ಬೆಂಗಳೂರು: ರೈತರ ಬರ ಪರಿಹಾರವನ್ನು ಸುಪ್ರೀಂ ಕೋರ್ಟಿಗೆ ಹೋಗಿ ಪಡೆದುಕೊಂಡು ಬಂದಿದ್ದೇವೆ. ಮೇ ಮೊದಲ ವಾರ 27.5 ಲಕ್ಷ ರೈತರಿಗೆ ಬರ ಪರಿಹಾರದ ಹಣವನ್ನು ನೀಡಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 7 ಲಕ್ಷ ರೈತರು ಹೊಸದಾಗಿ ಮಳೆಯಾಶ್ರಿತ ಬೆಳೆಯನ್ನು ಹೊಂದಿದ್ದರು. ಬೆಳೆಯ ಹಾನಿಗೊಳಗಾದ ರೈತರಿಗೆ ಪರಿಹಾರವನ್ನು ನೀಡಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.
ಒಂದು ವಾರದೊಳಗೆ ರೈತರಿಗೆ ಪರಿಹಾರವನ್ನು ನೀಡಲು ಸೂಚನೆಯನ್ನು ನೀಡಲಾಗಿದೆ. 17 ಲಕ್ಷದ 9 ಸಾವಿರ ರೈತರ ಕುಟುಂಬಗಳಿಗೆ ಜೀವನೋಪಾಯ ಪರಿಹಾರವನ್ನು ನೀಡಲಾಗುವುದು. 2800 ರೂಪಾಯಿ ಅಥವಾ 3000 ರೂ. ಬರಬಹುದು. ಇದು ಜೀವನೋಪಾಯದ ನಷ್ಟದ ಪರಿಹಾರವಾಗಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀಡುವ ಪರಿಹಾರವಾಗಿದೆ ಎಂದು ಹೆಳಿದ್ದಾರೆ.
ಇತರೆ ವಿಷಯಗಳು:
ಹೆಣ್ಣು ಮಗುವಿನ ಹೆಸರಿನಲ್ಲಿ ತೆರೆಯಿರಿ ಸುಕನ್ಯಾ ಸಮೃದ್ಧಿ ಖಾತೆ! ಸಿಗಲಿದೆ 70 ಲಕ್ಷ
ವರ್ಗಾವಣೆಗಾಗಿ ಕಾಯುತ್ತಿರುವ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!