rtgh
Headlines

ಬಸ್‌ ಟಿಕೆಟ್‌ ದರ ಏರಿಕೆ! 25% ಹೆಚ್ಚಳಕ್ಕೆ ಪ್ರಸ್ತಾವನೆ

Bus Ticket Rate Hike
Share

ಹಲೋ ಸ್ನೇಹಿತರೆ, ರಾಜ್ಯದಲ್ಲಿ ಬೆಲೆ ಬಿಸಿ ಜನರನ್ನು ಗುರಿಯಾಗಿಸುತ್ತಿದ್ದು. ಪೆಟ್ರೋಲ್‌-ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಹೆಚ್ಚಳದ ಬೆನ್ನಲ್ಲೇ ಅದರಿಂದ ಉಂಟಾಗುತ್ತಿರುವ ಹೊರೆ ತಗ್ಗಿಸಿಲು ಪ್ರಯಾಣ ದರ ಹೆಚ್ಚಳಕ್ಕೆ ಮುಂದಾಗಿರುವ ನಾಲ್ಕೂ ಸಾರಿಗೆ ನಿಗಮಗಳು ಇದರ ಸಲುವಾಗಿ ದರ ಪರಿಷ್ಕರಣೆಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Bus Ticket Rate Hike

ಈ ಮೂಲಕ ಬಸ್‌ ಪ್ರಯಾಣಿಕರಿಗೂ ತೆರಿಗೆ ಹೊರೆಯ ಬಿಸಿ ತಟ್ಟುವ ಸಾಧ್ಯತೆಗಳು ಕಂಡುಬಂದಿದೆ. ಶೇ. 25ರಷ್ಟು ಬೆಲೆಯೇರಿಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರಕಾರ ಒಪ್ಪಿಗೆ ಸೂಚಿಸಿದರೆ ಶೇ. 12ರಷ್ಟು ಏರಿಕೆಯಾಗುತ್ತದೆ ಎಂದು ಅಂದಾಜಿಸಲಾಗಿದೆ.

KSRTC, BMTC ಸಹಿತ ನಾಲ್ಕೂ ನಿಗಮಗಳು ಆಗಲಿರುವ ಹೊರೆ ಮತ್ತು ಪ್ರಸ್ತುತ ಆರ್ಥಿಕ ಸ್ಥಿತಿಗತಿಯನ್ನು ಲೆಕ್ಕಹಾಕಿ ಸರಾಸರಿ ಶೇ. 25ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಒಂದು ವೇಳೆ ಯಥಾವತ್ತಾದ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರೆ ನಿತ್ಯ ಸರಾಸರಿ 5ರಿಂದ 6 ಕೋಟಿ ರೂ. ಆದಾಯ ಹೆಚ್ಚಳವಾಗುವ ನಿರೀಕ್ಷೆ ಇದೆ. ಆದರೆ ಆ ಪೈಕಿ ಅರ್ಧಕ್ಕರ್ಧ ಹೊರೆಯನ್ನು ಸರಕಾರವೇ ಭರಿಸಬೇಕಾಗುತ್ತದೆ.

ಇದನ್ನು ಓದಿ: ಪೋಷಕರಿಗೆ ಫುಲ್‌ ಖುಷ್! ಸರ್ಕಾರಿ ಶಾಲೆಗಳಲ್ಲೂ ʻಕನ್ನಡ-ಆಂಗ್ಲʼ ಮಾಧ್ಯಮ ತರಗತಿ

ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವ ಒಟ್ಟು ಪ್ರಯಾಣಿಕರಲ್ಲಿ ಶೇ. 58ರಷ್ಟು ಮಹಿಳೆಯರು. ಅವರ ಪ್ರಯಾಣ ವೆಚ್ಚವನ್ನು “ಶಕ್ತಿ’ ಯೋಜನೆ ಅಡಿ ಸರಕಾರವೇ ನೀಡುತ್ತಿದೆ. ಒಂದು ವೇಳೆ ಪ್ರಸ್ತಾವನೆಯಂತೆ ಪ್ರಯಾಣ ದರವನ್ನು ಶೇ. 25ರಷ್ಟು ಹೆಚ್ಚಿಸಿದರೆ, ಅದರಿಂದ ನಿತ್ಯ 5-6 ಕೋಟಿ ರೂ. ಆದಾಯ ಹೆಚ್ಚಳವಾಗುತ್ತದೆ. ಇದರಲ್ಲೂ ಅರ್ಧದಷ್ಟನ್ನು ಶಕ್ತಿ ಯೋಜನೆಯಡಿ ಸರಕಾರವೇ ನೀಡಬೇಕಿದೆ.

ಇತರೆ ವಿಷಯಗಳು:

‌BPL ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್!

ಶತಕ ಬಾರಿಸಿದ ಟೊಮೆಟೊ ದರ: ಗ್ರಾಹಕರಿಗೆ ಜೇಬಿಗೆ ಕತ್ತರಿ


Share

Leave a Reply

Your email address will not be published. Required fields are marked *