rtgh
Headlines

ಟಕಾ ಟಕ್ ಹಣಕ್ಕಾಗಿ ಮುಗಿಬಿದ್ದ ಮಹಿಳೆಯರು! ಪೋಸ್ಟ್ ಆಫೀಸ್​ ಮುಂದೆ ಗೃಹಲಕ್ಷ್ಮಿರ ಕ್ಯೂ

Guarantee Scheme
Share

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೆ ಪ್ರತಿ ತಿಂಗಳು 8500 ರೂಪಾಯಿಗಳನ್ನು ನೀಡಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಘೋಷಣೆಯನ್ನು ಮಾಡಿದ ನಂತರ, ಮಹಿಳೆಯರು ʼಟಕಾ ಟಕ್ʼ ಖಾತೆಯನ್ನು ತೆರೆಯಲು ಅಂಚೆ ಕಚೇರಿಗೆ ದೌಡಾಯಿಸುತ್ತಿದ್ದಾರೆ. ಇದರಿಂದಾಗಿ ಮಹಿಳೆಯರನ್ನು ನಿಭಾಯಿಸಲು ಅಂಚೆ ಕಚೇರಿ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.

Guarantee Scheme

ಚುನಾವಣೆಯ ನಂತರ ಮಹಿಳೆಯರ ಖಾತೆಗೆ 8500 ರೂ.ಗಳು ಬರುತ್ತದೆ, ಇದಕ್ಕಾಗಿ ಅಂಚೆ ಕಚೇರಿಯಲ್ಲಿ ಖಾತೆಯನ್ನು ಹೊಂದಿರಬೇಕು ಎನ್ನುವ ಸುಳ್ಳು ಸುದ್ದಿಯೊಂದು ಎಲ್ಲೆಡೆಗೆ ಹರಡಿದ್ದು, ಇದರಿಂದಾಗಿ ಮಹಿಳೆಯರು ಖಾತೆಯನ್ನು ಮಾಡಿಸಲು ಮುಗಿಬಿದ್ದಿದ್ದಾರೆ. ಇದರ ಕುರಿತಾಗಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಜನರ ಬಡತನವನ್ನು ಬಂಡವಾಳವಾಗಿ ಮಾಡಿಕೊಂಡು ಬೊಗಳೆ ಬಿಡುವುದು, ಅಮಾಯಕರನ್ನು ದಿಕ್ಕು ತಪ್ಪಿಸುವುದು, ಸ್ವಾತಂತ್ರ್ಯಾ ನಂತರದಿಂದಲೂ ಕಾಂಗ್ರೆಸ್ ಸರ್ಕಾರ ಅನುಸರಿಸಿಕೊಂಡು ಬಂದಿರುವ ಚಾಳಿ.

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಬಿಟ್ಟಿ ಭಾಗ್ಯಗಳನ್ನೇ ಮುಂದಿಟ್ಟುಕೊಂಡು ಇಡೀ ದೇಶದ ಮತದಾರರಿಗೆ, ಅದರಲ್ಲೂ ಮಹಿಳೆಯರಿಗೆ ಟೋಪಿಯನ್ನು ಹಾಕಲು ಹೋಗಿ ರಾಹುಲ್ ಗಾಂಧಿ ಬಾಯಿಂದ ಹೊರಟ ‘ವಾರ್ಷಿಕ 1 ಲಕ್ಷ ಹಾಗೂ ತಿಂಗಳಿಗೆ 8 ಸಾವಿರ ರೂಪಾಯಿಗಳನ್ನು ಕೊಡುತ್ತೇವೆಂಬ’ ಚುನಾವಣಾ ಪ್ರಚಾರದ ‘ಟಕಾಟಕ್’ ಡೋಂಗಿ ಡೈಲಾಗ್ ಅನ್ನು ನಂಬಿ ಬೆಂಗಳೂರಿನಲ್ಲಿ ನಿದ್ರೆಗೆಟ್ಟು ಮಹಿಳೆಯರು ಬೆಳಗಿನ ಜಾವ 4 ಗಂಟೆಗೆ ಸರತಿಯ ಸಾಲಿನಲ್ಲಿ ನಿಂತು ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯಲು ಮುಗಿಬಿದ್ದಿರುವ ಘಟನೆ ನಿಜಕ್ಕೂ ಬೇಸರವನ್ನು ತರಿಸುವಂತದ್ದು.

ಇದನ್ನೂ ಸಹ ಓದಿ: ‘ಫಸಲ್ ಭೀಮಾ ಯೋಜನೆ’ ನೋಂದಣಿಗೆ ಈ ದಾಖಲೆ ಕಡ್ಡಾಯ!

ತಪ್ಪು ಗ್ರಹಿಕೆಯಿಂದಾಗಿ ಹಸು-ಗೂಸುಗಳನ್ನು ಕೈಗೆತ್ತಿಕೊಂಡು ದಿನಗಟ್ಟಲೆ ಸರತಿಯ ಸಾಲಿನಲ್ಲಿ ನಿಂತು ಅನಗತ್ಯ ಸಂಕಷ್ಟಗಳನ್ನು ಪಡುತ್ತಿರುವ ಮುಗ್ಧ ಮಹಿಳೆಯರನ್ನು ನೋಡಿಯಾದರೂ ಕಾಂಗ್ರೆಸ್ಸಿಗರ ಮನವು ಕಲಕುತ್ತಿಲ್ಲವೆಂದರೆ, ಕಾಂಗ್ರೆಸ್ಸಿಗರ ಹೃದಯ ಹೀನತೆಯ ಹಾಗೂ ಭಂಡತನವನ್ನು ಎತ್ತಿ ತೋರಿಸುತ್ತದೆ.

ಬಡ ಜನರೊಂದಿಗೆ ಚೆಲ್ಲಾಟವಾಡುವುದನ್ನು ಬಿಟ್ಟು ಈಗಲಾದರೂ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಅಮಾಯಕವಾದ ಮಹಿಳೆಯರಿಗೆ ವಾಸ್ತವತೆಯನ್ನು ತಿಳಿಸಿ ಅವರ ಕ್ಷಮೆಯಾಚಿಸಲಿ, ಇಲ್ಲದಿದ್ದರೆ ತಪ್ಪು ಗ್ರಹಿಕೆಯಿಂದ ಸರತಿಯ ಸಾಲಿನಲ್ಲಿ ನಿಲ್ಲುತ್ತಿರುವ ಮಹಿಳೆಯರಿಗೆ ವಾಸ್ತವದ ಸಂಗತಿ ಅರಿವಾದರೆ ಉಂಟಾಗುವ ಪರಿಸ್ಥಿತಿಯ ಪರಿಣಾಮವನ್ನು ಕಾಂಗ್ರೆಸ್ಸಿಗರೇ ಅನುಭವಿಸಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ! ಆಹಾರ ಇಲಾಖೆ ಸೂಚನೆ

ರಾಜ್ಯದ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌! ಉಚಿತ ಶೂ, ಸಾಕ್ಸ್‌ ವಿತರಣೆಗೆ ಗ್ರೀನ್‌ ಸಿಗ್ನಲ್


Share

Leave a Reply

Your email address will not be published. Required fields are marked *