ಹಲೋ ಸ್ನೇಹಿತರೇ, 10 ವರ್ಷಕ್ಕಿಂತ ಹಳೆಯದಾದ ಆಧಾರ್ ಕಾರ್ಡ್‌ಗಳ ಅಪ್ಡೇಟ್ ಕುರಿತು UIDAI ಹೊಸ ಮಾಹಿತಿ ತಿಳಿಸಿದೆ? ಅದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ನಿಮ್ಮ ಆಧಾರ್ 10 ವರ್ಷಕ್ಕಿಂತ ಹಳೆಯದಾಗಿದ್ದರೆ ಅಥವಾ ಅದನ್ನು ದೀರ್ಘಕಾಲದವರೆಗೆ ನವೀಕರಿಸದಿದ್ದರೆ,ಜೂನ್ 14ರ ನಂತರ ನಿಮ್ಮ ಆಧಾರ್ ನಿಷ್ಪ್ರಯೋಜಕವಾಗುತ್ತದೆ.ಕಳೆದ ಕೆಲವು ದಿನಗಳಿಂದ ಇಂತಹ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.10 ವರ್ಷಕ್ಕಿಂತ ಹಳೆಯದಾದ ಆಧಾರ್ ಕಾರ್ಡ್‌ಗಳನ್ನು ನವೀಕರಿಸುವ ಕುರಿತು ಇಂತಹ ಸಂದೇಶಗಳು ವೈರಲ್ ಆಗುತ್ತಿವೆ.ಆದರೆ, ಅಂಥಹ ಯಾವುದೇ ಮಾಹಿತಿಯನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದರೆ ಯುಐಡಿಎಐ ಇದುವರೆಗೆ ಬಿಡುಗಡೆ ಮಾಡಿಲ್ಲ.
Contents
10 ವರ್ಷ ಹಳೆಯ ಆಧಾರ್ ಕಾರ್ಡ್ ನಿಷ್ಪ್ರಯೋಜಕವಾಗುತ್ತಾ?
ಸತ್ಯವೆಂದರೆ 10 ವರ್ಷ ಅಥವಾ ಅದಕ್ಕಿಂತ ಹಳೆಯದಾದ ಆಧಾರ್ ಕಾರ್ಡ್‌ಗಳು ನಿಷ್ಪ್ರಯೋಜಕ ಅಥವಾ ಅಮಾನ್ಯವಾಗುವುದಿಲ್ಲ.ಈ ಆಧಾರ್ ಕಾರ್ಡ್‌ಗಳು ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತವೆ.ಹಾಗಿದ್ದರೆ ಜೂನ್ 14 ರ ದಿನಾಂಕ ಎಲ್ಲಿಂದ ಬಂತು ಎನ್ನುವುದು ಈಗ ಮೂಡುವ ಪ್ರಶ್ನೆ. ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು ಯುಐಡಿಎಐ ಜೂನ್ 14ರ ಗಡುವನ್ನು ನೀಡಿದೆ. ಅಂದರೆ. ಜೂನ್ 14 ರವರೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಉಚಿತವಾಗಿ ನವೀಕರಿಸಬಹುದು.ಈ ಸಂದೇಶವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಆಧಾರ್ ಕಾರ್ಡ್ ನಿಷ್ಪ್ರಯೋಜಕವಾಗಲಿದೆ ಎನ್ನುವ ಸಂದೇಶ ಫಾರ್ವರ್ಡ್ ಮಾಡಲಾಗುತ್ತಿದೆ.
ಜೂನ್ 14ರ ನಂತರ ಈ ಸೇವೆ ಲಭ್ಯವಿರುವುದಿಲ್ಲ
ಜೂನ್ 14 ರವರೆಗೆ ಆನ್‌ಲೈನ್‌ನಲ್ಲಿ ಆಧಾರ್ ಅನ್ನು ನವೀಕರಿಸಲು ಒಂದು ಪೈಸೆಯನ್ನೂ ಖರ್ಚು ಮಾಡಬೇಕಾಗಿಲ್ಲ.ಈ ಗಡುವಿನ ನಂತರ, ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸ,ಹೆಸರು ನವೀಕರಿಸಿದರೆ,ಅದಕ್ಕೆ 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ನವೀಕರಿಸಲು ಬಯಸಿದರೆ, ಜೂನ್ 14ರ ಮೊದಲು ಡಾಕ್ಯುಮೆಂಟ್ ಆನ್‌ಲೈನ್‌ನಲ್ಲಿ ಅಪ್ಡೇಟ್ ಮಾಡುವ ಮೂಲಕ ಉಚಿತವಾಗಿ ಮಾಡಬಹುದಾಗಿದೆ
ಶುಲ್ಕಗಳು ಆಫ್‌ಲೈನ್‌ನಲ್ಲಿ ಅನ್ವಯಿಸುತ್ತವೆ
ಆನ್‌ಲೈನ್ ಸೇವೆಗೆ ಮಾತ್ರ ಉಚಿತ ಅಪ್ಡೇಟ್ ಸೌಲಭ್ಯ ಲಭ್ಯವಿದೆ. ನೀವು ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಆಫ್‌ಲೈನ್‌ನಲ್ಲಿ ಅಪ್ಡೇಟ್ ಮಾಡಿದರೆ, 50 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. 50 ರೂ. ಶುಲ್ಕವನ್ನು ಪಾವತಿಸುವ ಮೂಲಕ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನಿಮ್ಮ ಜನಸಂಖ್ಯಾ / ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಬೇಕು. ಆಧಾರ್‌ನಲ್ಲಿ ಯಾವುದೇ ಬದಲಾವಣೆಯನ್ನು ಮಾಡಲು ಬಯಸಿದರೆ ಯಾವುದೇ ಶುಲ್ಕವಿಲ್ಲದೆ ಆನ್‌ಲೈನ್‌ನಲ್ಲಿ ಜನವರಿ 14 ರ ಮೊದಲು ಆನ್ಲೈನ್ ನಲ್ಲಿಯೇ ಮಾಡುವುದು ಉತ್ತಮ.
ಇತರೆ ವಿಷಯಗಳು
60 ವರ್ಷಗಳ ಪೂರೈಸುವ ಮೊದಲೇ ಸಿಗಲಿದೆ ಪಿಂಚಣಿ! ಸರ್ಕಾರದ ನ್ಯೂ ರೂಲ್ಸ್
ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ 2024.! ನೇರ ವಿದ್ಯಾರ್ಥಿಯ ಖಾತೆಗೆ ಹಣ ಜಮಾ