rtgh
Headlines

ಹೊಸ ಮನೆ ಕಟ್ಟುತ್ತಿರುವ ಎಲ್ಲರಿಗೂ ವಿದ್ಯುತ್ ಇಲಾಖೆ ನೀಡಿದೆ ಸಿಹಿಸುದ್ದಿ!

Electricity Department Updates
Share

ಹಲೋ ಸ್ನೇಹಿತರೆ, ಇಂದಿನ ದಿನಗಳಲ್ಲಿ ವಿದ್ಯುತ್‌ ಬಳಕೆ ಎಷ್ಟಿದೇ ಎಂದು ನಮಗೇ ತಿಳಿದೇ ಇದೆ. ಅದರಲ್ಲೂ ಕೃಷಿ ಚಟುವಟಿಕೆ ಪೂರೈಕೆಗೆ ವಿದ್ಯುತ್ ಸಂಪರ್ಕ ಅಗತ್ಯವಾಗಿ ಬೇಕಾಗಿದೆ. ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿ ಮಳೆ ಇಲ್ಲದೆ ಈ ಭಾರಿ ವಿದ್ಯುತ್ ಕೊರತೆ ಬಹಳಷ್ಟು ಒಂಟಾಗಿದೆ. ರಾಜ್ಯ ಸರಕಾರವು ಗೃಹಜ್ಯೋತಿ ಯೋಜನೆಯನ್ನು ರೂಪಿಸುವ ಮೂಲಕ ಪ್ರತಿಯೊಬ್ಬ ಫಲಾನುಭವಿಗಳಿಗೂ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ನೀಡಲಾಗುತ್ತಿದೆ.‌ ಈ ನಿಟ್ಟಿನಲ್ಲಿ ಬಳಕೆದಾರರಿಗೆ ಈ ಸೌಲಭ್ಯ ತುಂಬಾ ಸಹಕಾರಿಯಾಗಿದೆ. ಈಗಾಗಲೇ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡುವ ಮೂಲಕ‌ ಹೆಚ್ಚಿನ‌ ಜನರು ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ ಲಾಭ ಪಡೆಯುತ್ತಿದ್ದಾರೆ.

Electricity Department Updates

Contents

ವಿದ್ಯುತ್ ಇಲಾಖೆಯಿಂದ ಹೊಸ ಸುದ್ದಿ

ಇದೀಗ ಹೊಸ ವಿದ್ಯುತ್ ಸಂಪರ್ಕ ನೀಡುವ ಬಗ್ಗೆ ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗ ಗುಡ್ ನ್ಯೂಸ್ ನೀಡಿದ್ದು ಹೊಸದಾಗಿ ವಿದ್ಯುತ್ ಪಡೆಯುವ ಗ್ರಾಹಕರಿಗೆ 3 ದಿನದಲ್ಲಿ ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ವಿದ್ಯುತ್ ಸರಬರಾಜು ಕಂಪನಿಗಳಿಗೆ ಆದೇಶವನ್ನು ಸರ್ಕಾರ ಹೊರಡಿಸಿದೆ.

ಇದನ್ನು ಓದಿ: ಏಪ್ರಿಲ್ ತಿಂಗಳ ಹೊಸ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ಫಲಾನುಭವಿಗಳು ಈಗಲೇ ಚೆಕ್‌ ಮಾಡಿ

ಆದೇಶದಲ್ಲಿ ಏನಿದೆ?

ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಸುವ ಬಗ್ಗೆ ಆದೇಶ ಹೊರಡಿಸಿದ್ದು ಮುನ್ಸಿಪಲ್ ವ್ಯಾಪ್ತಿಗೆ ಬರುವ ಪ್ರದೇಶಗಳಿಗೆ 7 ದಿನಗಳೊಳಗೆ ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಹಾಗೇ ಗ್ರಾಮೀಣ ಪ್ರದೇಶಗಳ ಗ್ರಾಹಕರಿಗೆ 15 ದಿನಗಳೊಳಗೆ ಹೊಸ ವಿದ್ಯುತ್ ಸಂಪರ್ಕ ತಲುಪಿಸಬೇಕು ಎಂದು ಆದೇಶ ನೀಡಿದೆ. ಒಂದು ವೇಳೆ ಹೊಸ ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಆಗಬೇಕಾದಲ್ಲಿ ಅದು ಪೂರ್ಣಗೊಂಡ ನಂತರದಲ್ಲಿ ವಿದ್ಯುತ್ ಸಂಪರ್ಕ ಒದಗಿಸಬೇಕು. ಇದಕ್ಕೆ ಗರಿಷ್ಠ 90 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಆದೇಶದಲ್ಲಿ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ. ಇನ್ನು ಗುಡ್ಡಗಾಡು ಪ್ರದೇಶಗಳಲ್ಲಿ, ಹೊಸ ಸಂಪರ್ಕಗಳನ್ನು ತೆಗೆದುಕೊಳ್ಳುವ ಹಾಗೂ ಮಾರ್ಪಾಡು ಮಾಡುವ ಅವಧಿಯು 30 ದಿನಗಳು ಇರಲಿದೆ ಎಂದು ತಿಳಿಸಲಾಗಿದೆ.

ವಿದ್ಯುತ್ ಸಮಸ್ಯೆ ನಿವಾರಣೆ ಕ್ರಮ

ಪ್ರಸ್ತುತ ಈ ಬೇಸಿಗೆ ಸಂದರ್ಭದಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಹೆಚ್ಚಾಗಿದ್ದು ಇದನ್ನು ನಿವಾರಣೆ ಮಾಡಲು ಕೂಡ ರಾಜ್ಯ ಸರ್ಕಾರವು ಮುಂದಾಗಿದೆ. ಈಗಾಗಲೇ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಗರಿಷ್ಠ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗಿದ್ದು ವಿದ್ಯುತ್‌ ಕಾಯ್ದೆಯ ಸೆಕ್ಷನ್ 11 ಜಾರಿಗೊಳಿಸಿ, ಖಾಸಗಿ ವಿದ್ಯುತ್ ಉತ್ಪಾದಕರಿಂದ ವಿದ್ಯುತ್‌ ಖರೀದಿಯನ್ನು ಸಹ ಮಾಡಲಾಗಿದೆ. ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿರುವುದರಿಂದ ಬಹಳ ಮುಂಚಿತವಾಗಿ ಸರಿಯಾದ ಕ್ರಮಗಳನ್ನು ಈಗಾಗಲೇ ಅಳವಡಿಕೆ ಮಾಡಲಾಗಿದೆ ಎಂದು ರಾಜ್ಯ ಸರಕಾರವು ಸ್ಪಷ್ಟವಾಗಿ ತಿಳಿಸಿದೆ.

ಇತರೆ ವಿಷಯಗಳು:

ಸರ್ಕಾರಿ ತರಬೇತಿ ಕೇಂದ್ರ ನೇಮಕಾತಿ!! ಆರಂಭದಲ್ಲೇ ಸಿಗತ್ತೆ ₹88,300/- ಸಂಬಳ

ಈ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆ! ಹೊಸ ದರ ಇಲ್ಲಿಂದ ತಿಳಿಯಿರಿ


Share

Leave a Reply

Your email address will not be published. Required fields are marked *