rtgh
Headlines

ಶತಕ ಬಾರಿಸಿದ ಟೊಮೆಟೊ ದರ: ಗ್ರಾಹಕರಿಗೆ ಜೇಬಿಗೆ ಕತ್ತರಿ

 Tomato Price Hike
Share

ಬಾಗಲಕೋಟೆ: ಕಳೆದ ವಾರವಷ್ಟೇ Kgಗೆ 50 ರೂಪಾಯಿವರೆಗೂ ದೊರೆಯುತ್ತಿದ್ದ ಟೊಮೆಟೊ ಬೆಲೆ ಏಕಾಏಕಿ 100 ರೂಪಾಯಿಗಳ ಗಡಿಯನ್ನು ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಅಮೀನಗಡದಲ್ಲಿ ಟೋಮೆಟೊ ಸೇರಿದಂತೆ ತರಕಾರಿ, ಸೊಪ್ಪುಗಳ ದರವು ತೀವ್ರವಾಗಿ ಏರಿಕೆಯಾಗಿದೆ.

 Tomato Price Hike

ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ತರಕಾರಿಯು ಪೂರೈಕೆಯಾದ ಕಾರಣ ಬೆಲೆ ಹೆಚ್ಚಾಗಿದೆ. ಹೀರೆಕಾಯಿಯು Kgಗೆ 120 ರೂಪಾಯಿ., ಸೌತೆಕಾಯಿ 120 ರೂಪಾಯಿ., ಬೀನ್ಸ್ 160 ರೂಪಾಯಿ., ಟೊಮೆಟೊ 100 ರೂಪಾಯಿಗಳಿಗೆ ಮಾರಾಟವಾಗಿದೆ.

ಮಳೆ, ರೋಗ ಬಾಧೆ ಸೇರಿದ ನಾನಾ ಕಾರಣಗಳಿಂದ ತರಕಾರಿಯ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಶನಿವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿರುವುದರಿಂದ ತರಕಾರಿ ಸೇರಿದ ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಟೊಮೆಟೊ ದರ ಏರಿಕೆಯಾದ ಹಿನ್ನೆಲೆಯಲ್ಲಿ ಜನರು ಹುಣಸೆಹಣ್ಣು ಖರೀದಿಗೆ ಆಸಕ್ತಿಯನ್ನು ತೋರಿಸುತ್ತಿದ್ದಾರೆ.

ಕಳೆದ ವಾರಕ್ಕಿಂತ ರೇಟ್‌ ಡಬಲ್!‌ ಇಂದಿನಿಂದ ಟೊಮೊಟೊ ಮುಟ್ಟಂಗಿಲ್ಲ

ನಕಲಿ ರೇಷನ್ ಕಾರ್ಡುಗಳಿಗೆ ಬ್ರೇಕ್! ಖಡಕ್ ವಾರ್ನಿಂಗ್ ಕೊಟ್ಟ ಸರ್ಕಾರ


Share

Leave a Reply

Your email address will not be published. Required fields are marked *