ಹಲೋ ಸ್ನೇಹಿತರೇ, ಕರ್ನಾಟಕ ಲೋಕಸೇವಾ ಆಯೋಗವು ಇತ್ತೀಚೆಗೆ ಗ್ರೂಪ್ ಎ, ಗ್ರೂಪ್ ಬಿ 384 KAS ಹುದ್ದೆಯ ನೇಮಕಾತಿಗೆ ಪ್ರಕಟಣೆ ಹೊರಡಿಸಿತ್ತು. ಇದೀಗ ಮತ್ತೊಂದು ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
KPSC ಭೂಮಾಪನ ಕಂದಾಯ ವ್ಯವಸ್ಥೆ & ಭೂದಾಖಲೆಗಳ ಇಲಾಖೆಯಲ್ಲಿನ ಹೈದರಾಬಾದ್ ಕರ್ನಾಟಕ ವೃಂದದಲ್ಲಿ 100 ಭೂಮಾಪಕರು & 264 ಉಳಿಕೆ ಮೂಲ ವೃಂದದ ಭೂಮಾಪಕರು ಹುದ್ದೆಯನ್ನು ನೇರ ನೇಮಕಾತಿಯ ಮೂಲಕ ಭರ್ತಿಯನ್ನು ಮಾಡಲು ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ವೇತನ ಶ್ರೇಣಿ ₹23,500- 47,650 ಇದೆ. ಗ್ರೂಪ್ C ವೃಂದದ ಹುದ್ದೆಗಳಾಗಿದೆ. ಆಸಕ್ತರು ಅರ್ಹತೆ, ಪ್ರಮುಖ ದಿನಾಂಕಗಳು, Online ಅರ್ಜಿ ವಿಧಾನವನ್ನು ತಿಳಿಯಿರಿ.
ನೇಮಕಾತಿ ಪ್ರಾಧಿಕಾರ ಹೆಸರು : ಕರ್ನಾಟಕ ಲೋಕಸೇವಾ ಆಯೋಗ
ಉದ್ಯೋಗ ಇಲಾಖೆ : ಭೂಮಾಪನ ಕಂದಾಯ ವ್ಯವಸ್ಥೆ& ಭೂದಾಖಲೆಗಳ ಇಲಾಖೆ
ಹುದ್ದೆಯ ಹೆಸರು : ಭೂಮಾಪಕರು
ಹುದ್ದೆಯ ಸಂಖ್ಯೆ : ಒಟ್ಟು 364 100HK +264RPC
ವೇತನ : ರೂ.23,500- 47,650
Contents
ಭೂಮಾಪಕರು ಹುದ್ದೆಗೆ ಶೈಕ್ಷಣಿಕ ವಿದ್ಯಾರ್ಹತೆ
- BE(ಸಿವಿಲ್) / ಬಿ.ಟೆಕ್ (ಸಿವಿಲ್) / ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮದಲ್ಲಿ ಉತ್ತೀರ್ಣ.
- ಪಿಯುಸಿ / 12ನೇ ತರಗತಿ (ಸಿಬಿಎಸ್‌ಇ / ಐಸಿಎಸ್‌ಇ) ಇವುಗಳಲ್ಲಿ ವಿಜ್ಞಾನ ವಿಷಯ ಪಡೆದು ಗಣಿತ ವಿಷಯದಲ್ಲಿ ಶೇಕಡ.60% ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣ.
- ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುತ್ತಿರುವ ‘ಲ್ಯಾಂಡ್ ಅಂಡ್ ಸಿಟಿ ಸರ್ವೆ’ಯ ಪದವಿ ಪೂರ್ವ ಡಿಪ್ಲೊಮ pass.
- ಕರ್ನಾಟಕ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆ ನಡೆಸುವ ‘ಐಟಿಐ ಇನ್ ಸರ್ವೆ ಟ್ರೇಡ್’ ನಲ್ಲಿ pass ಆಗಿರಬೇಕಾಗುತ್ತದೆ.
ಭೂಮಾಪಕರು ಹುದ್ದೆಗೆ ವಯಸ್ಸಿನ ಅರ್ಹತೆಗಳು
- ಕನಿಷ್ಠ 18 ವರ್ಷ.
- ಸಾಮಾನ್ಯ ಅರ್ಹತೆಯ ಅಭ್ಯರ್ಥಿಗೆ ಗರಿಷ್ಠ 35 ವರ್ಷ -ಅಪ್ಲಿಕೇಶನ್ ಶುಲ್ಕ ರೂ.600
- ಹಿಂದುಳಿದ ವರ್ಗದ ಅಭ್ಯರ್ಥಿಗೆ ಗರಿಷ್ಠ 38 ವರ್ಷ -ಅಪ್ಲಿಕೇಶನ್ ಶುಲ್ಕ ರೂ.300.
- SE, ST, ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ – ಶುಲ್ಕ ವಿನಾಯಿತಿ ಇದೆ
- ಮಾಜಿ ಸೈನಿಕ ಅಭ್ಯರ್ಥಿಗೆ ₹50.
ಭೂಮಾಪಕರ ನೇಮಕಾತಿ ಸಂಬಂಧಿತ ಪ್ರಮುಖ ದಿನಾಂಕಗಳು
Online ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 11-03-2024
Online ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10-04-2024
ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿ ಕನ್ನಡ ಭಾಷೆ ಪರೀಕ್ಷೆ ದಿನಾಂಕ : 20-07-2024
ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ: 21-07-2024
ಅರ್ಜಿ ಸಲ್ಲಿಕೆ ಹೇಗೆ?
KPSC ವೆಬ್‌ಸೈಟ್ www.kpsc.kar.nic.in ಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.
– ಮೊದಲ ಹಂತದಲ್ಲಿ ಅಭ್ಯರ್ಥಿಯ ತಮ್ಮ ವಿವರ, ಶೈಕ್ಷಣಿಕ ಅರ್ಹತೆಯ ವಿವರ & ಇತರೆ ವಿವರವನ್ನು ಭರ್ತಿ ಮಾಡಿ.
– 2ನೇ ಹಂತವಾಗಿ ಇಲಾಖೆ ಕೇಳಲಾದ ಇತರೆ ವಿವರ ನೀಡಿ ಅಪ್ಲಿಕೇಶನ್ submit ಮಾಡಿ.
– 3ನೇ ಹಂತದಲ್ಲಿ ಅಭ್ಯರ್ಥಿಯ ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಕೌಶಲ & ಶೈಕ್ಷಣಿಕ ಅರ್ಹತೆ
ವಿದ್ಯಾರ್ಹತೆ | ಸಿವಿಲ್/ ಸರ್ವೆ ವಿಭಾಗದಲ್ಲಿ ಬಿಇ, ಡಿಪ್ಲೊಮ, ITI ಶಿಕ್ಷಣ. PUC ಪಾಸ್. |
ವೆಬ್‌ಸೈಟ್ ವಿಳಾಸ | https://www.kpsc.kar.nic.in/ |
ಉದ್ಯೋಗ ಸ್ಥಳ
ವಿಳಾಸ | ಕರ್ನಾಟಕದಾದ್ಯಂತ ನೇಮಕಾತಿ. |
ಪ್ರದೇಶ | ಕರ್ನಾಟಕ |
ಸ್ಥಳ | karnataka |
ಅಂಚೆ ಸಂಖ್ಯೆ | 560001 |
ಇತರೆ ವಿಷಯಗಳು
ಟಾಟಾ ಗ್ರೂಪ್‌ನಿಂದ ರೂ.10 ಲಕ್ಷ ಸ್ಕಾಲರ್‌ಶಿಪ್: ಅರ್ಜಿ ಹಾಕಲು ಕೆಲವೇ ದಿನಗಳು ಮಾತ್ರ ಬಾಕಿ
SSC 2049 ಸೆಲೆಕ್ಷನ್ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ.! 40,000 ವೇತನ ಈ ಕೂಡಲೇ ಅಪ್ಲೇ ಮಾಡಿ