ಹಲೋ ಸ್ನೇಹಿತರೇ, ವಾರದಿಂದ ರಾಜ್ಯದಾದ್ಯಂತ ಉತ್ತಮವಾಗಿ ಮಳೆಯಾಗುತ್ತಿದೆ. ಕೆಲವೆಡೆ ಬೆಳೆಗಳು ನಾಶವಾಗುತ್ತಿದ್ದರೆ, ಇನ್ನು ಕೆಲವೆಡೆ ಮಳೆಯಿಂದಾಗಿ ಉತ್ತಮ ಫಸಲು ಬಂದಿದೆ. ಒಟ್ಟಿನಲ್ಲಿ ತರಕಾರಿ, ಕಾಯಿಪಲ್ಲೆಗಳ ದರ ಶತಕ ಮುಟ್ಟುತ್ತಿದೆ. ಯಾವ ತರಕಾರಿಗೆ ಎಷ್ಟು ಬೆಲೆ ತಿಳಿಯಿರಿ.
ತರಕಾರಿಗಳ ಖರೀದಿಗೆ ಮಾರುಕಟ್ಟೆಗೆ ಹೋಗುವಾಗ ಜೇಬಿನ ತುಂಬಾ ಹಣ ಇಟ್ಟುಕೊಂಡು ಹೋಗಬೇಕಾಗಿದೆ. 1 ಕೆಜಿ ಖರೀದಿಸುವಲ್ಲಿ ಅರ್ಧ ಕೆಜಿ ಖರೀದಿಸುವಂತಾಗಿದೆ.
ಗಜೇಂದ್ರಗಡ : ಸ್ಥಳೀಯ ತರಕಾರಿ ಮಾರುಕಟ್ಟೆಯಲ್ಲಿ ಟೊಮೇಟೊ ಹಾಗೂ ಕೊತ್ತಂಬರಿ ಬೆಲೆ ಗ್ರಾಹಕರನ್ನು ಬೆಚ್ಚಿಬೀಳಿಸುತ್ತಿದೆ. ನಿತ್ಯದ ಅಡುಗೆಗೆ ಪ್ರಮುಖವಾಗಿ ಬೇಕಾಗಿರುವ ಈ ಎರಡು ವಸ್ತುಗಳನ್ನು ಹೇಗಪ್ಪ ಅಷ್ಟೊಂದು ದುಡ್ಡು ಕೊಟ್ಟು ಖರೀದಿಸುವುದು ಎಂದು ಗ್ರಾಹಕರು ಚಿಂತಿಸುತ್ತಿದ್ದಾರೆ.
ಒಂದು ಕೆಜಿ ಟೊಮೇಟೊ ಬೆಲೆ ನೂರು ರೂ. ದಾಟಿದ್ದರೆ, ಒಂದು ಸಣ್ಣ ಕಟ್ಟಿನ ಕೊತ್ತಂಬರಿ ಬೆಲೆಯೂ 100 ರೂ. ಆಗಿದೆ. ಅಡುಗೆಗೆ ಅವಶ್ಯ ಇರುವ ತಧಿರಧಿಕಾರಿ ಬೆಲೆಗಳು ಸಂಚೂರಿ ಬಾರಿಸಿರುವುದು ಗ್ರಾಹಕರು ಹೇಗಪ್ಪ ಎನ್ನುವಂತಾಗಿದೆ. 10 ದಿನದಿಂದ ಕೊತ್ತಂಬರಿ, ಟೊಮೇಟೊ ದರದಲ್ಲಿ ಏರಿಕೆ ಕಂಡಿದ್ದು, ರೈತರಿಗೆ ಖುಷಿ ನೀಡಿದೆ.
ಆದರೆ ಗ್ರಾಹಕರು ಮಾತ್ರ ಅನಿವಾರ್ಯವಾಗಿ ಹೆಚ್ಚಿನ ದರ ನೀಡಿ ಖರೀದಿಸುವಂತಾಗಿದೆ. ಪಟ್ಟಣ, ಸುತ್ತಲಿನ ಗ್ರಾಮಗಳ ಸಂತೆಯಲ್ಲಿ ಕೊತ್ತಂಬರಿ ಸಿಗುವುದೇ ಅಪರೂಪವಾಗಿದೆ.
ರೈತರು ಅಲ್ಪಸ್ವಲ್ಪ ನೀರಿನಲ್ಲಿ ಬೆಳೆದು ಮಾರುಕಟ್ಟೆಗೆ ತಂದಿರುವ ಕೊತ್ತಂಬರಿ, ಟೊಮೇಟೊ ಕೆಲ ಗ್ರಾಹಕರು ಮುಗಿ ಬೀಳುತ್ತಿದ್ದಾರೆ. ಬೆಲೆ ಕೇಳಿ ಕೆಲವರು ಮುಂದೆ ಹೋದರೆ, ಇನ್ನೂ ಕೆಲವರು ಅನಿವಾರ್ಯವಾಗಿ ಖರೀದಿಸುತ್ತಿದ್ದಾರೆ. ಇತ್ತೀಚೆಗೆ ಸುರಿಯುತ್ತಿರುವ ಮಳೆಯು ತರಕಾರಿ ಬೆಳೆಯುವ ರೈತರ ಮೊಗದಲ್ಲಿಮಂದಹಾಸ ಮೂಡಿಸಿದೆ.
ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ
ವಾರದಿಂದ ಮಳೆ ಸುರಿಯುತ್ತಿದೆ. ಇದರಿಂದ ಹಸಿರು ಪಲ್ಲೆಗಳ ದರಗಳು ಏರುತ್ತಿವೆ. ಹೀಗಾಗಿ ಮಾರುಕಟ್ಟೆಗೆ ಹೋಗಬೇಕೆಂದರೆ ಚೀಲ ತುಂಬಾ ಹಣ ತುಂಬಿಕೊಂಡು ಬೇಬಿನಲ್ಲಿ ತರಕಾರಿ ತರುವ ಸ್ಥಿತಿ ಎದುರಾಗಿದೆ. ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿಕೆಲ ರೈತರು ದಲ್ಲಾಳಿಗಳ ಮೊರೆ ಹೋದರೆ, ಇನ್ನು ಕೆಲ ರೈತರು ನೇರವಾಗಿ ಮಾರಾಟ ಮಾಡುತ್ತಾರೆ.
ರೈತರ ಬಳಿ ತರಕಾರಿ ದರ ಈವರೆಗೆ ಕಡಿಮೆ ಇತ್ತು. ಇದೀಗ ಅವರೂ ದರ ಹೆಚ್ಚಳ ಮಾಡಿದ್ದರಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದ ಪರಿಣಾಮ ತರಕಾರಿ ಬೆಳೆಯೂ ಹಾಳಾಗುತ್ತಿದೆ. ಜತೆಗೆ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ತರಕಾರಿ ದೊರೆಯದ ಕಾರಣ ಬೆಲೆ ಹೆಚ್ಚಾಗಲು ಕಾರಣವಾಗಿದೆ.
ಹುಣಸೆಹಣ್ಣಿಗೆ ಮೊರೆ
ವಾರದಿಂದೀಚೆ ಟೊಮೇಟೂ ದರ ಹೆಚ್ಚಾಗುತ್ತಿದ್ದಂತೆ ಹುಣಸೆಹಣ್ಣು ಖರೀದಿಯತ್ತ ಜನರು ಚಿತ್ತ ಹರಿಸಿದ್ದಾರೆ. ಮಾರುಕಟ್ಟೆಯಲ್ಲಿ ಹುಣಸೆಹಣ್ಣಿನ ಬೆಲೆ ಕೆಜಿಗೆ 100 ರೂ. ಇದೆ. ಹೀಗಾಗಿ ಗ್ರಾಹಕರಿಗೆ ಅನುಕೂಲವಾಗಿದೆ. ಇನ್ನೊಂದೆಡೆ 1 ಕೆಜಿ ಟೊಮೇಟೊ ಖರೀದಿಸುತ್ತಿದ್ದ ಗ್ರಾಹಕರು ಅರ್ಧ ಕೆಜಿ ಸಾಕು ಎನ್ನುತ್ತಿದ್ದಾರೆ.
ಹೀರೆಕಾಯಿ ಕೆಜಿಗೆ 120 ರೂ., ಸೌತೆಕಾಯಿ 120 ರೂ., ಚೌಳಿಕಾಯಿ 80 ರೂ., ಬೀನ್ಸ್ 160 ರೂ., 5 ನಿಂಬೆಹಣ್ಣಿಗೆ 20 ರೂ., 1 ಮೂಲಂಗಿಗೆ 10 ರೂ. ಹೀಗೆ ತರಕಾರಿ ದರ ಏರು ಮುಖದಲ್ಲಿಸಾಗಿದೆ. ಜನರು ಹೆಚ್ಚು ಕಾಯಿಪಲ್ಲೆಪದಾರ್ಥಗಳಾದ ಸಬ್ಬಸಗಿ, ಮೆಂತೆ, ಕೊತ್ತಂಬರಿ, ಕರಿಬೇವು ಸೇರಿದಂತೆ ಸಸ್ಯಾಹಾರಿ ಪದಾರ್ಥಗಳನ್ನು ಉತ್ತಮ ಆರೋಗ್ಯಕ್ಕಾಗಿ ತಿನ್ನುತ್ತಿದ್ದಾರೆ. ಹೀಗಾಗಿ ಕಾಯಿಪಲ್ಲೆ ಬೆಳೆದ ರೈತರಿಗೂ ಲಾಭವಾಗಿದೆ.
ಗಜೇಂದ್ರಗಡ ತರಕಾರಿ ಮಾರುಕಟ್ಟೆಗೆ ಬೆಳಗಾವಿ, ಹರಪನಹಳ್ಳಿ, ಬದಾಮಿ, ಬಾಗಲಕೋಟ, ಕುಷ್ಟಗಿ ಇನ್ನಿತರ ಊರುಗಳಿಂದ ವಾಹನಗಳಲ್ಲಿತರಲಾಗುತ್ತಿದೆ. ಪೆಟ್ರೊಲ್, ಡಿಸೇಲ್ ಬೆಲೆಯೂ ಹೆಚ್ಚಾಗಿದೆ. ತರಕಾರಿ ಸಾಗಣೆ ವೆಚ್ಚ ಹೆಚ್ಚಾಗುತ್ತಿರುವುದರಿಂದ ತರಕಾರಿ ಬೆಲೆಗಳು ಮತ್ತಷ್ಟು ಹೆಚ್ಚಾಗಲು ಕಾರಣ. ಮುಂದೆ ಇನ್ನಷ್ಟು ಹೆಚ್ಚಾದರೂ ಆಶ್ಚರ್ಯವಿಲ್ಲ.
-ರಾಜೇಂದ್ರಕುಮಾರ ಚಂಪಾಲಾಲ ಬಾಗಮಾರ, ಸಗಟು ತರಕಾರಿ ವ್ಯಾಪಾರಸ್ಥ, ಗಜೇಂದ್ರಗಡ
ಬೇಸಿಗೆಯಲ್ಲಿ ವಿಪರಿತ ಬಿಸಿಲು ಜಮೀನಿನಲ್ಲಿ ತರಕಾರಿಗೆ ನೀರಿಲ್ಲದ ಪರಿಣಾಮ ರೈತರಿಗೆ ಸಂಕಷ್ಟ ತಂದೊಡ್ಡಿತ್ತು. ಸದ್ಯ ಮಳೆ ಸುರಿಯುತ್ತಿದೆ. ಜಮೀನಲ್ಲಿ ತರಕಾರಿ ಇದೆ. ಲಾಭ ಸಿಗುತ್ತೆ ಎನ್ನುವ ಉದ್ದೇಶದಿಂದ ಮಾರುಕಟ್ಟೆಗೆ ಸಿಕ್ಕಷ್ಟು ತರಕಾರಿ ತಂದು ಮಾರುತ್ತಿದ್ದೇವೆ.
-ರಾಮಪ್ಪ ರಾಟೋಡ, ರೈತ
ವಾರದಿಂದೀಚೆಗೆ ಟೊಮೇಟೊ ದರ ಹೆಚ್ಚಾಗುತ್ತಿದ್ದಂತೆ ಹುಣಸೆಹಣ್ಣು ಖರೀದಿಯತ್ತ ಜನರು ಚಿತ್ತ ಹರಿಸಿದ್ದಾರೆ. ಮಾರುಕಟ್ಟೆಯಲ್ಲಿಹುಣಸೆ ಹಣ್ಣಿನ ಬೆಲೆ ಕೆಜಿಗೆ 100 ರೂ. ಇದೆ. ಹೀಗಾಗಿ ಗ್ರಾಹಕರಿಗೆ ಅನುಕೂಲವಾಗಿದೆ.
ಇತರೆ ವಿಷಯಗಳು
ನಿರುದ್ಯೋಗ ನಿವಾರಣೆಗೆ ಸರ್ಕಾರದ ಹೊಸ ಸ್ಕೀಮ್! 50 ಲಕ್ಷ ಉದ್ಯೋಗ ಸೃಷ್ಟಿಗೆ ಮುಂದಾದ ಕೇಂದ್ರ
ಎಚ್ಚರ ರಾಜ್ಯದಲ್ಲಿ ಸುರಿಯಲಿದೆ ಗುಡುಗು ಸಹಿತ ವಿಪರೀತ ಮಳೆ.! ಇದಿಷ್ಟು ಜಿಲ್ಲೆಗಳಿಗೂ ಎಲ್ಲೋ ಅಲರ್ಟ್