ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದ ಮಹತ್ವಾಕಾಂಶೆಯ ಗೃಹಲಕ್ಷ್ಮೀ ಯೋಜನೆಯ 8 ನೇ ಕಂತಿನ 2,000 ರೂ. ಜಮಾ ಆಗಿರುವ ಬಗ್ಗೆ ಸಂಪೂರ್ಣ ವಿವರವನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಜಾರಿಗೆ ತರಲಾದ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 2,000 ರೂ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದ್ದು. 8 ನೇ ಕಂತಿನ ದುಡ್ಡು ಜಮಾ ಆಗಿರುವ ಬಗ್ಗೆ ಪೂರ್ತಿ ಮಾಹಿತಿ.
ಗೃಹಲಕ್ಷ್ಮೀ 8 ನೇ ಕಂತಿನ ಹಣ
2023 ರ ಆಗಸ್ಟ್ 30 ರಿಂದ ಜಾರಿಯಲ್ಲಿರುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಹ ಗೃಹಲಕ್ಷ್ಮೀಯರ ಖಾತೆಗೆ 7 ನೇ ಕಂತಿನ 2,000 ರೂ. ಈಗಾಗಲೇ ಜಮೆ ಮಾಡಲಾಗಿದೆ, ಜಿಲ್ಲಾವಾರು 8 ನೇ ಕಂತಿನ ಹಣ ಇವತ್ತು (11-04-2024) ಜಮೆಯಾಗಿದೆ.
ರಾಜ್ಯ ಸರ್ಕಾರದಿಂದ ಈ ಹಿಂದೆ ಹೋರಡಿಸಲಾದ ಆದೇಶದಂತೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪ್ರತಿ ತಿಂಗಳ ದಿನಾಂಕ 20 ರ ಒಳಗಾಗಿ ಮನೆ ಯಜಮಾನಿಯರ ಬ್ಯಾಂಕ್ ಖಾತೆಗಳಿಗೆ GruhaLakshmi DBT ಮುಖಾಂತರ ವರ್ಗಾವಣೆ ಮಾಡುವಂತೆ ತಿಳಿಸಲಾಗಿದೆ. ಅದರಂತೆ 8 ನೇ ಕಂತಿನ ಹಣವನ್ನು ಸಂದಾಯ ಮಾಡಲಾಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ MSG ಬಂದಿರುತ್ತದೆ ನೋಡಿ.
ಅರ್ಹ ಮನೆ ಯಜಮಾನಿ ಬ್ಯಾಂಕ್ ಖಾತೆಗೆ 8 ಕಂತುಗಳ ಒಟ್ಟು 16,000 ರೂ. ಹಣ ಜಮೆಯಾಗಿದ್ದು, ಇದು ಬಡ ಜನರಿಗೆ ಅನುಕೂಲಕರವಾಗಿದೆ.
ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರದೆ ಇದ್ದರೆ ಹತ್ತಿರದ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ. ಗೃಹಲಕ್ಷ್ಮಿ DBT Status Check ಮಾಡಬೇಕೇ ಹಾಗಿದ್ದರೆ ಇಲ್ಲಿ ಕ್ಲಿಕ್ ಮಾಡಿ DBT Karnataka App Link: Download ಮಾಡಿ
ಇತರೆ ವಿಷಯಗಳು
BMTC ಭರ್ಜರಿ ಹುದ್ದೆ ಆಫರ್!! 2500 ಕ್ಕೂ ಹೆಚ್ಚು ಹುದ್ದೆಗಳು
ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್! ಹಳೆ ಪಿಂಚಣಿಗೆ ರಾಜ್ಯ ಸರ್ಕಾರ ಮಹತ್ವದ ಆದೇಶ