rtgh
Headlines

‌BPL ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್!

BPL Ration card
Share

ಬೆಂಗಳೂರು: BPL ಕಾರ್ಡ್ ವಿತರಿಸುವಲ್ಲಿ ಸರ್ಕಾರದ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಸದ್ಯಕ್ಕೆ BPL ಕಾರ್ಡ್ ವಿತರಣೆಯಿಲ್ಲ. ಹಳೆಯ ಅರ್ಜಿಗಳ ವಿಲೇವಾರಿಯ ನಂತರವೇ ಹೊಸ ಅರ್ಜಿಗಳಿಗೆ ಆಹ್ವಾನವನ್ನು ನೀಡಲಾಗುವುದು ಎಂದು ಹೇಳಲಾಗಿದೆ.

BPL Ration card

ಬಡ ಕುಟುಂಬಗಳಿಗೆ ಉಚಿತವಾಗಿ ಆಹಾರ ಧಾನ್ಯಗಳ ವಿತರಣೆಗಾಗಿ ಆದ್ಯತೆಯ ಮೇರೆಗೆ BPl ಕಾರ್ಡ್ ಗಳನ್ನು ವಿತರಿಸಬೇಕಿದೆ. ಸುಮಾರು 2 ವರ್ಷಗಳಿಂದ ಅರ್ಜಿಯನ್ನು ಆಹ್ವಾನಿಸಿಲ್ಲ. ಇದರಿಂದಾಗಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿ, ಹೆಚ್ಚುವರಿ ಅಕ್ಕಿಯ ಬದಲು ಹಣವನು ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದೆ.

ಸುಮಾರು ಎರಡೂವರೆ ಲಕ್ಷ ಅರ್ಜಿಗಳ ವಿಲೇವಾರಿ ಬಾಕಿ ಇದ್ದು, ಇನ್ನೂ ನಾಲ್ಕೈದು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಮುಂದಾಗಿದ್ದಾರೆ. ಹೊಸದಾಗಿ BPL ಕಾರ್ಡ್ ವಿತರಿಸಿದರೆ ಪಡಿತರ ವಿತರಣೆಯ ಕಾರ್ಡ್ ಪಡೆದುಕೊಂಡವರಿಗೆ ಗೃಹಲಕ್ಷ್ಮಿ ಯೋಜನೆಯಡಿ 2,000 ರೂಪಾಯಿ ನೀಡಬೇಕಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎನ್ನುವ ಕಾರಣದಿಂದ ವಿನಾಕಾರಣವಾಗಿ ಅರ್ಜಿಗಳನ್ನು ಆಹ್ವಾನಿಸದೇ ನೆಪ ಹೇಳಲಾಗುತ್ತಿದೆ ಎಂದು ತಿಳಿಸಲಾಗಿದೆ.

ಇದನ್ನೂ ಸಹ ಓದಿ: ನಕಲಿ ರೇಷನ್ ಕಾರ್ಡುಗಳಿಗೆ ಬ್ರೇಕ್! ಖಡಕ್ ವಾರ್ನಿಂಗ್ ಕೊಟ್ಟ ಸರ್ಕಾರ

ಬಡತನ ರೇಖೆಗಿಂತ ಕೆಳಗಿರುವವರು ಉಚಿತವಾಗಿ ಆಹಾರ ಧಾನ್ಯವನ್ನು ಪಡೆಯಲು ರೇಷನ್ ಕಾರ್ಡ್ ಕಡ್ಡಾಯವಾಗಿದ್ದು, ಈಗಾಗಲೇ ಗುರಿಯನ್ನು ಮೀರಿ ಕಾರ್ಡ್ ಗಳನ್ನು ವಿತರಿಸಲಾಗಿದೆ. ಮತ್ತೆ ಲಕ್ಷಾಂತರ ರೇಷನ್ ಕಾರ್ಡ್ ಗಳನ್ನು ವಿತರಿಸಿದರೆ ಹೊರೆಯಾಗಲಿದೆ.

ರಾಜ್ಯದಲ್ಲಿ 2013ರ ಜನಸಂಖ್ಯೆಯ ಆಧಾರದ ಮೇಲೆ 1.15 ಕೋಟಿ ರೇಷನ್ ಕಾರ್ಡ್ ವಿತರಿಸುವ ಗುರಿಯನ್ನು ನಿಗದಿಪಡಿಸಿದ್ದು, 1.48 ಕೋಟಿ ಕಾರ್ಡ್ ಗಳನ್ನು ವಿತರಣೆ ಮಾಡಲಾಗಿದೆ. ಹಳೆಯ ಅರ್ಜಿಗಳೇ ಸುಮಾರು 2 ಲಕ್ಷಕ್ಕೂ ಅಧಿಕ ಇರುವುದರಿಂದ ಇವುಗಳನ್ನು ವಿಲೇವಾರಿಯನ್ನು ಮಾಡಿದ ನಂತರ ಹೊಸ ಅರ್ಜಿಗಳ ಸ್ವೀಕರಿಸುವ ಬಗ್ಗೆ ಕ್ರಮವನ್ನು ಕೈಗೊಳ್ಳಲಾಗುವುದು ಎನ್ನಲಾಗಿದೆ.

TCS ನಲ್ಲಿ ಉದ್ಯೋಗಿಗಳ ಕೊರತೆ! ಅಪ್ಲೇ ಮಾಡಿದ ಪ್ರತಿಯೊಬ್ಬರಿಗೂ ಸಿಗುತ್ತೆ ಉದ್ಯೋಗ

ಕಳೆದ ವಾರಕ್ಕಿಂತ ರೇಟ್‌ ಡಬಲ್!‌ ಇಂದಿನಿಂದ ಟೊಮೊಟೊ ಮುಟ್ಟಂಗಿಲ್ಲ


Share

Leave a Reply

Your email address will not be published. Required fields are marked *