ಹಲೋ ಸ್ನೇಹಿತರೇ, ಕಷ್ಟದ ಸಮಯದಲ್ಲಿ ತುರ್ತಾಗಿ ಹಣದ ಅವಶ್ಯವಿದ್ದರೆ ನೀವು ಈ ಓವರ್ಡ್ರಾಫ್ಟ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಜನ್ ಧನ್ ಖಾತೆ ಹೊಂದಿರುವ ಬಳಕೆದಾರರಿಗೂ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಹೇಗೆ ಪಡೆಯುವುದು ಎಂಬುದರ ಬಗ್ಗೆ ನಮ್ಮ ಲೇಖನದಲ್ಲಿ ತಿಳಿಯಿರಿ.
ಅನೇಕ ಜನರು ಬ್ಯಾಂಕ್ನಲ್ಲಿ ಖಾತೆಗಳನ್ನು ಹೊಂದಿರುತ್ತಾರೆ. ಆದರೆ ಬ್ಯಾಂಕ್ ಖಾತೆ ತೆರೆಯುವ ಮೊದಲು ಖಾತೆಗೆ ಸಂಬಂಧಿಸಿದ ನಿಯಮಗಳು & ನಿಬಂಧನೆಗಳು ಎಲ್ಲರಿಗು ತಿಳಿದಿರಬೇಕು. ಇದರಿಂದ ಕೆಲವು ಪ್ರಯೋಜನಗಳ ಬಗ್ಗೆ ನಿಮಗೆ ಅರಿವು ಇರುತ್ತದೆ. ನೀವು ಹೊಸ ಬ್ಯಾಂಕ್ ಖಾತೆಯನ್ನು ತೆರೆದರೆ, ಆ ಖಾತೆಯಲ್ಲಿ ಓವರ್ಡ್ರಾಫ್ಟ್ ಸೌಲಭ್ಯ ಇದಿಯಾ ಎಂದು ಮುಂಚಿತವಾಗಿ ಕೇಳಿ ತಿಳಿದುಕೊಳ್ಳಬೇಕಾಗುತ್ತದೆ. ನೀವು ಈಗಾಗಲೇ ಬ್ಯಾಂಕ್ ಖಾತೆಯನ್ನು ಹೊಂದಿದ್ದಲ್ಲಿ ನಿಮ್ಮ ಬ್ಯಾಂಕ್ ಮ್ಯಾನೆಜರ್ ಹತ್ತಿರ ಹೋಗಿ ಈ ವಿಷಯದ ಬಗ್ಗೆ ಕೇಳಿ ತಿಳಿದುಕೊಳ್ಳುವುದು ಒಳ್ಳೆಯದು.
ಈ ಸೌಲಭ್ಯವನ್ನು ಹೇಗೆ ಪಡೆಯುವುದು ಎಂಬುದನ್ನು ತಿಳಿಯಿರಿ, ಏಕೆಂದರೆ ಕಷ್ಟದ ಸಮಯದಲ್ಲಿ ನಿಮಗೆ ತುರ್ತಾಗಿ ಹಣದ ಅಗತ್ಯವಿದ್ದರೆ ನೀವು ಈ ಓವರ್ಡ್ರಾಫ್ಟ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಜನ್ ಧನ್ ಖಾತೆ ಹೊಂದಿರುವ ಬಳಕೆದಾರರಿಗೂ ಈ ಸೌಲಭ್ಯ ಸಿಗಲಿದೆ.
Contents
ಒಂದು ರೀತಿಯ ಸಾಲ
ಓವರ್ಡ್ರಾಫ್ಟ್ ಎನ್ನುವುದು ಬ್ಯಾಂಕ್ ನೀಡುವ ಒಂದು ರೀತಿಯ ಸಾದ ವ್ಯವಸ್ಥೆ, ಆದರೆ ಈ ಸಾಲಕ್ಕೆ ನೀವು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅಥವಾ ನೀವು ಯಾವುದೇ ಬ್ಯಾಂಕ್ಗೆ ಹೋಗುವ ಅಗತ್ಯ ಕೂಡ ಇಲ್ಲ. ನೀವು ತ್ವರಿತ ಓವರ್ಡ್ರಾಫ್ಟ್ (OD) ಸೌಲಭ್ಯವನ್ನು ಪಡೆಯಬಹುದಾಗಿದೆ. ಅಲ್ಲದೇ ನೀವು ಯಾವುದೇ ATMನಿಂದ ಹಣವನ್ನು ಹಿಂಪಡೆಯಬಹುದು. ವಾಸ್ತವವಾಗಿ, ಈ ಸೌಲಭ್ಯದಲ್ಲಿ ನೀವು ಹಿಂಪಡೆಯುವ ಮೊತ್ತವನ್ನು ಮೊದಲೇ ನಿರ್ಧರಿಸಲಾಗುವುದು.
ಓವರ್ ಡ್ರಾಫ್ಟ್ ನಿಯಮ ಏನು?
ಪ್ರತಿ ಬ್ಯಾಂಕ್ ಓವರ್ಡ್ರಾಫ್ಟ್ ಅಡಿಯಲ್ಲಿ ವಿಭಿನ್ನ ಮೊತ್ತವನ್ನು ಇಟ್ಟಿಲಾಗುತ್ತದೆ, ನೀವು ಜನ್ ಧನ್ ಖಾತೆ ಹೊಂದಿದ್ದರೆ ಓವರ್ಡ್ರಾಫ್ಟ್ ಅಡಿಯಲ್ಲಿ ರೂ.10,000 ಪಡೆದುಕೊಳ್ಳಬಹುದು. ಡೆಬಿಟ್ ಕಾರ್ಡ್ ಆಧರಿಸಿ ವ್ಯಕ್ತಿಯು ATMನಿಂದ ಈ ಮೊತ್ತವನ್ನು ಹಿಂಪಡೆಯಬಹುದು. ಈ ಸೌಲಭ್ಯದ ಅಡಿಯಲ್ಲಿ ನಿಮ್ಮ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಇದ್ದರೂ ಸಹ ನೀವು ಮೊತ್ತವನ್ನು ಪಡೆದುಕೊಳ್ಳಬಹುದು, ಖಾತೆಯಲ್ಲಿ ಹೊಸ ಹಣ ಇಲ್ಲದಿದ್ದರೂ ಜನ್ ಧನ್ ಖಾತೆಯಿಂದ ರೂ.10,000 ಪಡೆಯಬಹುದಾಗಿದೆ. ಈ ಮೊತ್ತವನ್ನು ನಂತರ ಸ್ಥಿರ ಬಡ್ಡಿಯೊಂದಿಗೆ ಮರುಪಾವತಿ ಮಾಡಬಹುದಾಗಿದೆ. ಕೆಲವು ಬ್ಯಾಂಕ್ಗಳು ಈ ಮೊತ್ತಕ್ಕಿಂತ 10,000 ಓವರ್ಡ್ರಾಫ್ಟ್ ನೀಡಲಿದೆ. ಆದರೆ ಅದಕ್ಕಾಗಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಾಗುತ್ತದೆ.
ಬಡ್ಡಿ ಎಷ್ಟು ಇರುತ್ತದೆ?
ಜನ್ ಧನ್ ಗ್ರಾಹಕರು ಓವರ್ಡ್ರಾಫ್ಟ್ಗಳ ಮೇಲೆ 2-12 ಪ್ರತಿಶತದವರೆಗೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಸಹಜವಾಗಿ ಬಡ್ಡಿದರವು ಪ್ರತಿ ಬ್ಯಾಂಕ್ ಅವಲಂಬಿತವಾಗಿದೆ. ಆದರೆ ಬಡ್ಡಿ ದರವು 12 ಪ್ರತಿಶತವನ್ನು ಮೀರುವುದಿಲ್ಲ. ಬ್ಯಾಂಕ್ ರೂ.50,000 ಓವರ್ಡ್ರಾಫ್ಟ್ ಸೌಲಭ್ಯವನ್ನು ಹೊಂದಿದ್ದರೆ & ಗ್ರಾಹಕರು ರೂ.10,000 ಮಾತ್ರ ಹಿಂಪಡೆಯಬಹುದು. ಆದರೆ ನೀವು ತುರ್ತು ಸಂದರ್ಭದಲ್ಲಿ ಮಾತ್ರ ಓವರ್ಡ್ರಾಫ್ಟ್ ಸೌಲಭ್ಯವನ್ನು ಪಡೆದುಕೊಳ್ಳುವುದು ಉತ್ತಮವಾಗಿದೆ..
ಇತರೆ ವಿಷಯಗಳು
ಕೋಳಿ ಫಾರ್ಮ್ ತೆರೆಯಲು ಸರ್ಕಾರ ಕೊಡುತ್ತೆ ₹40 ಲಕ್ಷ ಸಬ್ಸಿಡಿ
ಸ್ವಂತ ಉದ್ಯೋಗ ಪ್ರಾರಂಭ ಮಾಡೋರಿಗೆ ಸಿಗುತ್ತೆ 1 ಲಕ್ಷ.! ಈ ದಾಖಲೆ ಇದ್ರೆ ಸೇವಾ ಸಿಂಧು ಪೋರ್ಟಲ್ ಭೇಟಿ ನೀಡಿ
1. ಜೀರೋ ಬ್ಯಾಲೆನ್ಸ್ ಇದ್ದರು ಎಷ್ಟು ಹಣ ಖಾತೆಗೆ ಬರುತ್ತದೆ?
10,000 ಖಾತೆಗೆ ಬರುತ್ತದೆ.
2. ತುರ್ತಾಗಿ ಹಣದ ಅವಶ್ಯವಿದ್ದರೆ ಯಾವ ಸೌಲಭ್ಯವನ್ನು ಬಳಸಿಕೊಳ್ಳಬಹುದು?
ಓವರ್ ಡ್ರಾಫ್ಟ್ ಸೌಲಭ್ಯವನ್ನು ಬಳಸಿಕೊಳ್ಳಬಹುದು.