rtgh
Headlines

ಕಾರ್ಮಿಕ ಮಕ್ಕಳು ಶಿಕ್ಷಣ ಮುಂದುವರಿಸಲು ಗುಡ್‌ ನ್ಯೂಸ್! 11 ಸಾವಿರ ರೂ ನೇರವಾಗಿ ಖಾತೆಗೆ

Labour Card Scholarship
Share

ಹಲೋ ಸ್ನೇಹಿತರೆ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಈಗಾಗಲೇ ಸರಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ವಿಮೆ ಸೌಲಭ್ಯ ವಿತರಣೆಯಿಂದ ಹೆಚ್ಚುವರಿ ಸಹಾಯಧನದವರೆಗೂ ಅನೇಕ ಸೇವಾ ಸೌಲಭ್ಯ ನೀಡಿದೆ. ಇದೀಗ ಕಾರ್ಮಿಕರ ಮಕ್ಕಳಿಗೆ ರಾಜ್ಯ ಸರಕಾರವು ಸಿಹಿ ಸುದ್ದಿ ಒಂದನ್ನು ನೀಡಿದೆ ಈ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Labour Card Scholarship

ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಾಯುವ ಹಿನ್ನಲೆಯಲ್ಲಿ ಈಗಾಗಲೇ ಬೇರೆ ಬೇರೆ ಯೋಜನೆಯನ್ನು ಸರ್ಕಾರ ಪರಿಚಯಿಸಿದ್ದು ಅವರ ಮಕ್ಕಳಿಗೂ ವಿದ್ಯಾಭ್ಯಾಸ ಸಿಗಬೇಕು ಎಂಬ ಉದ್ದೇಶಕ್ಕೆ ವಿದ್ಯಾರ್ಥಿ ವೇತನ ವಿತರಣೆ ಮಾಡಲು ರಾಜ್ಯ ಸರಕಾರ ಮುಂದಾಗಿದ್ದು ಇದಕ್ಕಾಗಿ ಅರ್ಜಿಯನ್ನು ಕೂಡ ಆಹ್ವಾನಿಸಲಾಗಿದೆ. ಈ ವಿದ್ಯಾರ್ಥಿ ವೇತನವು ಬಡವರ್ಗದ ಮಕ್ಕಳಿಗೆ ಹಣಕಾಸಿನ ನೆರವು ನೀಡುತ್ತದೆ.

ಇದನ್ನು ಓದಿ: ಹೊಸ ಬಿಪಿಎಲ್ ಕಾರ್ಡ್‌ಗೆ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಿ! ಇಲ್ಲಿದೆ ಡೈರೆಕ್ಟ್‌ ಲಿಂಕ್

ಕಾರ್ಮಿಕರ ಕಾರ್ಡ್ ಅಗತ್ಯ:

ಈ ವಿದ್ಯಾರ್ಥಿ ವೇತನವು ಎಲ್ಲ ಕಾರ್ಮಿಕರ ಮಕ್ಕಳಿಗೆ ಸಿಗುವುದಿಲ್ಲ ಬದಲಿಗೆ ಕಾರ್ಮಿಕರ ಕಾರ್ಡ್ ಹೊಂದಿದ್ದ ಪೋಷಕರ ಮಕ್ಕಳು ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಬಹುದು. ಕಾರ್ಮಿಕರ ಮಕ್ಕಳು ಈ ವಿದ್ಯಾರ್ಥಿ ವೇತನ ಪಡೆಯಲು ಕಾರ್ಮಿಕರ ಕಾರ್ಡ್ ಅಗತ್ಯವಾಗಿ ಬೇಕೆ ಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ವಾರ್ಷಿಕ 1100 ನಿಂದ 11,000 ದ ವರೆಗೆ ವಿದ್ಯಾರ್ಥಿ ವೇತನ ನೀಡಲಾಗುವುದು.

ಈ ಯೋಜನೆಗೆ ಅಗತ್ಯವಿರುವ ಅರ್ಹತೆ ಏನು?

  • ಸಾಮಾನ್ಯವಾಗಿ ಲೇಬರ್ ಕಾರ್ಡ್ ಹೊಂದಿರುವವರ ಮಕ್ಕಳು ಕಳೆದ ಸಾಲಿನಲ್ಲಿ 50% ಪಡೆದಿರಬೇಕು. ST/SC ನವರು 45%ನಷ್ಟು ಪಡೆಯಬೇಕು.
  • ಪೋಷಕರ ಆದಾಯ ತಿಂಗಳಿಗೆ 35,000ಕ್ಕಿಂತ ಕಡಿಮೆ ಇರಬೇಕು. ಹಾಗೂ ವಿದ್ಯಾರ್ಥಿಗಳ ಪೋಷಕರು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಸದಸ್ಯರಾಗಿರಬೇಕು.
  • 1ನೇ ತರಗತಿಯಿಂದ ಪದವಿವರೆಗೆ 1,100 ರೂಪಾಯಿಂದ 6000 ದವರೆಗೆ ಸ್ಕಾಲರ್ ಶಿಪ್ ಹಣ ಸಿಗಲಿದೆ.
  • ಸ್ನಾತಕೋತ್ತರ ಪದವಿ ಯಲ್ಲಿ 10,000 ಸ್ಕಾಲರ್ ಶಿಪ್ ಪಡೆಯಬಹುದು.
  • PHD ಮಾಡುವವರಿಗೆ ವಾರ್ಷಿಕ 11,000 ದವರೆಗ ವಿದ್ಯಾರ್ಥಿವೇತನವು ಸಿಗಲಿದೆ.

ಎಲ್ಲಿ ಹೇಗೆ ಅರ್ಜಿ ಸಲ್ಲಿಸುವುದು?

ಅರ್ಜಿ ಸಲ್ಲಿಸಲು ಕೆಲವು ದಾಖಲಾತಿಗಳ ಅಗತ್ಯವಾಗಿದೆ. ವಿದ್ಯಾರ್ಥಿಗಳ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಲೇಬರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಪೋಷಕರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ, ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ, ಶಾಲೆ ಅಥವಾ ಕಾಲೇಜಿನ ದಾಖಲಾತಿ ಪಡೆದರೆ ಅದಕ್ಕೆ ಸಂಬಂಧ ಪಟ್ಟ ರಿಸಿಪ್ಟ್ ಅಗತ್ಯವಾಗಿದೆ. ನೀವು http://klwbapp.Karnataka.gov.in ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

ಇತರೆ ವಿಷಯಗಳು:

ಈ 21 ರಾಜ್ಯಗಳಲ್ಲಿನ ನೌಕರರಿಗೆ ₹40000 ಬರಲಾರಂಭ!

ಅಂತೂ ರಾಜ್ಯದ ರೈತರಿಗೆ ಸಿಕ್ತು ಬರ ಪರಿಹಾರ! ಕೇಂದ್ರದಿಂದ 3,454 ಕೋಟಿ ರೂ. ಬಿಡುಗಡೆ


Share

Leave a Reply

Your email address will not be published. Required fields are marked *