ್ಸಿ ಗಳು, ರೆಸ್ಟೋರೆಂಟ್ ಮಾಲೀಕರು ಗಳು ಜೊತೆಗೆ ವರ್ಷದ ಆದಾಯ 1.5 ಕೋಟಿಗಿಂತ ಕಡಿಮೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಪೆನ್ಶನ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು

  • ಅರ್ಜಿ ಸಲ್ಲಿಸುವ ವ್ಯಕ್ತಿಯ ವಯಸ್ಸು 18 ರಿಂದ 40 ವರ್ಷಗಳ ಒಳಗಿರಬೇಕು.
  • ವಾರ್ಷಿಕ ಆದಾಯ 1.5 ಕೋಟಿಗಿಂತ ಕಡಿಮೆ ಹೊಂದಿರಬೇಕು.
  • ಅರ್ಜಿ ಸಲ್ಲಿಸುವ ವ್ಯಕ್ತಿ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುವವರಾಗಿರಬಾರದು.

ಇದನ್ನು ಸಹ ಓದಿ: ಬ್ಯಾಂಕ್‌ ಗ್ರಾಹಕರಿಗೆ ಶಾಕಿಂಗ್‌ ಸುದ್ದಿ: ಬ್ಯಾಂಕ್ ಸೇವೆಗಳ ಶುಲ್ಕ ಹೆಚ್ಚಳ!

ಅಗತ್ಯವಿರುವ ದಾಖಲೆಗಳು

*ಬ್ಯಾಂಕ್ ಖಾತೆ ಡೀಟೇಲ್ಸ್
*ಆಧಾರ್ ಕಾರ್ಡ್

ಅರ್ಜಿ ಸಲ್ಲಿಕೆ ಹೇಗೆ?

  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಹತ್ತಿರ ಇರುವ ಸೇವಾ ಕೇಂದ್ರ ಅಥವಾ CSC ಕೇಂದ್ರಕ್ಕೆ ಭೇಟಿ ನೀಡಬಹುದು. ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಡೀಟೇಲ್ಸ್ ನೀಡಿ ಅರ್ಜಿ ಆಲ್ಲಿಸಬಹುದು.
  • ಮೊದಲು ನಿಮ್ಮ ಹೆಸರು, ಡೇಟ್ ಆಫ್ ಬರ್ತ್, ಆಧಾರ್ ನಂಬರ್ ಇವುಗಳನ್ನು ಪರಿಶೀಲಿಸಲಾಗುತ್ತದೆ.
  • ನಂತರದಲಿ ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್, GTIN ನಂಬರ್, ಫೋನ್ ನಂಬರ್, ಇಮೇಲ್ ಐಡಿ ಈ ಎಲ್ಲಾ ಮಾಹಿತಿ ನೀಡಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
  • ಅರ್ಜಿ ಸಲ್ಲಿಕೆ ಮಾಡಿದ ನಂತರ ನಿಮಗೆ ಪೆನ್ಶನ್ ಅಕೌಂಟ್ ನಂಬರ್ ಸಿಗುತ್ತದೆ, ಹಾಗೆಯೇ ನಿಮಗೆ ವ್ಯಾಪಾರಿ ಕಾರ್ಡ್ ಅನ್ನು ಸಹ ಪ್ರಿಂಟ್ ಮಾಡಲಾಗುತ್ತದೆ. ಅರ್ಜಿ ಹಾಕಿದವರು 10 ವರ್ಷಗಳ ಒಳಗೆ ಯೋಜನೆಯನ್ನು ರದ್ದುಮಾಡಿದರೆ, 10 ವರ್ಷದ ಅರ್ಧ ಅವಧಿಯಲ್ಲಿ ಪಾವತಿ ಮಾಡಿದಂತಹ ಒಟ್ಟು ಹಣವನ್ನು ನಿಮಗೆ ನೀಡಲಾಗುತ್ತದೆ. ಹಾಗೆಯೇ ಬಡ್ಡಿ ಮೊತ್ತವನ್ನು ಕೂಡ ನೀಡಲಾಗುತ್ತದೆ.
  • ಆಕಸ್ಮಿಕವಾಗಿ ಪಾಲಿಸಿ ಪಡೆದವರು ಮಧ್ಯದಲ್ಲೇ ತೀರಿಹೋದರೆ, ಮನೆಯವರು ನಿಯಮಿತವಾಗಿ ಹಣ ಕಟ್ಟಿ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುವ ಅವಕಾಶವಿದೆ ಅಥವಾ ಪೆನ್ಶನ್ ಸ್ಕೀಮ್ ಅನ್ನು ನಿಲ್ಲಿಸಬಹುದು. ಆಗ ನಿಮಗೆ ಉಳಿತಾಯ ಜೊತೆಗೆ ಬಡ್ಡಿ ಮೊತ್ತವನ್ನು ನೀಡಲಾಗುತ್ತದೆ. ಆಸಕ್ತಿ ಇರುವವರು ಸಂಪೂರ್ಣ ಮಾಹಿತಿ ಪಡೆದು, ನಂತರ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಹಾಕಿ.

ಇತರೆ ವಿಷಯಗಳು:

KSRTC ಬಸ್‌ ಟಿಕೆಟ್‌ ಖರೀದಿಸುವವರಿಗೆ ಸಿಹಿಸುದ್ದಿ! ಜೂನ್ 25 ರಿಂದ ಹೊಸ ಸಿಸ್ಟಂ

ಪಡಿತರ ಚೀಟಿಗೆ ಹೊಸ ಮಕ್ಕಳ ಹೆಸರು ಸೇರಿಸಲು ಆಹಾರ ಇಲಾಖೆ ಆನ್‌ಲೈನ್ ಸೌಲಭ್ಯ!!


Share

Leave a Reply

Your email address will not be published. Required fields are marked *