rtgh
Headlines

ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಸಿಗುತ್ತೆ ₹11,000.! ಈ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ

matritva vandana yojana
Share

ಹಲೋ ಸ್ನೇಹಿತರೇ, ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಈಗಾಗಲೇ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈಗ ಹೊಸದಾಗಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಆರ್ಥಿಕ ಸಹಾಯ ಒದಗಿಸಲು 11000 ರೂ. ನೀಡುತ್ತಿದೆ. ಹಾಗಾದ್ರೆ ಆ ಯೋಜನೆ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ

matritva vandana yojana

Contents

ಕೇಂದ್ರ ಸರ್ಕಾರದ ಈ ಯೋಜನೆ ಯಾರಿಗೆ ಲಭ್ಯವಿದೆ?

ಭಾರತದ ಎಲ್ಲಾ ರಾಜ್ಯಗಳ ಗರ್ಭಿಣಿ & ಬಾಣಂತಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಮಹಿಳೆಯರು ಗರ್ಭಿಣಿ ಇರುವಾಗ ಹೆಚ್ಚಿನ ವಿಶ್ರಾಂತಿ ಅಗತ್ಯವಿರುತ್ತದೆ. ಆ ಸಮಯದಲ್ಲಿ ಬೇರೆ ಕಡೆ ಹೋಗಿ ದುಡಿಯಲು ಸಾಧ್ಯವಾಗುವುದಿಲ್ಲ. ಅದಕ್ಕೆ ಈ ಯೋಜನೆ ಮಹಿಳೆಯರ ಆರ್ಥಿಕ ಸಹಾಯ ಮಾಡುತ್ತದೆ. 

ಗರ್ಭಿಣಿಗೆ ಸಹಾಯ ನೀಡುವ ಈ ಯೋಜನೆ ಯಾವುದು?

ಭಾರತ ಸರ್ಕಾರದ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳೆಯರಿಗಾಗಿ ಆಯೋಜಿಸಿದ ವಿಶೇಷ ಯೋಜನೆಯಾಗಿದೆ. ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ. ಈ ಯೋಜನೆಯಲ್ಲಿ ಮಹಿಳೆಯರಿಗೆ ವಿವಿಧ ಕಂತಿನ ಮೂಲಕ 11,000 ರೂ. ಸಹಾಯಧನವನ್ನು ಸರ್ಕಾರ ನೀಡಲಿದೆ. ಈ ಯೋಜನೆಯಿಂದ ಗರ್ಭಿಣಿ ಸಂದರ್ಭದಲ್ಲಿ ಪೌಷ್ಟಿಕ ಆಹಾರ ಸೇವನೆ, ಪ್ರಸವದ ನಂತರ ಮಕ್ಕಳ ಆರೈಕೆಗೆ ಬೇಕಾಗುವ ಆಸ್ಪತ್ರೆ ಖರ್ಚುಗಳು, ಔಷಿಧಿಗಳ ಖರ್ಚಿಗೆ ಸ್ವಲ್ಪ ಪ್ರಮಾಣದ ಸಹಾಯವಾಗಲಿದೆ. ಯೋಜನೆಗೆ ಅರ್ಜಿ ಸಲ್ಲಿಸುವವರು ಆನ್ಲೈನ್ / ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ವಿವಿಧ ಕಂತುಗಳಲ್ಲಿ ಹಣ ಸಿಗುತ್ತದೆ.

ಫಲಾನುಭವಿ ಮಹಿಳೆಯು ಮೊದಲ ಬಾರಿ ಗರ್ಭಿಣಿಯಾಗಿದ್ದರೆ ಮೊದಲ ಕಂತಿನಲ್ಲಿ 3,000 ರೂ. ಸಿಗುತ್ತದೆ. ಮೊದಲ ಕಂತಿನ ಹಣ ಪಡೆಯಲು ಗರ್ಭಧಾರಣೆಯ ನೋಂದಣಿ & ಕನಿಷ್ಠ ಒಂದು ಎನ್‌ಸಿ ಪೂರ್ಣವಾಗಿರಬೇಕು. ನಂತರ ಇನ್ನೊಂದು ಕಂತಿನಲ್ಲಿ 2,000 ರೂ ಹಣ ಸಿಗುತ್ತದೆ. ಮಗುವಿನ ಜನನ ನೋಂದಣಿಯಾಗಬೇಕು ಮತ್ತು ಮೊದಲ ಸುತ್ತಿನ ಲಸಿಕೆ ನಂತರ ನಿಮಗೆ 2ನೇ ಸುತ್ತಿನ ಹಣ ಸಿಗಲಿದೆ. ಹಾಗೂ 2ನೇ ಬಾರಿ ಹೆಣ್ಣು ಮಗು ಜನಿಸಿದರೆ ಮಗುವಿನ ನೋಂದಣಿ & ಮೊದಲ ಹಂತದ ಲಿಸಿಕೆ ಆದ ನಂತರ ಮಹಿಳೆಯ ಖಾತೆಗೆ ನೇರವಾಗಿ 6,000 ರೂ. ಹಣ ಸಿಗುತ್ತದೆ. ಒಟ್ಟು ಈ ಯೋಜನೆಯಲ್ಲಿ 3 ಕಂತಿನಲ್ಲಿ 11,000 ರೂ. ಹಣವು ಒಬ್ಬ ಮಹಿಳೆಗೆ ಸಿಗಲಿದೆ.

ಯೋಜನೆಯ ನಿಯಮಗಳು

  • ಮಹಿಳೆಯು ಭಾರತದ ಪ್ರಜೆ ಆಗಿರಬೇಕು.
  • ಮಹಿಳಾ ಅರ್ಜಿದಾರರ ಕನಿಷ್ಠ ವಯಸ್ಸು 19 ವರ್ಷ / ಅದಕ್ಕೂ ಮೇಲ್ಪಟ್ಟಿರಬೇಕಾಗುತ್ತದೆ.
  • ಗರ್ಭಿಣಿ ಮಹಿಳೆ / ಹಾಲುಣಿಸುವ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
  • ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸಹ ಈ ಯೋಜನೆ ಅರ್ಜಿಯನ್ನು ಸಲ್ಲಿಸಲು ಅರ್ಹರು.
  • ಅರ್ಜಿದಾರ ಮಹಿಳೆಯ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಕಾರ್ಡ್‌ ಜೋಡಣೆಯಾಗಿರಬೇಕು.

ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆ

ಗರ್ಭಿಣಿ ಮಹಿಳೆಯ ಆಧಾರ್ ಕಾರ್ಡ್ ಮತ್ತು ಗರ್ಭಿಣಿ ಕಾರ್ಡ್ ನಂಬರ್ ಮಗುವಿನ ಜನನ ಪ್ರಮಾಣಪತ್ರ, ವಿಳಾಸ ಪುರಾವೆ ಆದಾಯ & ಜಾತಿ ಪ್ರಮಾಣಪತ್ರ, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್ ಪುಸ್ತಕ, ಮೊಬೈಲ್ ಸಂಖ್ಯೆ, ಪಾಸ್ಪೋರ್ಟ್ ಫೋಟೋ.

ಇತರೆ ವಿಷಯಗಳು

ರಾಜ್ಯಕ್ಕೆ ಆಗಮಿಸಲಿದ್ದಾನೆ ಮಳೆರಾಯ.! ಯಾವ ಭಾಗದಲ್ಲಿ ಎಷ್ಟು ಮಳೆಯಾಗಲಿದೆ??

ಬ್ಯಾಂಕ್ ನಲ್ಲಿ ಸಹಾಯಕ ಹುದ್ದೆಗಳಿಗೆ ಅರ್ಜಿ ಪ್ರಾರಂಭ! ಪದವಿ ಪಾಸ್‌ ಆಗಿದ್ರೆ ಸಾಕು


Share

Leave a Reply

Your email address will not be published. Required fields are marked *