ಹಲೋ ಸ್ನೇಹಿತರೇ, ಈ ಕಂಪನಿಯ ಇಂಟರ್ನ್‌ಶಿಪ್ ನಲ್ಲಿ ದಿನಕ್ಕೆ 9 ಗಂಟೆ ನಿದ್ದೆ ಮಾಡ್ಬೇಕು ಅಷ್ಟೇ, ದಿನಕ್ಕೆ 9 ಗಂಟೆ ನಿದ್ದೆ ಮಾಡಿ ಗೆದ್ದರೆ 10 ಲಕ್ಷ ಗೆಲ್ಲಬಹುದಾಗಿದೆ. ಏನಪ್ಪ ಇಷ್ಟು ಸಿಂಪಲ್ ನಿದ್ದೆ ಮಾಡಿ ಹಣ ಪಡೆಯುವುದು ಅನ್ಕೋತಿದ್ದೀರಾ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿಯಿರಿ..
ಬೆಂಗಳೂರು : ಈ ವೇಗದ ಬದುಕಿನಲ್ಲಿ ನಿದ್ದೆ ಬಹಳ ಮುಖ್ಯ. ಹೆಚ್ಚಿನವರಿಗೆ ಬ್ಯುಸಿ ಜೀವನ ಶೈಲಿಯಿಂದ ನಿದ್ದೆ ಮಾಡುವುದಕ್ಕೆ ಸರಿಯಾಗಿ ಸಮಯ ಸಿಗುವುದಿಲ್ಲ. ನಿದ್ರೆಯ ಕೊರತೆಯಿಂದ ಅನೇಕ ರೋಗಗಳು ಬರುತ್ತವೆ. ಹಣ ಸಂಪಾದಿಸುವ / ಓದುವ ಭರಾಟೆಯಲ್ಲಿ 9 ಗಂಟೆ ಕೇವಲ ಕನಸಾಗಿ ಬಿಟ್ಟಿದೆ. ಆದರೆ ಈ ಕಂಪನಿಯಲ್ಲಿ ಮಲಗುವುದಕ್ಕೂ ಹಣ ಸಿಗುತ್ತದೆ. ಮಲಗುವುದೆಂದರೆ ಸುಮ್ಮನೆ ಬಿದ್ದು ಕೊಳ್ಳುವುದಲ್ಲ, ದಿನಕ್ಕೆ 9 ಗಂಟೆ ನಿದ್ದೆ ಮಾಡ್ಬೇಕು.
2023 ರಲ್ಲಿ, ಬೆಂಗಳೂರು ಮೂಲದ ಲೆಕ್ಕಪರಿಶೋಧಕಿ ಸಾಯಿಶ್ವರಿ ಪಾಟೀಲ್ ಈ ಕಂಪನಿಯ ‘ವರ್ಷದ ಸ್ಲೀಪ್ ಚಾಂಪಿಯನ್’ ಪ್ರಶಸ್ತಿಯನ್ನು ಗೆಲ್ಲುವುದರ ಮೂಲಕ 9 ಲಕ್ಷ ರೂ. ಬಹುಮಾನವನ್ನು ಗೆದ್ದುಕೊಂಡಿದ್ದರು.
Contents
ನಿದ್ರೆ ಇಂಟರ್ನ್ಶಿಪ್ :
ವೇಕ್‌ಫಿಟ್ ಕೆಲವು ಸಮಯದಿಂದ “ಸ್ಲೀಪ್ ಇಂಟರ್ನ್‌ಶಿಪ್” ಅನ್ನು ಆಯೋಜಿಸುತ್ತಿದೆ. ಈ ಸ್ಲೀಪ್ ಇಂಟರ್ನ್‌ಶಿಪ್ ದೇಶದಾದ್ಯಂತ ಗಮನ ಸೆಳೆಯುತ್ತಿದೆ. ಇದು 60 ದಿನಗಳ ಸ್ಲೀಪ್ ಇಂಟರ್ನ್‌ಶಿಪ್. ಇಲ್ಲಿ ಬೇರೇನೂ ಕೆಲಸ ಇರುವುದಿಲ್ಲ. 9 ಗಂಟೆಗಳ ಕಾಲ ನಿದ್ರೆ ಮಾಡಬೇಕು ಅಷ್ಟೇ. ಪವರ್ ನ್ಯಾಪ್‌ಗಳನ್ನು ತೆಗೆದುಕೊಳ್ಳುವ ಮೂಲಕ ಹೊಸ ವೇಕ್‌ಫಿಟ್ ಹಾಸಿಗೆಯನ್ನು ಪರೀಕ್ಷಿಸಬೇಕಾಗುತ್ತದೆ.
ಚಾಂಪಿಯನ್ ಆದ ಸಾಯಿಶ್ವರಿ :
ಕಳೆದ ಬಾರಿ ವೇಕ್‌ಫಿಟ್ ಸ್ಲೀಪ್ ಇಂಟರ್ನ್‌ಶಿಪ್‌ನಲ್ಲಿ 5 ಲಕ್ಷ ಮಂದಿ ಭಾಗವಹಿಸಿದ್ದರು. ನಂತರ, ಶಾರ್ಟ್‌ಲಿಸ್ಟ್ ಮಾಡಿ ಕೊನೆಗೆ 11 ಮಡಿ ಈ ಸ್ಲೀಪ್ ಇಂಟರ್ನ್‌ಶಿಪ್ ನಲ್ಲಿ ಉಳಿದುಕೊಂಡಿದ್ದರು. ಇವರೆಲ್ಲರಿಗೂ 1 ಲಕ್ಷ ಸ್ಟೈಫಂಡ್ಗಳನ್ನು ನೀಡಲಾಯಿತು. 2-ತಿಂಗಳ ಸುದೀರ್ಘ ಕಾರ್ಯಕ್ರಮದಲ್ಲಿ, ಈ ಸ್ಲೀಪ್ ಇಂಟರ್ನ್‌ಗಳು ಒಟ್ಟು 7,000 ಗಂಟೆಗಳ ಕಾಲ ನಿದ್ರಿಸಿದ್ದರು. ಸ್ಪರ್ಧೆಯು ಲೈವ್ “ಸ್ಲೀಪ್-ಆಫ್” ನೊಂದಿಗೆ ಮೆರಗು ಪಡೆದಿತ್ತು. ಅಲ್ಲಿ ಟಾಪ್ ಫೋರ್ ಸ್ಪರ್ಧಿಗಳು ಕಸ್ಟಮ್ ಸ್ಲೀಪ್ ಪಾಡ್‌ಗಳಲ್ಲಿ ಮಲಗಬೇಕು. ಇವರು ಅಂತಿಮ ಬಹುಮಾನಕ್ಕಾಗಿ ಸ್ಪರ್ಧೆಗೆ ಇಳಿದಿದ್ದರು. ಇದರಲ್ಲಿ ಸಾಯಿಶ್ವರಿ 99% ನ ಗಮನಾರ್ಹ ನಿದ್ರೆಯ ದಕ್ಷತೆಯ ಸ್ಕೋರ್‌ನೊಂದಿಗೆ ವಿಜಯಶಾಲಿಯಾದರು.
10 ಲಕ್ಷ ರೂ ಗೆಲ್ಲಬಹುದು :
ಒಳ್ಳೆಯ ಸುದ್ದಿ ಏನೆಂದರೆ, ನೀವು ಕೂಡಾ ಈ ವರ್ಷದ ಮುಂದಿನ ಸ್ಲೀಪ್ ಚಾಂಪಿಯನ್ ಕಿರೀಟವನ್ನು ಅಲಂಕರಿಸುವ ಅವಕಾಶವಿದೆ. ಹಿಂದಿನ ಸೀಸನ್‌ಗಳ ಯಶಸ್ಸಿನ ಆಧಾರದ ಮೇಲೆ, ವೇಕ್‌ಫಿಟ್ ತನ್ನ ಸ್ಲೀಪ್ ಇಂಟರ್ನ್‌ಶಿಪ್‌ನ 4ನೇ ಆವೃತ್ತಿಗೆ ಈಗಾಗಲೇ ನೋಂದಣಿ ಆರಂಭಿಸಿದೆ. ಈ ಬಾರಿಯಾ ಮೊತ್ತ ಇನ್ನಷ್ಟು ಹೆಚ್ಚಿದ್ದು, ವಿಜೇತರು 10 ಲಕ್ಷದವರೆಗೆ ಹಣ ಗಳಿಸುವ ಅವಕಾಶ ಕಲ್ಪಿಸಲಾಗಿದೆ.
ಇತರೆ ವಿಷಯಗಳು
ರಾಜ್ಯ ಸರ್ಕಾರದಿಂದ ಟೂರ್ ಪ್ಯಾಕೇಜ್.! ಎಲ್ಲಾ ಕಡೆ ಫ್ರೀ ಸುತ್ತಾಟ ಯಾರ್ಬೇಕಾದ್ರು ಅಪ್ಲೇ ಮಾಡಿ
ಡಿಗ್ರಿ ಓದೋರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಿ 50,000 ಹಣ ಸಿಗುತ್ತೆ