rtgh

ಎಚ್ಚರ ರಾಜ್ಯದಲ್ಲಿ ಸುರಿಯಲಿದೆ ಗುಡುಗು ಸಹಿತ ವಿಪರೀತ ಮಳೆ.! ಇದಿಷ್ಟು ಜಿಲ್ಲೆಗಳಿಗೂ ಎಲ್ಲೋ ಅಲರ್ಟ್

weather forecast karnataka
Share

ಹಲೋ ಸ್ನೇಹಿತರೇ, ದೇಶದಲ್ಲಿ ಮುಂಗಾರು ವಾಡಿಕೆಗಿಂತ ಶೇ.20ರಷ್ಟು ಕಡಿಮೆಯಾಗಿದ್ದು, ದೇಶದ ಕೃಷಿ ವಲಯದ ಮೇಲೆ ಪರಿಣಾಮ ಬೀಳುವ ಆತಂಕ ಸೃಷ್ಟಿಸಿದೆ. ಮಳೆಯ ಬಗ್ಗೆ ಎಲ್ಲೆಲ್ಲಿ ಎಷ್ಟೆಷ್ಟು ಸುರಿಯಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ

weather forecast karnataka

ಹವಾಮಾನ ಇಲಾಖೆ ಹೇಳುವ ಪ್ರಕಾರ, ಜೂನ್‌ 1 ರಿಂದ ಭಾರತದಲ್ಲಿ ಸಾಮಾನ್ಯಕ್ಕಿಂತ ಶೇ.20 ಕಡಿಮೆ ಮಳೆಯಾಗಿದೆ. ದಕ್ಷಿಣದ ಕೆಲವು ರಾಜ್ಯಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಪ್ರದೇಶಗಳಲ್ಲೂ ಮಳೆ ಕೊರತೆಯಾಗಿದೆ. ವಾಯುವ್ಯ ರಾಜ್ಯಗಳು ಬಿಸಿಲಿನ ಬೇಗೆಯಲ್ಲಿ ಬೇಯುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ದಕ್ಷಿಣದಲ್ಲಿ ಶೇ.17ರಷ್ಟು ಹೆಚ್ಚು ಮಳೆ:

ಸೋಯಾಬೀನ್‌, ಹತ್ತಿ, ಕಬ್ಬು & ದ್ವಿದಳ ಧಾನ್ಯಗಳನ್ನು ಬೆಳೆಯುವ ಮಧ್ಯ ಭಾರತದಲ್ಲಿ ಮಳೆ ಕೊರತೆಯು ಶೇ.29ಕ್ಕೇರಿದೆ. ಆದರೆ, ಭತ್ತ ಬೆಳೆಯುವ ದಕ್ಷಿಣ ಪ್ರದೇಶದಲ್ಲಿ ಮಾನ್ಸೂನ್‌ ನಿರೀಕ್ಷೆಗಿಂತಲೂ ಮೊದಲು ಪ್ರಾರಂಭವಾದ ಕಾರಣ ಸಾಮಾನ್ಯಕ್ಕಿಂತ ಶೇ.17ರಷ್ಟು ಹೆಚ್ಚು ಮಳೆಯಾಗಿದೆ. ಈಶಾನ್ಯದಲ್ಲಿ ಇದುವರೆಗೆ ವಾಡಿಕೆಗಿಂತ ಶೇ.20ರಷ್ಟು ಕಡಿಮೆ ಮಳೆಯಾಗಿದೆ & ವಾಯುವ್ಯದಲ್ಲಿ ಶೇ.68ರಷ್ಟು ಕಡಿಮೆಯಾಗಿದೆ.

ಕರಾವಳಿ ಜಿಲ್ಲೆಗಳಿಗೆ ಯೆಲ್ಲೊಅಲರ್ಟ್‌

ರಾಜ್ಯದ ಕರಾವಳಿಯಲ್ಲಿ ಮಂಗಳವಾರ ವ್ಯಾಪಕ ಮಳೆಯಾಗಲಿದ್ದು, ಹವಾಮಾನ ಇಲಾಖೆ ದಕ್ಷಿಣ ಕನ್ನಡ, ಉಡುಪಿ & ಉತ್ತರ ಕನ್ನಡ ಜಿಲ್ಲೆಗೆ ಯೆಲ್ಲೊ ಅಲರ್ಟ್‌ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂ.18 ರಿಂದ 23 ರವರೆಗೂ ವ್ಯಾಪಕ ಮಳೆಯಾಗಲಿದೆ. ಉಳಿದಂತೆ ಉತ್ತರ & ದಕ್ಷಿಣ ಒಳನಾಡಿನಲ್ಲಿ ಜೂ.18 & 19 ರಂದು ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇತರೆ ವಿಷಯಗಳು

New criminal laws: ಜುಲೈ 1 ರಿಂದ ದೇಶದಲ್ಲಿ ಹೊಸ ಕ್ರಿಮಿನಲ್‌ ಕಾನೂನು ಜಾರಿ!

ಇಂದು ದೇಶದ 9.26 ಕೋಟಿ ರೈತರಿಗೆ ಬಂಪರ್! ಪಿಎಂ ಕಿಸಾನ್‌‌ 17ನೇ ಕಂತಿನ ಹಣ ಬಿಡುಗಡೆ


Share

Leave a Reply

Your email address will not be published. Required fields are marked *