ಹಲೋ ಸ್ನೇಹಿತರೇ, 2020ನೇ ಸಾಲಿನ 3745 KSRTC ಚಾಲಕ, ಚಾಲಕ ನಿರ್ವಾಹಕ ಹುದ್ದೆಗಳ ಭರ್ತಿಗೆ ಸಂಬಂಧಿಸಿ ಇದೀಗ ಈ ಹುದ್ದೆಗಳ ಭರ್ತಿಗೆ ಮತ್ತೆ ಚಾಲನೆ ನೀಡಲಾಗಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 2020ನೇ ಸಾಲಿನ ಚಾಲಕ ಕಂ ನಿರ್ವಾಹಕ ಹುದ್ದೆಗಳ ಭರ್ತಿಗೆ ಸಂಬಂಧಿಸಿ, ಭರ್ಜರಿ ಸುದ್ದಿ ನೀಡಲಾಗಿದೆ. ಸರ್ಕಾರದ ಆದೇಶದಂತೆ ಮೇರೆಗೆ 2000 ಹುದ್ದೆಗಳಿಗೆ ಸೀಮಿತಗೊಳಿಸಿ ಭರ್ತಿ ಮಾಡಲು ಕ್ರಮವನ್ನು ಕೈಗೊಳ್ಳಲಾಗುವುದು. ಅದರಂತೆ ಅಧಿಸೂಚನೆ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಮೀಸಲಾತಿ ರೂಲ್ಸ್ ಅನ್ವಯ ವರ್ಗವಾರು ಹುದ್ದೆಗಳ ಸಂಖ್ಯೆಯನ್ನು ಪರಿಷ್ಕರಣೆ ಮಾಡಿ ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಗೊಳಿಸಲಾಗಿದೆ.
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಮಾತ್ರ ದಿನಾಂಕ 06-03-2024 ರಿಂದ ದಾಖಲಾತಿ / ದೇಹದಾರ್ಢ್ಯತೆ ಪರಿಶೀಲನೆಯನ್ನು ಮಾಡಲು ನಿರ್ಧಾರವನ್ನು ಕೈಗೊಳ್ಳಲಾಗಿದೆ.
ನೋಂದಾಯಿಸಿದ ಅಭ್ಯರ್ಥಿಗಳಿಗೆ ಈ ಸಂಬಂಧ ಸದರಿ ಪರೀಕ್ಷೆಗಳಿಗೆ ಹಾಜರಾಗುವ ಬಗ್ಗೆ ದಿನಾಂಕ 03-03-2024 ರಿಂದ ನಿಗಮದ ಅಧಿಕೃತ ವೆಬ್‌ಸೈಟ್ ksrtc.karnataka.gov.in ರಲ್ಲಿ ಕರೆಪತ್ರವನ್ನು download ಮಾಡಿಕೊಂಡು ಎಲ್ಲಾ ಮೂಲ ದಾಖಲಾತಿಯೊಂದಿಗೆ ನಿಗದಿತ ದಿನಾಂಕ ಮತ್ತು ಸಮಯಕ್ಕೆ ಹಾಜರಾಗಲು ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ..
Contents
KSRTC 2020 ರ ಫೆಬ್ರುವರಿ ತಿಂಗಳಲ್ಲಿ ಈ ಕೆಳಗಿನ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿತ್ತು.
ಚಾಲಕ – 1,200
ಚಾಲಕ-ಕಂ-ನಿರ್ವಾಹಕ – 2,545
ಒಟ್ಟು ಹುದ್ದೆಗಳ ಸಂಖ್ಯೆ- 3,745
ಪ್ರಸ್ತುತ ಒಟ್ಟು ಹುದ್ದೆಗಳ ಪೈಕಿ 2000 ಹುದ್ದೆಗಳಿಗೆ ಮಾತ್ರ ಸೀಮಿತಗೊಳಿಸಿ, ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಮುಂದುವರೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
2020ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವವರಿಗೆ ವಿಶೇಷ ಸೂಚನೆಗಳು
ಪ್ರಸ್ತುತ ಅಭ್ಯರ್ಥಿಗಳ ಮೂಲ ದಾಖಲಾತಿ / ದೇಹದಾರ್ಢ್ಯತೆ ಪರಿಶೀಲನೆಯನ್ನು ಮಾತ್ರವೇ ನಡೆಸಲಾಗುತ್ತಿದೆ. ಅರ್ಹರಾದ ಅಭ್ಯರ್ಥಿಗಳಿಗೆ ಚಾಲನಾ ವೃತ್ತಿ ಪರೀಕ್ಷೆಯನ್ನು ನಡೆಸುವ ಬಗ್ಗೆ ಪ್ರತ್ಯೇಕ ದಿನಾಂಕ / ಸ್ಥಳ ನಿಗಧಿಪಡಿಸಲಾಗುತ್ತದೆ.
ಸದರಿ ಹುದ್ದೆಯ ಆಯ್ಕೆಯು ಗಣಕೀಕೃತ ಚಾಲನಾ ವೃತ್ತಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಮತ್ತು ಅಧಿಸೂಚನೆ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಮೀಸಲಾತಿ ರೂಲ್ಸ್‌ಗಳಿಗೆ ಅನುಗುಣವಾಗಿ ಪಾರದರ್ಶಕವಾಗಿ ನಡೆಯುವುದರಿಂದ ಯಾರ ಹಸ್ತಕ್ಷೇಪವು ಇರುವುದಿಲ್ಲ.
ಆದ್ದರಿಂದ ಅಭ್ಯರ್ಥಿಗಳು ಯಾವುದೇ ಶಿಫಾರಸ್ಸು ಮತ್ತು ಮಧ್ಯವರ್ತಿಗಳ ಆಮಿಷಗಳಿಗೆ ಒಳಗಾಗಬಾರದೆಂದು ಸ್ಪಷ್ಟಪಡಿಸಲಾಗಿದೆ.
ಚಾಲಕ ಕಂ ಕಂಡಕ್ಟರ್ ಹುದ್ದೆಗೆ ಅರ್ಹತೆಗಳು
– ಈ ಹುದ್ದೆಗೂ ಸಹ SSLC/ ತತ್ಸಮಾನ ವಿದ್ಯಾರ್ಹತೆ.
– ಚಾಲ್ತಿಯಲ್ಲಿರುವ ಭಾರಿ ಸರಕು ಸಾಗಾಣಿಕೆ ವಾಹನ (HTV) ಚಾಲನಾ ಪರವಾನಿಗೆ ಹೊಂದಿ ಕನಿಷ್ಠ 2 ವರ್ಷ ಮುಗಿಸಿರಬೇಕು.
– ಚಾಲ್ತಿಯಲ್ಲಿರುವ ನಿರ್ವಾಹಕ ಪರವಾನಗಿ & ಕರ್ನಾಟಕ ಬ್ಯಾಡ್ಜ್ ಹೊಂದಿರಬೇಕಾಗುತ್ತದೆ.
ಇತರೆ ಅರ್ಹತೆಗಳು ಕನಿಷ್ಠ ದೇಹದಾರ್ಢ್ಯತೆ
ಪುರುಷರಿಗೆ : ಎತ್ತರ -163 cm. ತೂಕ : 55 KG
ಮಹಿಳೆಯರಿಗೆ – ಎತ್ತರ : 153 cm /ತೂಕ : 50 kg
ಆಯ್ಕೆ ವಿಧಾನ
– ಮೂಲ ದಾಖಲಾತಿಗಳ ಪರಿಶೀಲನೆ, ದೈಹಿಕ ಅರ್ಹತೆಯ ಪರಿಶೀಲನೆ, ಚಾಲನಾ ವೃತ್ತಿ ಪರೀಕ್ಷೆಗೆ ಹಾಜರಾಗಲು admit ಕಾರ್ಡ್ ಬಿಡುಗಡೆ ಮಾಡಲಾಗುವುದ. ಇದರಲ್ಲಿ ದಿನಾಂಕ, ಸ್ಥಳ, ದಾಖಲೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
– ಮೂಲ ದಾಖಲೆಗಳು & ದೈಹಿಕ ಅರ್ಹತೆಗಳ ಪರಿಶೀಲನೆಯಲ್ಲಿ ಅರ್ಹತೆ ಪಡೆದವರಿಗೆ ಒಟ್ಟು 50 ಅಂಕ, ತಲಾ 25 ಅಂಕಗಳಂತೆ 2 ಬಾರಿ ಚಾಲನಾ ಸಾಮರ್ಥ್ಯ ವೃತ್ತಿ ಪರೀಕ್ಷೆಯನ್ನು ಗಣಕೀಕೃತ ಟ್ರ್ಯಾಕ್‌ನಲ್ಲಿ ನಡೆಸಲಾಗುತ್ತದೆ. ಇದರಲ್ಲಿ ಕನಿಷ್ಠ 25 ಅಂಕ ಪಡೆದ ಅಭ್ಯರ್ಥಿಗಳನ್ನು ಮಾತ್ರ ಉತ್ತೀರ್ಣರೆಂದು ತೀರ್ಮಾನ ಮಾಡಿ ಆಯ್ಕೆಗೆ ಪರಿಗಣಿಸಲಾಗುತ್ತದೆ.
– ಉತ್ತಮ ಚಾಲನಾ ಕೌಶಲ್ಯವಿರುವ ಅಭ್ಯರ್ಥಿಗಳ ಆಯ್ಕೆ ದೃಷ್ಟಿಯಿಂದ ಚಾಲನಾ ವೃತ್ತಿ ಪರೀಕ್ಷೆಯ 5 ವಿವಿಧ ಪರೀಕ್ಷೆಗಳ ಪೈಕಿಯಲ್ಲಿ ಮೇಲಿನ ಪಟ್ಟಿಯಲ್ಲಿ ನೀಡಲಾದ ಕನಿಷ್ಠ ಅಂಕಗಳನ್ನು ಗಳಿಸಿದಲ್ಲಿ ಮಾತ್ರವೇ ಮುಂದಿನ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗುವುದು.
ವೇತನ ಶ್ರೇಣಿ & ತರಬೇತಿ
– ಅಂತಿಮವಾಗಿ ನೇಮಕಾತಿಗೆ ಆಯ್ಕೆಗೊಂಡ ಅಭ್ಯರ್ಥಿಗಳು 2 ವರ್ಷಗಳ ಕಾಲ ಕೆಲಸದ ಮೇಲೆ ತರಬೇತಿಗೆ ಹಾಜರಾಗಬೇಕಾಗುತ್ತದೆ. ಈ ಅವಧಿಯಲ್ಲಿ ಮಾಸಿಕವಾಗಿ ಚಾಲಕ ಹುದ್ದೆಗೆ ರೂ.10000, ನಿರ್ವಾಹಕ (ಕಂಡಕ್ಟರ್) ಹುದ್ದೆಗೆ ರೂ.9100 ತರಬೇತಿ ನೀಡಲಾಗುವುದು.
– 2 ವರ್ಷಗಳ ನಂತರ ಅಭ್ಯರ್ಥಿಯನ್ನು ನಿರ್ದಿಷ್ಟ ಘಟಕಗಳಿಗೆ ನೇಮಕ ಮಾಡಿ ವೇತನ ರೂ.12400-170-12740-14240-320-15840-420-16680-530-18270-640-19550 ವರೆಗು ನೀಡಲಾಗುವುದು.
ಇತರೆ ವಿಷಯಗಳು
ಕೋಟ್ಯಂತರ ರೈತರ ಖಾತೆಗೆ PM Kisan ಯೋಜನೆ ಹಣ.! 2,000 ಪಡೆಯಲು ಅರ್ಹ ರೈತರ ಹಳ್ಳಿವಾರು ಪಟ್ಟಿ ಬಿಡುಗಡೆ
ಮನೆಯ ಪ್ರತಿ ಸದಸ್ಯರಿಗೆ 5 ಲಕ್ಷ ಉಚಿತ ನಗದು.! ಈ ಕಾರ್ಡ್ ಮಾಡಿಸಿಕೊಳ್ಳಲು ಇಂದೇ ಕೊನೆ ಅವಕಾಶ