rtgh

ಟಾಟಾ ಗ್ರೂಪ್‌ನಿಂದ ರೂ.10 ಲಕ್ಷ ಸ್ಕಾಲರ್‌ಶಿಪ್‌: ಅರ್ಜಿ ಹಾಕಲು ಕೆಲವೇ ದಿನಗಳು ಮಾತ್ರ ಬಾಕಿ

jn Tata Endowment Loan Scholarship
Share

ಹಲೋ ಸ್ನೇಹಿತರೇ, ಸ್ನಾತಕೋತ್ತರ ಪದವಿ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣ ಮುಂದುವರೆಸಲು ಬಯಸಿದರೆ, ಅಂತಹವರಿಗೆ ಟಾಟಾ ಗ್ರೂಪ್ ರೂ 10 ಲಕ್ಷದ ವರೆಗು ಲೋನ್‌ ಸ್ಕಾಲರ್‌ಶಿಪ್‌ ನೀಡುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

jn Tata Endowment Loan Scholarship

ಭಾರತ & ಅಬ್ರಾಡ್‌ನಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿರುವವರು, ಉನ್ನತ ಶಿಕ್ಷಣ ಮಾಡಲು ಬಯಸಿದರೆ, ಅಂತಹವರಿಗಾಗಿ ಟಾಟಾ ಗ್ರೂಪ್ 10 ಲಕ್ಷ ರೂ.ವರೆಗೆ ಲೋನ್‌ ಸ್ಕಾಲರ್‌ಶಿಪ್‌ ಸೌಲಭ್ಯ ನೀಡಲಿದೆ.

ಜೆಎನ್‌ ಟಾಟಾ ಎಂಡೋಮೆಂಟ್ ಮೆರಿಟ್‌ ಆಧಾರಿತ ಲೋನ್‌ ವಿದ್ಯಾರ್ಥಿವೇತನ ಸೌಲಭ್ಯ ನೀಡುತ್ತಿದೆ. ಭಾರತೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಈ ಸೌಲಭ್ಯ ನೀಡುತ್ತಿದ್ದು, ವಿಜ್ಞಾನ ವಿಭಾಗದ ವಿವಿಧ ವಿಷಯ, ಕಾನೂನು, ಕಾಮರ್ಸ್‌, ಮ್ಯಾನೇಜ್ಮೆಂಟ್, ಫೈನ್ ಆರ್ಟ್ಸ್‌ ನಲ್ಲಿ ಪದವಿ, ಪಿಜಿ ಓದಿದವರು ಈ ಸ್ಕಾಲರ್‌ಶಿಪ್‌ಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಹ & ಆಸಕ್ತ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಯನ್ನು ಆಹ್ವಾನಿಸಿದ್ದು.

ವಿದ್ಯಾರ್ಥಿವೇತನದ ಹೆಸರು : JN Tata Endowment Loan Scholarship 2024
ವಿದ್ಯಾರ್ಥಿವೇತನ ನೀಡುವ ಸಂಸ್ಥೆ : JN ಗ್ರೂಪ್‌
ಸ್ಕಾಲರ್‌ಶಿಪ್ ಮೌಲ್ಯ : ₹10,00,000 ವರೆಗೆ.
ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ : 15-03-2024

ಅರ್ಹತೆಗಳು

  • ಅರ್ಜಿ ಸಲ್ಲಿಸುವವರಿಗೆ ಜೂನ್ 30, 2024 ಕ್ಕೆ ಗರಿಷ್ಠ 45 ವರ್ಷ ಮೀರಬಾರದು.
  • ಯುಜಿ, ಪಿಜಿ ಶಿಕ್ಷಣವನ್ನು ಕನಿಷ್ಠ ಶೇಕಡ.60 ಅಂಕ ಗಳಿಸಿ ಪಾಸಾಗಿರಬೇಕು.
  • ಜುಲೈನಿಂದ ಲೋನ್‌ ಸ್ಕಾಲರ್‌ಶಿಪ್‌ ಸೌಲಭ್ಯ ಮಂಜೂರು ಮಾಡಲಾಗುತ್ತದೆ.
  • 2024-25ನೇ ಸಾಲಿನಲ್ಲಿ ಇನ್ನು ಯಾವುದೇ UG/PG ಕೋರ್ಸ್‌ಗೆ ಪ್ರವೇಶ ಪಡೆಯದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
  • ಈಗಾಗಲೇ ವಿದೇಶಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ 2ನೇ ವರ್ಷ, 3ನೇ ವರ್ಷದಲ್ಲಿ ಓದುತ್ತಿರುವವರು ಅರ್ಜಿಯನ್ನು ಸಲ್ಲಿಸಬಹುದು.
  • ಅಬ್ರಾಡ್‌ನಲ್ಲಿ ಉನ್ನತ ಶಿಕ್ಷಣ, ಸಂಶೋಧನೆಗೆ ತೆರಳುವವರು ಅರ್ಜಿ ಸಲ್ಲಿಸಬಹುದು.

ವಿಶೇಷ ಸೂಚನೆಗಳು : ಭಾರತದಲ್ಲಿ ಸ್ನಾತಕ & ಸ್ನಾತಕೋತ್ತರ ಪದವಿ ಓದಲು ನಿರ್ಧರಿಸಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಆದರೆ ಉನ್ನತ ಶಿಕ್ಷಣಕ್ಕೆ ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.

ವಿದ್ಯಾರ್ಥಿವೇತನ ಪ್ರೋಗ್ರಾಮ್ 4 ಹಂತಗಳನ್ನು ಹೊಂದಿದೆ. ಪ್ರತಿ ಹಂತದ ಕೊನೆಯಲ್ಲಿ ಅಪ್ಲಿಕೇಶನ್‌ ಸ್ಥಿತಿ ಬಗ್ಗೆ ಅಭ್ಯರ್ಥಿಗಳಿಗೆ ಸೂಚನೆ .

ಹಂತ-1 : ಮಾರ್ಚ್ 15, 2024 ಅರ್ಜಿಗೆ ಕೊನೆಯ ದಿನ.
ಹಂತ-2 : online ಪರೀಕ್ಷೆ.
ಹಂತ-3 : ವಿಷಯ ತಜ್ಞ ಜೊತೆ ಸಂದರ್ಶನ.
ಹಂತ-4 : ಅಂತಿಮ ಆಯ್ಕೆ ಪ್ರಕ್ರಿಯೆಗಳು.

ಅರ್ಜಿ ಸಲ್ಲಿಸುವ ವಿಧಾನ

ಮೇಲಿನ ಲಿಂಕ್ ಕ್ಲಿಕ್ ಮಾಡಿ. ಪಾಪಪ್ ವೆಬ್‌ಪೇಜ್ ಒಂದು ತೆರೆಯುತ್ತದೆ. ಈ ಹಂತದಲ್ಲಿ ಇಮೇಲ್ / ಜಿ-ಮೇಲ್ / ಮೊಬೈಲ್‌ ನಂಬರ್ ಮೂಲಕ ರಿಜಿಸ್ಟ್ರೇಷನ್‌ ಪಡೆಯಿರಿ. ನಂತರ ಮತ್ತೆ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು.

ದಾಖಲೆಗಳು

  • ಆಧಾರ್ ಕಾರ್ಡ್‌ (aadhar card)
  • ಪಾಸ್‌ಪೋರ್ಟ್‌ನ ಮೊದಲ & ಕೊನೆ ಪೇಜ್‌ ಫೋಟೋಕಾಪಿ.
  • ಅಂಕಪಟ್ಟಿ (ಪ್ರತಿ ಸೆಮಿಸ್ಟರ್ / ವರ್ಷದ) (marks card)
  • ಲೋನ್ ಸ್ಕಾಲರ್‌ಶಿಪ್‌ ತೆಗೆದುಕೊಳ್ಳುವ ಉದ್ದೇಶದ ವಿವರದ ಪ್ರಮಾಣ ಪತ್ರ.

ವಿಷಯ ತಜ್ಞರ ಸಂದರ್ಶನ ಹಂತದಲ್ಲಿ ಪ್ರವೇಶಾತಿ ದಾಖಲೆಗಳನ್ನು ಹಾಜರುಪಡಿಸಬೇಕು. ಅಂತಿಮ ಆಯ್ಕೆ ಸಂದರ್ಭದಲ್ಲಿ Pan card, ರದ್ದಾದ ಚೆಕ್‌ ಪ್ರತಿ, ಖಾತರಿದಾರರ aadhar card, ಖಾತರಿದಾರರ ಭಾವಚಿತ್ರ, ಖಾತರಿದಾರರ ಆದಾಯ ಪ್ರಮಾಣ ಪತ್ರ, ಹಾಗೂ ಇತ್ತೀಚೆಗೆ ಐಟಿಆರ್‌ ಫಿಲ್ ಮಾಡಿದ ದಾಖಲೆ ಪ್ರತಿ.

ಇತರೆ ವಿಷಯಗಳು

ಈ ರೇಷನ್‌ ಕಾರ್ಡ್‌ ಹೊಂದಿದ ಫಲಾನುಭವಿಗಳಿಗೆ ₹5,000!! ಸರ್ಕಾರದಿಂದ ಹೊಸ ಯೋಜನೆಗೆ ಭರ್ಜರಿ ಚಾಲನೆ

ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೆ ಸಿಹಿ ಸುದ್ದಿ!! ಅಕ್ಕಿಯ ಜೊತೆಗೆ ಈ ಆಹಾರ ಧಾನ್ಯ ಉಚಿತ


Share

Leave a Reply

Your email address will not be published. Required fields are marked *