rtgh
Headlines

ಈ‌ ಸಣ್ಣ ಕೆಲಸ ಮಾಡಿದ್ರೆ ಗೃಹಲಕ್ಷ್ಮಿ ಎಲ್ಲಾ ಕಂತಿನ ಹಣ ಒಟ್ಟಿಗೆ ಜಮೆ!

Gruhalakshmi Installment Amount
Share

ಹಲೋ ಸ್ನೇಹಿತರೆ, ಇನ್ನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಪ್ರಗತಿಗಳ ಬಗ್ಗೆ ಕಾಂಗ್ರೆಸ್ ರಾಜಕೀಯ ಮುಖಂಡರು ಅಭಿವೃದ್ಧಿ ಪರ ಮಾತುಗಳನ್ನು ಆಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ದೀರ್ಘಕಾಲದ ವರೆಗೆ ಚಾಲ್ತಿಯಲ್ಲಿರುವ ಯೋಜನೆಗಳಾಗಿದ್ದು ಯಾವುದೇ ಸಂದರ್ಭದಲ್ಲಿಯು ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಈಗಾಗಲೇ ಈ ಗ್ಯಾರಂಟಿ ಯೋಜನೆಗಳ ಬಗ್ಗೆ ಬಡ ವರ್ಗದ ಜನತೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಅದರಲ್ಲೂ ಮಹಿಳೆಯರಿಗೆ ಈ ಭಾರಿ ಹೆಚ್ಚಿನ ಪ್ರಯೋಜನ ನೀಡುವ ಮೂಲಕ ಗೃಹಲಕ್ಷ್ಮಿ ಶಕ್ತಿ ಯೋಜನೆಯ ಸೌಲಭ್ಯ ಗಳನ್ನು ಹೆಚ್ಚಿನ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಇದೀಗ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಅಪೇಟ್ ಮಾಹಿತಿಯೊಂದು ಬಂದಿದೆ ಈ ಮಾಹಿತಿ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Gruhalakshmi Installment Amount

Contents

ಯಾರಿಗೆ ಹಣ ಜಮೆಯಾಗಿಲ್ಲ?

ಗೃಹಲಕ್ಷ್ಮಿ ನೋಂದಣಿ ಮಾಡಿದ 80% ಮಹಿಳೆಯರಿಗೆ ಮಾತ್ರ ಹಣ ಖಾತೆಗೆ ಜಮಾ ಆಗಿದ್ದು 20% ನಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿಯ ಒಂದು ಕಂತಿನ ಹಣವೂ ಜಮೆಯಾಗಿಲ್ಲ. ಇದಕ್ಕೆ ಕೆಲವೊಂದು ತಾಂತ್ರಿಕ ಸಮಸ್ಯೆ ಇದ್ದು ಸರಕಾರದಿಂದ ಯಾವುದೇ ಸಮಸ್ಯೆಯಾಗಿಲ್ಲ. ಮಹಿಳೆಯರು ತಮ್ಮ ದಾಖಲೆಗಳನ್ನು ಸರಿಪಡಿಕೊಳ್ಳುಬೇಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಇದನ್ನು ಓದಿ: 1st PUC ವಾರ್ಷಿಕ ಪೂರಕ ಪರೀಕ್ಷೆಯ ದಿನಾಂಕ ಪಟ್ಟಿ: ಪರಿಶೀಲಿಸಲು ಇಲ್ಲಿದೆ ನೇರ ಲಿಂಕ್

ಈ ಕೆಲಸ ಮಾಡಿದ್ರೆ ಗೃಹಲಕ್ಷ್ಮೀ ಹಣ ಖಾತೆಗೆ ಜಮೆ:

ನಿಮ್ಮ ಖಾತೆಗೆ ಗೃಹಲಕ್ಷ್ಮಿಯ ಹಣ ಬರದೇ ಇದ್ದಲ್ಲಿ ಮೊದಲು ಈ ಕೆಲಸ ಮಾಡಿ, ಹೌದು ಹಲವು ಮಹಿಳೆಯರು ಬ್ಯಾಂಕ್ ಖಾತೆ ಹೊಂದಿದ್ದರೂ ಅದಕ್ಕೆ ಆಧಾರ್ ಸೀಡಿಂಗ್ ಮಾಡಿಕೊಂಡಿಲ್ಲ. ಹೀಗಾಗಿ ಈ ಕೆಲಸ ಮೊದಲು ಮಾಡಿದವರ ಖಾತೆಗೆ ಹಣ ಜಮೆಯಾಗಲಿದೆ. ಪ್ರಸ್ತುತ ನೀವು ಹೊಸ ಖಾತೆ ತೆರೆದರೂ ಅದನ್ನು ಅಪ್ಡೇಟ್ ಮಾಡಿ ಆಧಾರ್ ಗೆ ಲಿಂಕ್ ಮಾಡಿಸಿಕೊಳ್ಳಿ. ಗೃಹಲಕ್ಷ್ಮಿ ಸೌಲಭ್ಯ ಪಡೆಯಲು NPCI ಕಡ್ಡಾಯಗೊಳಿಸಿದ್ದು ಗೃಹಲಕ್ಷ್ಮಿ ಫಲಾನುಭವಿಗಳು ಕಡ್ಡಾಯವಾಗಿ E -KYC ಮಾಡಿಸಿದ್ರೆ ಮಾತ್ರ ಹಣ ಜಮೆಯಾಗಲಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ದಾಖಲೆ ಅಪ್ಡೇಟ್ ಮಾಡಿ ಮತ್ತೆ ಅರ್ಜಿ ಸಲ್ಲಿಸಿ?

ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ‌ ಖಾತೆಗೆ ಜಮೆಯಾಗದೇ ಇದ್ದಲ್ಲಿ ನೀವು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸುವ ಅವಕಾಶವನ್ನು ಸರ್ಕಾರ ನೀಡಿದೆ. ನಿಮ್ಮ ಆಧಾರ್ ಮತ್ತು ರೇಷನ್ ಕಾರ್ಡ್ ನಲ್ಲಿ ಮಾಹಿತಿ ಸರಿಹೊಂದದೆ ಇದ್ದಲ್ಲಿ ಹಣ ಜಮೆ ಯಾಗೋದಿಲ್ಲ‌. ಹಾಗಾಗಿ ನಿಮ್ಮ ಆಧಾರ್, ರೇಷನ್, ಬ್ಯಾಂಕ್ ಖಾತೆ ಇತ್ಯಾದಿ ಮುಖ್ಯ ದಾಖಲೆಗಳನ್ನು ಅಪ್ಡೇಟ್ ಮಾಡಿಸಿ ಮತ್ತೆ ಅರ್ಜಿಯನ್ನು ಹಾಕಬಹುದಾಗಿದೆ.

ಇತರೆ ವಿಷಯಗಳು:

ಉದ್ಯೋಗ ಖಾತ್ರಿ ಕಾರ್ಮಿಕರ ವೇತನ 10% ಹೆಚ್ಚಳ! ಏಪ್ರಿಲ್ 1 ರಿಂದ ಜಾರಿಗೆ

ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗಾವಕಾಶ.! SSLC ಪಾಸಾಗಿ ಅರ್ಜಿ ಹಾಕಿದ್ರೆ ಸಿಗುತ್ತೆ ತಿಂಗಳಿಗೆ 81,100 ರೂ. ವೇತನ


Share

Leave a Reply

Your email address will not be published. Required fields are marked *