rtgh

ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ! 10 ತಿಂಗಳ ತರಬೇತಿ ಜೊತೆಗೆ ಸಿಗುತ್ತೆ ₹1,750 ಮಾಸಿಕ ಶಿಷ್ಯವೇತನ

Horticulture training
Share

ಹಲೋ ಸ್ನೇಹಿತರೇ, 2024-25 ನೇ ಸಾಲಿಗೆ ರಾಜ್ಯದ ಹಲವೆಡೆ ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

Horticulture training

ತೋಟಗಾರಿಕೆ ಕ್ಷೇತ್ರದಲ್ಲಿ ವೈಜ್ಞಾನಿಕವಾಗಿ & ಅರ್ಥಿಕವಾಗಿ ಉತ್ತಮ ಬೇಸಾಯ ಕ್ರಮದ ಕುರಿತು ತರಬೇತಿಯನ್ನು ಪಡೆಯಲು ಆಸಕ್ತಿ ಇರುವವರು ತಾಂತ್ರಿಕ ತರಬೇತಿ ನೀಡಲು ರಾಜ್ಯದ ಹಲವೆಡೆ ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು. 

ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿ ಏನು ಎಲ್ಲವನ್ನು ಈ ಲೇಖನದಲ್ಲಿ ತಿಳಿಯಿರಿ.

ತರಬೇತಿ ನಡೆಯುವ ಅವಧಿ

ಈ ತರಬೇತಿ 02-05 2024 ರಿಂದ ಆರ‍ಂಭವಾಗಿ 28-05-2025 ವರೆಗು ನಡೆಯಲಿದೆ ಒಟ್ಟು 10 ತಿಂಗಳ ಅವಧಿಯ ತರಬೇತಿಯನ್ನು ನೀಡಲಾಗುವುದು.

ಅರ್ಜಿ ಸಲ್ಲಿಸಲು ವಿದ್ಯಾರ್ಹತೆ: 

ಕನ್ನಡ ವಿಷಯದೊಂದಿಗೆ SSLC ಉತ್ತಿರ್ಣರಾಗಿರಬೇಕು.

ಅರ್ಜಿ ಸಲ್ಲಿಸಲು ವಯೋಮಿತಿ:

1) ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದವರಿಗೆ: ಕನಿಷ್ಟ 18 ಗರಿಷ್ಠ 33 ವರ್ಷ 
2) ಮಾಜಿ ಸೈನಿಕರಿಗೆ: 33 ರಿಂದ 65 ವರ್ಷಗಳು 
3) ಇತರೆ ವರ್ಗ:18 ರಿಂದ 30 ವರ್ಷ.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ತರಬೇತಿಯನ್ನು ಪಡೆಯಲು ಇಚ್ಚಿಸುವವರು ಅರ್ಜಿಯನ್ನು, ತೋಟಗಾರಿಕೆ ಉಪ ನಿರ್ದೇಶಕರು, ಜಿಲ್ಲಾ ಪಂಚಾಯತ್ ಧಾರವಾಡ ಕಛೇರಿಯಲ್ಲಿ ಸಲ್ಲಿಸಬೇಕು. 

ಸಾಮಾನ್ಯ ಅಭ್ಯರ್ಥಿಗಳಿಗೆ ₹30 & ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ₹15 ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್ (IPO) or ಬ್ಯಾಂಕ್ ಡಿಮ್ಯಾಂಡ್ ಡ್ರಾಪ್ಟ್‍ನ್ನು ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ಅವರ ಹೆಸರಿರಲ್ಲಿ ಪಡೆದು, ಅರ್ಜಿ ಜೊತೆಗೆ ಅರ್ಜಿ ಶುಲ್ಕದ ಲಗತ್ತಿಸಬೇಕಾಗುತ್ತದೆ. 

ಅರ್ಜಿ ಫಾರಂನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಛೇರಿಯಲ್ಲಿ / ಇಲಾಖಾ ವೆಬ್‍ಸೈಟ್  https://horticulturedir.karnataka.gov.in ನಲ್ಲಿ 01-03-2024 ರಿಂದ 30-03-2024 ರವರೆಗೆ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 

ಭರ್ತಿ ಮಾಡಿದ ಅರ್ಜಿಯನ್ನು ಪೂರ್ಣ ಪ್ರಮಾಣದ ದಾಖಲಾತಿ ಜೊತೆಗೆ 01 ಎಪ್ರೀಲ್ 2024 ಸಂಜೆ 5:30 ಒಳಗೆ ಸಲ್ಲಿಸಬೇಕಾಗುತ್ತದೆ.

ಈ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ 1,750 ಮಾಸಿಕ ಶಿಷ್ಯವೇತನವನ್ನು ಕೂಡ ನೀಡಲಾಗುತ್ತದೆ.

ತರಬೇತಿ ನಿಭಂದನೆಗಳು:

  • ಈ ತರಬೇತಿಯು ರೈತರ ಮಕ್ಕಳಿಗೆ ಇರುವುದರಿಂದ ಅಭ್ಯರ್ಥಿಯ ತಂದೆ / ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಮತ್ತು ಸ್ವಂತ ಸಾಗುವಳಿ ಮಾಡುತ್ತಿರಬೇಕು.
  • ಅಭ್ಯರ್ಥಿಯು ತಮ್ಮ ಸ್ವಂತ ತೋಟವನ್ನು ಅಭಿವೃದ್ದಿಗೊಳಿಸಬೇಕು ಎಂಬ ಅಭಿಲಾಷೆಯುಳ್ಳವವರಿ ಆಧ್ಯತೆ ನೀಡಲಾಗುವುದು.
  • ಈ ತರಬೇತಿಯ ಅವಧಿ 10 ತಿಂಗಳು ತರಬೇತಿ ದಿನಾಂಕ: 02 -05- 2024 ರಿಂದ ಆರ‍ಂಭವಾಗಿ 28 -05- 2025 ರವರೆಗೆ ನಡೆಯುತ್ತದೆ.
  • ತರಬೇತಿಯ ಅಂತ್ಯದಲ್ಲಿ ಪ್ರಾಯೋಗಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೇಯನ್ನು ನಡೆಸಲಾಗುವುದು. ಅಂತಿಮ ಪರೀಕ್ಷೆಗೆ ಕುಳಿತುಕೊಳ್ಳಲು ಶೇ 75 ರಷ್ಟು ಹಾಜರಾತಿ ಕಡ್ಡಾಯವಾಗಿರಬೇಕು( ವೈದ್ಯಕೀಯ ಆಧಾರದ ಮೇಲೆ ಗರಿಷ್ಟ 30 ದಿನಗಳ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.)

ಇನ್ನು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು:

ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್ಸಟ್ : Click here

ಕಚೇರಿಯ ದೂರವಾಣಿ ಸಂಖ್ಯೆ: 0836-2957801

ಇತರೆ ವಿಷಯಗಳು

ಟಾಟಾ ಗ್ರೂಪ್‌ನಿಂದ ರೂ.10 ಲಕ್ಷ ಸ್ಕಾಲರ್‌ಶಿಪ್‌: ಅರ್ಜಿ ಹಾಕಲು ಕೆಲವೇ ದಿನಗಳು ಮಾತ್ರ ಬಾಕಿ

SSC 2049 ಸೆಲೆಕ್ಷನ್‌ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ.! 40,000 ವೇತನ ಈ ಕೂಡಲೇ ಅಪ್ಲೇ ಮಾಡಿ


Share

Leave a Reply

Your email address will not be published. Required fields are marked *