rtgh
Headlines

ಗಗನಕ್ಕೇರಿದ್ದ ಅಕ್ಕಿ ದರ ಇಳಿಕೆ!! ಜನಸಾಮಾನ್ಯರಿಗೆ ಕೊಂಚ ರಿಲೀಫ್

Hike Rice Rate
Share

ಬೆಂಗಳೂರು: ಗಗನಕ್ಕೇರಿದ್ದ ಅಕ್ಕಿದರವು ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಸ್ಟೀಮ್ ರೈಸ್ ಅಕ್ಕಿಯ ದರವು ಇಳಿಕೆಯಾಗಿದೆ. ಬೇಡಿಕೆಯ ರಾ ರೈಸ್ ಬೆಲೆಯು ಯಥಾ ಸ್ಥಿತಿಯಲ್ಲಿಯೇ ಮುಂದುವರೆಯುತ್ತಿದೆ.

Hike Rice Rate

ಬೇಸಿಗೆ ಬೆಳೆ ಬಂದಿರುವುದರಿಂದ ಅಕ್ಕಿದರವು ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಸ್ಟೀಮ್ ರೈಸ್ ನ ದರವು ತಗ್ಗಿದರೂ ಅದನ್ನು ಎಲ್ಲರೂ ಬಳಸುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಹೋಟೆಲ್ ನಲ್ಲಿ ಸ್ಟೀಮ್ ರೈಸ್ ಅನ್ನು ಬಳಸುತ್ತಾರೆ. ಇದರ ದರವು ಇಳಿಕೆಯ ತಾತ್ಕಾಲಿಕವೆಂದು ಹೇಳಲಾಗಿದೆ.

ಇದನ್ನೂ ಸಹ ಓದಿ: ಆವಾಸ್ ಯೋಜನೆಯ 80 ಲಕ್ಷ ಮನೆಗಳ ಜಿಲ್ಲಾವಾರು ಪಟ್ಟಿ ಬಿಡುಗಡೆ!

ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಿಂದ ಹೊಸ ಭತ್ತವು ಬಂದಿದೆ. ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತವು ಉತ್ಪಾದನೆಯಾಗಿದ್ದು, ಭಾರತ್ ರೈಸ್ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಅಲ್ಲದೆ, ಅಕ್ಕಿಯ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರವು ಕಣ್ಣಿಟ್ಟಿದೆ. ಇವೆಲ್ಲ ಕಾರಣಗಳಿಂದ ಅಕ್ಕಿ ಬೆಲೆಯು ಕೊಂಚ ಕಡಿಮೆಯಾಗಿದೆ.

ಸ್ಟೀಮ್ ರೈಸ್ ದರವು ಕೆಜಿಗೆ 8 ರೂಪಾಯಿಗಳ ವರೆಗೆ ಕಡಿಮೆಯಾಗಿದೆ. ಕಳೆದ ಫೆಬ್ರವರಿಯಲ್ಲಿ ಆರ್.ಎನ್.ಆರ್. ಸ್ಟೀಮ್ ರೈಸ್ ದರವು ಕೆಜಿಗೆ 57-58 ರೂ. ಇತ್ತು. ಆದರೆ ಈಗ 48 -49 ರೂಪಾಯಿ ಇದೆ. ಸೋನಾ ಸ್ಟೀಮ್ ರೈಸ್ ಬೆಲೆ ಕೆಜಿಗೆ 56 ರೂ. ನಿಂದ 47 ರೂ.ಗೆ ಇಳಿಕೆಯಾಗಿದೆ. ರಾ ರೈಸ್ ದರ 55 -57 ರೂ. ಇದೆ.

ಕಾಶಿ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ಸಹಾಯಧನ!! ಈ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

ಕರ್ನಾಟಕ 2nd ಪಿಯುಸಿ ಪರೀಕ್ಷೆ ಫಲಿತಾಂಶ ದಿನಾಂಕ ಪ್ರಕಟ.! ಈ ರೀತಿ ರಿಸಲ್ಟ್‌ ಚೆಕ್‌ ಮಾಡಿ


Share

Leave a Reply

Your email address will not be published. Required fields are marked *